ಉಪ್ಪಿನ ಕಣಕ್ಕಿಂತಲೂ ಚಿಕ್ಕದಾದ ಬ್ಯಾಗ್ 52 ಲಕ್ಷ ರೂ.ಗೆ ಹರಾಜು..!

world smallest bag
Published on

ದೆಹಲಿ: ಉಪ್ಪಿನ ಕಣಕ್ಕಿಂತ ಚಿಕ್ಕದಾಗಿರುವ ಮೈಕ್ರೋಸ್ಕೋಪ್ ಮೂಲಕವಷ್ಟೇ ನೋಡಬಹುದಾದ ವಿಶ್ವದ ಅತ್ಯಂತ ಸಣ್ಣ ಬ್ಯಾಗ್ ಹರಾಜಿನಲ್ಲಿ ಬರೋಬ್ಬರಿ 51 ಲಕ್ಷ ರೂ.ಗೆ ಮಾರಾಟವಾಗಿದ್ದು, ಇದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

3D ಪ್ರಿಂಟ್ ಮೈಕ್ರೋ-ಸ್ಕೇಲ್ ಪ್ಲಾಸ್ಟಿಕ್ ಭಾಗಗಳಿಗೆ ಬಳಸಲಾಗುವ ಫೋಟಾನ್ ಎರಡು​ ತಂತ್ರಗಳನ್ನು ಸಂಯೋಜಿಸಿ, ನ್ಯೂಯಾರ್ಕ್ ಆರ್ಟ್ ಕಲೆಕ್ಟಿವ್ ಈ ಚಿಕ್ಕ ಚೀಲವನ್ನು ನಿರ್ಮಾಣ ಮಾಡಿದ್ದು ಇದು ಆನ್‌ಲೈನ್ ಹರಾಜಿನಲ್ಲಿ ರೂ. 51.6 ಲಕ್ಷಕ್ಕೆ ಮಾರಾಟವಾಗಿದೆ.

ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್ ಆರ್ಟ್ ಕಲೆಕ್ಟಿವ್ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿ ಇದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಖರೀದಿದಾರರು ಇದನ್ನು ವೀಕ್ಷಿಸಲು ಡಿಜಿಟಲ್ ಡಿಸ್​​ಪ್ಲೇ ಹೊಂದಿರುವ ಸೂಕ್ಷ್ಮದರ್ಶಕದ ಅಗತ್ಯತೆವಿದ್ದು, ಇದರ ಗಾತ್ರ ಕೇವಲ 657×222×700 ಮೈಕ್ರೋಮೀಟರ್‌ ಆಗಿದೆ. ಲೂಯಿಸ್​ ವಿಟಾನ್​ ಬ್ಯಾಗ್​ ತುಂಬಾ ಚಿಕ್ಕದಾಗಿದ್ದು, ಇದು ಸೂಜಿಯ ರಂಧ್ರದ ಮೂಲಕ ಹಾದುಹೋಗುತ್ತದೆ.

ಲೂಯಿ ವಿಟಾನ್ ಅಂತರಾಷ್ಟ್ರೀಯ ಐಷಾರಾಮಿ ಬ್ರಾಂಡ್ ಆಗಿದ್ದು, ಇದರ ಬ್ಯಾಗ್​ನ ಚೀಲದ ಬೆಲೆ ಲಕ್ಷಗಟ್ಟಲೇ ಇದೆ. ಶ್ರೀಮಂತ ಮತ್ತು ದೊಡ್ಡ ಸೆಲೆಬ್ರಿಟಿಗಳು ಅದರ ಚೀಲಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net