

Kolkata : ಯುವತಿಯೊಬ್ಬಳು ತನ್ನ ಮೊಬೈಲ್ ಫೋನ್ನ್ನು ರಿಪೇರಿ ಮಾಡಲು ಸ್ಥಳೀಯ ಅಂಗಡಿಗೆ ಕೊಟ್ಟಾಗ ಅಂಗಡಿಯ ಕೆಲಸಗಾರನೊಬ್ಬ ಆಕೆಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತ್ತ ಮೂಲದ ಯುವತಿಯೊಬ್ಬಳು ತಾಂತ್ರಿಕ ಸಹಾಯಕ್ಕಾಗಿ ತನ್ನ ಮೊಬೈಲ್ ಫೋನ್ನ್ನು ಸ್ಥಳೀಯ ಅಂಗಡಿಗೆ ನೀಡಿದ್ದಳು. ಆದರೆ, ಅಲ್ಲಿನ ಸಿಬ್ಬಂದಿ ಆಕೆಯ ಮೊಬೈಲ್ನ್ನು ಸರಿಪಡಿಸುವ ಬದಲು, ಆಕೆಯ ಅನುಮತಿಯಿಲ್ಲದೆ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎಂದು ಆರೋಪಿಸಿದ್ದಾಳೆ.
ಇನ್ನು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಯುವತಿಯು ಅನೇಕ ಕಿರುಕುಳ ಸಂದೇಶಗಳು ಬರುತ್ತಿದ್ದು, ಆಕೆ ಸಂಪೂರ್ಣ ಪ್ರತ್ಯೇಕತೆಯನ್ನು ಒಳಗಾಗಿದ್ದಾಳೆ.
Reddit ತಾಣದ ಬಳಕೆದಾರಳಾದ ಯುವತಿಯು ಈ ಘಟನೆ ತನ್ನ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ವಿವರಿಸಿದ್ದು, ನಾನು ಈಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೇನೆ. ವಿಡಿಯೋಗಳು ಜಾಲತಾಣಗಳಲ್ಲಿ ಬಂದ ನಂತರ ನನ್ನ ಪಾಲಕರು ನನ್ನೊಂದಿಗೆ ಮಾತನಾಡುತ್ತಿಲ್ಲ. ನಾನು ನನ್ನ ಸಾಮಾಜಿಕ ಮಾಧ್ಯಮಲ್ಲಿ ಖಾತೆಗಳನ್ನು ಅಳಿಸಿಹಾಕಿದ್ದೇನೆ. ಈ ತಾಣಗಳಲ್ಲಿ ಬಹಳ ಕಿರಿ ಅನುಭವಿಸಿದ್ದು, ಈಗ ಎಲ್ಲರಿಂದಲೂ ಸಂಪೂರ್ಣವಾಗಿ ದೂರ ಉಳಿದಿದ್ದೇನೆ ಎಂದು ಬರೆದುಕೊಂಡ ನಂತರ, ಆಕೆಗೆ ಬಂದ ಸಂದೇಶಗಳ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದಾರೆ.
ಗೌಪ್ಯತೆ ಹಂಚಿಕೆಯ ಆರೋಪದ ಮೇರೆಗೆ ಯುವತಿಯು ಆ ಮೊಬೈಲ್ ರಿಪೇರಿ ಅಂಗಡಿಯ ಕೆಲಸಗಾರರ ಮೇಲೆ ದೂರು ಕೋಲ್ಕತ್ತಾ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಇನ್ನು ಆರೋಪಿಗಳ ವಿಚಾರಣೆಗೆ ಪೊಲಿಸರು ಮುಂದಾಗಿದ್ದಾರೆ. (ಏಜೆನ್ಸೀಸ್)