ರಾತ್ರಿ ಮಲಗಿದಾಗ ನಿಮಗೆ ನಿದ್ರೆ ಬರುತಿಲ್ಲವೇ? ಹಾಗಿದ್ದರೆ ಈ 10 ಸಲಹೆಗಳನ್ನು ಪಾಲಿಸಿ! | health tips

sleep
Published on

health tips: ನಮ್ಮಲ್ಲಿ ಹೆಚ್ಚಿನ ಜನರು ರಾತ್ರಿ ಊಟ ಮಾಡಿ ಮಲಗಿದ ನಂತರ ಬೆಳಿಗ್ಗೆ ಏಳುವಾಗ ಭಾರವಾದ ಅನುಭವವನ್ನು ಅನುಭವಿಸುತ್ತಾರೆ. ದೇಹವು ಭಾರವಾದ ಎಣ್ಣೆಯಿಂದ ಕೂಡಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡುತ್ತದೆ. ಇದು ನಿದ್ರೆಗೆ ಕಾರಣವಾಗಬಹುದು. ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಸುವುದರ ಮೂಲಕ ನಿದ್ರೆಯನ್ನು ಸುಧಾರಿಸಬಹುದು. ಈ ಕೆಲವು ಸುಧಾರಣೆಗಳನ್ನು ನಿಮ್ಮಲ್ಲಿ ರೂಢಿಸಿಕೊಂಡರೆ, ನೀವು ಆರಾಮವಾಗಿ ಮಲಗಲು ಸಾಧ್ಯವಾಗುತ್ತದೆ.

ನಿದ್ರೆಗೆ ವೇಳಾಪಟ್ಟಿ ರೂಢಿಸಿ

ನೀವು ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಎದ್ದೇಳುವುದನ್ನು ರೂಢಿಮಾಡಿಕೊಳ್ಳಿ. ಇದು ದೇಹವನ್ನು ಸಮತೋಲನದಲ್ಲಿಟ್ಟು, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ವಾರಾಂತ್ಯದಲ್ಲೂ ಈ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳುವುದರಿಂದ ದೇಹವು ಸಹಾಯ ಮಾಡುತ್ತದೆ.

ನಿದ್ರೆಗೆ ಸೂಕ್ತ ವಾತಾವರಣ

ಮಲಗುವ ಕೋಣೆಯನ್ನು ಮೊದಲು ತಂಪಾಗಿ ಕತ್ತಲಾಗಿ ಮತ್ತು ಶಾಂತವಾಗಿರುವಂತೆ ನೋಡಿಕೊಳ್ಳಿ. ಗುಣಮಟ್ಟದ ಹಾಸಿಗೆ, ದಿಂಬು ಮತ್ತು ಹೊದಿಕೆಗಳನ್ನು ಬಳಸಿ. ಇದರಿಂದ ನೀವು ಮಲಗಲು ಸಹಾಯವಾಗುತ್ತದೆ.

ಪರದೆ ಸಮಯವನ್ನು ಕಡಿಮೆ ಮಾಡಿ

ಮಲಗುವ ಮುಂಚೆ ಕನಿಷ್ಠ ಒಂದು ಗಂಟೆಯಾದರೂ ಮೊಬೈಲ್, ಕಂಪ್ಯೂಟರ್ ಅಥವಾ ಟಿವಿಯಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೋಡುವುದನ್ನು ಬಿಡಿ. ಈ ಯಂತ್ರಗಳಿಂದ ಹೊರಸೂಸುವ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ತಡೆಯುತ್ತದೆ, ಇದು ನಿದ್ರೆಗೆ ಭಂಗ ತರುತ್ತದೆ. ಆದರಿಂದ ಇವುಗಳನ್ನು ನೋಡುವ ಬದಲಿಗೆ ಪುಸ್ತಕಗಳನ್ನು ಓದಿ.

ಆಹಾರದಲ್ಲಿ ನಿಯಂತ್ರಣ

ರಾತ್ರಿ ಕಾಫಿ, ಟೀ, ಎನರ್ಜಿ ಡ್ರಿಂಕ್‌ಗಳು ಅಥವಾ ಆಲ್ಕೊಹಾಲ್ ಸೇವನೆಯನ್ನು ತಪ್ಪಿಸಿ. ಕೆಫೀನ್ ದೇಹದಲ್ಲಿ ಗಂಟೆಗಟ್ಟಲೆ ಇರಬಹುದು, ಆದ್ದರಿಂದ ಸಂಜೆಯ ನಂತರ ಇದರ ಸೇವನೆಯನ್ನು ಬಿಡಿ. ಬೆಚ್ಚಗಿನ ಹಾಲು, ಗ್ರೀನ್​ ಟೀಗಳು ನಿದ್ರೆಗೆ ಸಹಾಯಕವಾಗಿವೆ.

ಕಡಿಮೆ ವ್ಯಾಯಾಮ

ದಿನದಲ್ಲಿ ಮಾಡುವ ವ್ಯಾಯಾಮವು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಆದರೆ, ರಾತ್ರಿಯ ಸಮಯದಲ್ಲಿ ತೀವ್ರವಾದ ವ್ಯಾಯಾಮವನ್ನು ಮಾಡಬೇಡಿ. ಏಕೆಂದರೆ ಇದು ದೇಹವನ್ನು ಉತ್ತೇಜಿಸಬಹುದು. ಲಘು ಯೋಗ ಮಾಡುವುದು ಉತ್ತಮ.

ಮನಸ್ಸಿಗೆ ಶಾಂತಿ ನೀಡಿಕೊಳ್ಳಿ

ಒತ್ತಡವು ನಿದ್ರೆಗೆ ದೊಡ್ಡ ಅಡ್ಡಿಯಾಗಿದೆ. ಮಲಗುವ ಮುಂಚೆ ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮ ಅಥವಾ ಲಘು ಯೋಗವನ್ನು ಅಭ್ಯಾಸ ಮಾಡಿ. ಒಂದು ಡೈರಿಯಲ್ಲಿ ಆ ದಿನದ ಮಾಡಿದ ಕೆಲಸಗಳನ್ನು ಬರೆದಿಟ್ಟರೆ ಮನಸ್ಸು ಶಾಂತವಾಗುತ್ತದೆ.

ನಿದ್ರೆಗೆ ದಿನಚರಿ ಮಾಡಿಕೊಳ್ಳಿ

ಮಲಗುವ ಮುನ್ನ ಶಾಂತಗೊಳಿಸುವ ಚಟುವಟಿಕೆಗಳನ್ನು ರೂಢಿಸಿಕೊಳ್ಳಿ, ಉದಾಹರಣೆಗೆ, ಪುಸ್ತಕ ಓದುವುದು, ಬೆಚ್ಚಗಿನ ಸ್ನಾನ ಮಾಡುವುದು ಅಥವಾ ಸಂಗೀತ ಕೇಳುವುದು. ಇದು ದೇಹವನ್ನು ನಿದ್ರೆಗೆ ಸಿದ್ಧಗೊಳಿಸುತ್ತದೆ.

ಮಲಗಿದಾಗಲು ನಿದ್ರೆ ಬರದಿದ್ದರೆ

ನೀವು ಮಲಗುವಾಗ ನಿದ್ರೆ ಬಾರದಿದ್ದರೆ, ಹಾಸಿಗೆಯಿಂದ ಎದ್ದು ಶಾಂತವಾದ ಚಟುವಟಿಕೆಗಳನ್ನು ಮಾಡಿ, ಉದಾಹರಣೆಗೆ ಓದುವುದು, ಕೆಲವು ನಿಮಿಷ ನಡೆದಾಡುವುದನ್ನು ಮಾಡಿದಾಗ ನಿದ್ರೆ ಬರಬಹುದು.

ನೀರಿನ ಸೇವನೆ ಕಡಿಮೆ ಮಾಡಿ

ರಾತ್ರಿಯಲ್ಲಿ ಆಗ್ಗಾಗ ಜಾಸ್ತಿ ನೀರು ಸೇವನೆ ಮಾಡುವುದರಿಂದ ಮೂತ್ರವಿಸರ್ಜನೆಗೆ ಎದ್ದೇಳ ಬೇಕಾಗುತ್ತದೆ. ಹಾಗಾಗಿ ಮಲಗುವ 2 ಗಂಟೆಗಳ ಮುನ್ನವೇ ಅತಿಯಾಗಿ ನೀರು ಕುಡಿಯುವುದನ್ನು ತಪ್ಪಿಸಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net