ಬೆಂಗಳೂರು: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆ ಬೇಲೂರು ಮತ್ತು ಹಳೆಬೀಡಿನಲ್ಲಿರುವ ಹಾಗೂ ಮೈಸೂರು ಜಿಲ್ಲೆ ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳು ಸ್ಥಾನ ಪಡೆದಿವೆ.
ಸೋಮನಾಥಪುರಲ್ಲಿರುವ ಕೇಶವ ದೇವಸ್ಥಾನ, ಬೇಲೂರಿನಲ್ಲಿರುವ ಚನ್ನಕೇಶವ ದೇವಸ್ಥಾನ ಹಾಗೂ ಹಳೆಬೀಡಿನಲ್ಲಿರುವ ಹೊಯ್ಸಳೇವರ ದೇವಸ್ಥಾನಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿವೆ. ಇದು ಕನ್ನಡಿಗರ ಪಾಲಿಗೆ ಹೆಮ್ಮೆ ಸಂಗತಿಯಾಗಿದೆ.
The Sacred Ensembles of Hoysalyas in Karnataka have now become India’s 42nd inscription on the #WorldHeritage List!!
The site includes three temple complexes dating from the 12th to 13th centuries built during the Hoysala Kingdom in southern India.#Heritage #Culture pic.twitter.com/0Hisqefto2
— UNESCO New Delhi 🏛️ #Education #Sciences #Culture (@unesconewdelhi) September 18, 2023
ಈ ದೇವಾಲಯಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ 2022-23ರಲ್ಲಿ ಸೇರಿಸುವ ಸಂಬಂಧ ಕೇಂದ್ರದ ಸಂಸ್ಕೃತಿ ಮತ್ತು ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಸಚಿವಾಲಯ ಭಾರತದಿಂದ ನಾಮನಿರ್ದೇಶನ ಮಾಡಿ 2022ರ ಫೆಬ್ರವರಿ ತಿಂಗಳಲ್ಲಿ ಕಳುಹಿಸಿತ್ತು. ಕೇಂದ್ರದ ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ ಈ ವಿಚಾರವನ್ನು ಅಂದಿನ ಟ್ವಿಟ್ಟರ್ (ಪ್ರಸ್ತುತ ಎಕ್ಸ್) ನಲ್ಲಿ ತಿಳಿಸಿದ್ದರು.
The most exquisite Hoysala Temples of Belur, Halebid & Somnathapura in Karnataka have been finalised as India’s nomination for consideration as World Heritage for the year 2022-2023.
The ‘Sacred Ensembles of the Hoysala’ are on the @UNESCO’s Tentative list since 15th April, 2014 pic.twitter.com/rtVAS3VQnc
— G Kishan Reddy (@kishanreddybjp) January 31, 2022
ಈ ದೇವಾಲಯಗಳು ಕಲೆ, ವಾಸ್ತುಶಿಲ್ಪ, ಸಂಸ್ಕೃತಿಯ ಪ್ರತೀಕವಾಗಿದ್ದು, ಪ್ರಸ್ತುತ ಮೂರು ಸ್ಮಾರಕಗಳು ಯುನೆಸ್ಕೋ ತಾಣವಾಗಿ ಘೋಷಣೆಯಾಗಿವೆ. 12-13 ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಶೈಲಿಯ ಶಿಲ್ಪಕಲಾ ಶೈಲಿಯ ದೇಗುಲಗಳು, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಮೂರು ದೇವಾಲಯಗಳಿಂದ ಇಲ್ಲಿ ಪ್ರತಿನಿಧಿಸಲ್ಪಟ್ಟಿದೆ.
ಗ್ರಾಚ್ಯುಟಿ ಮಿತಿ ಹೆಚ್ಚಳ, ಕುಟುಂಬ ಪಿಂಚಣಿ: LIC ಏಜೆಂಟರು, ಉದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ