

Most expensive players in IPL: ಇನ್ನು ಕೆಲವೇ ವಾರಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ನ ಮೆಗಾ ಹರಾಜು ನಡೆಯಲಿದೆ. ಇದೇ ಅಕ್ಟೋಬರ್ 31ರಂದು ಸಂಜೆ 5 ಗಂಟೆಯೊಳಗೆ ಎಲ್ಲ ಐಪಿಎಲ್ ಫ್ರಾಂಚೈಸಿಗಳು ತಮ್ಮ ರಿಟೇನ್ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಯ ಮುಂದೆ ಸಲ್ಲಿಸಬೇಕಿದೆ. ಐಪಿಎಲ್ ಹರಾಜಿನ ಮೇಲೆ ಎಲ್ಲರ ಕಣ್ಣುಬಿದ್ದಿದ್ದು, ಈ ಬಾರಿ ದುಬಾರಿ ಆಟಗಾರನ ಪಟ್ಟ ಯಾರು ಪಡೆಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಸದ್ಯ ನಾವೀಗ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರು ಯಾರು ಯಾರು ಎಂಬುದನ್ನು ನೋಡೋಣ. ಪ್ರಸ್ತುತ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಕ್ಯಾಶ್ ರಿಚ್ ಲೀಗ್ನಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. 2024ರ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ( KKR ) ತಂಡ ಸ್ಟಾರ್ಕ್ ಅವರನ್ನು ಬರೋಬ್ಬರಿ 24.75 ಕೋಟಿ ರೂ. ಕೊಟ್ಟು ಖರೀದಿ ಮಾಡಿತು. ಇದು ಐಪಿಎಲ್ನಲ್ಲಿ ಆಟಗಾರನಿಗೆ ಸಂದಾಯವಾದ ಅತ್ಯಧಿಕ ಬೆಲೆಯಾಗಿದೆ.
ಅದೇ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ( SRH ) ತಂಡ ಪ್ಯಾಟ್ ಕಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಬೆಲೆಯಾಗಿದೆ. ಸ್ಟಾರ್ಕ್ ಮತ್ತು ಕಮ್ಮಿನ್ಸ್ ನಂತರ, ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕುರ್ರಾನ್ ಐಪಿಎಲ್ನಲ್ಲಿ ಅತಿ ಹೆಚ್ಚು ಬೆಲೆ ಪಡೆದಿದ್ದಾರೆ. 2023 ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಕರ್ರನ್ ಅವರನ್ನು 18.5 ಕೋಟಿ ರೂ.ಗೆ ಖರೀದಿ ಮಾಡಿತು.
* ಸ್ಯಾಮ್ ಕರ್ರಾನ್ ನಂತರದಲ್ಲಿ ಕ್ಯಾಮರೂನ್ ಗ್ರೀನ್- 17.50 ಕೋಟಿ ರೂ. ( RCB, 2023 )
* ಬೆನ್ ಸ್ಟೋಕ್ಸ್ 16.25 ಕೋಟಿ ರೂ. ( CSK 2023 )
* ಕ್ರಿಸ್ ಮೋರಿಸ್ - 16.25 ಕೋಟಿ ರೂ. ( ರಾಜಸ್ಥಾನ್ ರಾಯಲ್ಸ್, 2021 )
* ಯುವರಾಜ್ ಸಿಂಗ್ - 16 ಕೋಟಿ ರೂ. ( ದೆಹಲಿ ಕ್ಯಾಪಿಟಲ್ಸ್, 2015 )
* ನಿಕೋಲಸ್ ಪೂರನ್ - 16 ಕೋಟಿ ರೂ. ( ಲಖನೌ, 2023 )
* ಪ್ಯಾಟ್ ಕಮ್ಮಿನ್ಸ್ - 15.50 ಕೋಟಿ ರೂ. ( ಕೆಕೆಆರ್, 2020 )
* ಇಶಾನ್ ಕಿಶನ್ - 15.25 ಕೋಟಿ ರೂ. ( ಮುಂಬೈ ಇಂಡಿಯನ್ಸ್, 2022)
ಈ ಮೇಲಿನ ಆಟಗಾರರು ಅತ್ಯಂತ ದುಬಾರಿ ಟಾಪ್-10 ಆಟಗಾರರಾಗಿದ್ದಾರೆ.
* 2008 : MS ಧೋನಿ (CSK), 9.5 ಕೋಟಿ ರೂ.
* 2009 : ಕೆವಿನ್ ಪೀಟರ್ಸನ್ (RCB), ಆಂಡ್ರ್ಯೂ ಫ್ಲಿಂಟಾಫ್ (CSK), 9.8 ಕೋಟಿ ರೂ.
* 2010 : ಶೇನ್ ಬಾಂಡ್ (ಕೆಕೆಆರ್), ಕೀರನ್ ಪೊಲಾರ್ಡ್ (ಮುಂಬೈ ಇಂಡಿಯನ್ಸ್), 4.8 ಕೋಟಿ ರೂ.
* 2011 : ಗೌತಮ್ ಗಂಭೀರ್ (ಕೆಕೆಆರ್), 14.9 ಕೋಟಿ ರೂ.
* 2012 : ರವೀಂದ್ರ ಜಡೇಜಾ (CSK), 12.8 ಕೋಟಿ ರೂ.
* 2013 : ಗ್ಲೆನ್ ಮ್ಯಾಕ್ಸ್ವೆಲ್ (ಮುಂಬೈ ಇಂಡಿಯನ್ಸ್), 6.3 ಕೋಟಿ ರೂ.
* 2014 : ಯುವರಾಜ್ ಸಿಂಗ್ (RCB) 14 ಕೋಟಿ ರೂ.
* 2015 : ಯುವರಾಜ್ ಸಿಂಗ್ (ಡೆಲ್ಲಿ ಡೇರ್ ಡೆವಿಲ್ಸ್), 16 ಕೋಟಿ ರೂ.
* 2016 : ಶೇನ್ ವ್ಯಾಟ್ಸನ್ (RCB), 9.5 ಕೋಟಿ ರೂ.
* 2017 : ಬೆನ್ ಸ್ಟೋಕ್ಸ್ (ರೈಸಿಂಗ್ ಪುಣೆ ಜೈಂಟ್ಸ್), 14.5 ಕೋಟಿ ರೂ.
* 2018 : ಬೆನ್ ಸ್ಟೋಕ್ಸ್ (ರಾಜಸ್ಥಾನ್ ರಾಯಲ್ಸ್), 12.5 ಕೋಟಿ ರೂ.
* 2019 : ಜಯದೇವ್ ಉನದ್ಕತ್ (ರಾಜಸ್ಥಾನ), ವರುಣ್ ಚಕ್ರವರ್ತಿ (ಪಂಜಾಬ್), 8.4 ಕೋಟಿ ರೂ.
* 2020 : ಪ್ಯಾಟ್ ಕಮ್ಮಿನ್ಸ್ (ಕೆಕೆಆರ್), 15.5 ಕೋಟಿ ರೂ.
* 2021 : ಕ್ರಿಸ್ ಮೋರಿಸ್ (ರಾಜಸ್ಥಾನ), 16.25 ಕೋಟಿ ರೂ.
* 2022 : ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್), 15.25 ಕೋಟಿ ರೂ.
* 2023 : ಸ್ಯಾಮ್ ಕರ್ರಾನ್ (ಪಂಜಾಬ್ ಕಿಂಗ್ಸ್), 18.5 ಕೋಟಿ ರೂ.
* 2024 : ಮಿಚೆಲ್ ಸ್ಟಾರ್ಕ್ (ಕೆಕೆಆರ್), 24.75 ಕೋಟಿ ರೂ.
ಇದೇ ಸಂದರ್ಭದಲ್ಲಿ ಈ ವರ್ಷ ಎಲ್ಲ ಐಪಿಎಲ್ ಫ್ರಾಂಚೈಸಿಗಳು ತಮ್ಮ ರಿಟೀನ್ ಪಟ್ಟಿಯನ್ನು ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಪ್ರಸ್ತುತ ಮಾಹಿತಿಯ ಪ್ರಕಾರ, ಪ್ರತಿ ಫ್ರಾಂಚೈಸ್ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು. ಗರಿಷ್ಠ ಐವರು ಕ್ಯಾಪ್ಡ್ ಆಟಗಾರರು ಮತ್ತು ಇಬ್ಬರು ಅನ್ ಕ್ಯಾಪ್ಡ್ ಆಟಗಾರರು ಇರುತ್ತಾರೆ. ಐಪಿಎಲ್-2025 ಹರಾಜು ನವೆಂಬರ್ 25 ಅಥವಾ 26 ರಂದು ರಿಯಾದ್ನಲ್ಲಿ ನಡೆಯುವ ಸಾಧ್ಯತೆಯಿದೆ. (ಏಜೆನ್ಸೀಸ್)