ಬೆಂಗಳೂರು: ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್, ನಟ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ಬಹುನಿರೀಕ್ಷಿತ ‘ಯುಐ’ ಸಿನಿಮಾದ ಟೀಸರ್ ಇಂದು ಊರ್ವಶಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದ್ದು, ಇದೀಗ ಯೂಟ್ಯೂಬ್ನಲ್ಲಿ ಅಧಿಕೃತವಾಗಿ ವೀಕ್ಷಕರ ಮುಂದೆ ಹಾಜರಾಗಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಹೆಸರು ತಳಕು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟನೆ ಹೀಗಿದೆ…
ನಿರ್ದೇಶಕ ಉಪೇಂದ್ರ ಅವರ ‘ಯುಐ’ ಟೀಸರ್ಗೆ ಬಹು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಟೀಸರ್ ಅಧಿಕೃತವಾಗಿ ತೆರೆ ಕಂಡಿದೆ. ಸೆ.18 ರಂದು ಉಪ್ಪಿ ಜನ್ಮದಿನದಂದು ಬಿಡುಗಡೆಗೊಳಿಸಲು ಯೋಜನೆ ನಡೆಸಿದ್ದ ಚಿತ್ರತಂಡ, ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆಂದೇ ವಿಶೇಷ ಕಾರ್ಯಕ್ರವನ್ನು ಆಯೋಜಿಸಿತ್ತು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ‘ಯುಐ’ ಚಿತ್ರದ ಟೀಸರ್ ಅನಾವರಣಗೊಳಿಸಿದರು. ಇಂದು 6:30ರ ವೇಳೆಗೆ ಲಹರಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡ ಟೀಸರ್ ನೋಡಿದ ಅಭಿಮಾನಿಗಳು ಇದೀಗ ಶಾಕ್ ಆಗಿದ್ದಾರೆ.
ಟೀಸರ್ನಲ್ಲಿ ಟೈಟಲ್ ಕಾರ್ಡ್ ಬಂದ ನಂತರ ಇಡೀ ಸ್ಕ್ರೀನ್ ಬ್ಲ್ಯಾಂಕ್ ಆಗಿ ಮೂಡಿಬಂದಿದ್ದು, ಕಡೆಯಲ್ಲಿ ಯುಐ ಟೀಸರ್ ನಿಮ್ಮ ಕಲ್ಪನೆಗಾಗಿ ಎಂದು ಹೇಳಿದ್ದಾರೆ. ಈ ಮೂಲಕ ಉಪೇಂದ್ರ ತಮ್ಮ ಅಭಿಮಾನಿಗಳು ಮತ್ತು ಎಲ್ಲರ ತಲೆಗೆ ಮತ್ತೊಮ್ಮೆ ಹುಳ ಬಿಟ್ಟಿದ್ದಾರೆ.
ವ್ಯಾಟ್ಸ್ಆ್ಯಪ್ ಮೂಲಕ ಪತ್ನಿಗೆ ವಿಚ್ಛೇದನ; ಪತಿಯ ವಿರುದ್ಧ ದಾಖಲಾಯ್ತು ಕೇಸ್!