More

    ವ್ಯಾಟ್ಸ್​ಆ್ಯಪ್​ ಮೂಲಕ ಪತ್ನಿಗೆ ವಿಚ್ಛೇದನ; ಪತಿಯ ವಿರುದ್ಧ ದಾಖಲಾಯ್ತು ಕೇಸ್​!

    ದಕ್ಷಿಣ ಕನ್ನಡ: ಮಹಿಳೆಯೊಬ್ಬರು ವ್ಯಾಟ್ಸ್​ಆ್ಯಪ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ಕಾವೇರಿ ಪ್ರಾಧಿಕಾರದ ಆದೇಶ ಪಾಲಿಸಲೇಬಾರದು; ಮಾಜಿ ಸಿಎಂ ಬೊಮ್ಮಾಯಿ ಒತ್ತಡ

    ವ್ಯಾಟ್ಸ್​ಆ್ಯಪ್ ಮುಖೇನ ತ್ರಿವಳಿ ತಲಾಖ್ ನೀಡಿದ ಪತಿ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ, ದೂರು ದಾಖಲಿಸಿದ್ದಾರೆ. ಮಹಿಳೆಯ ಪತಿ ವಿದೇಶದಲ್ಲಿ ಉದ್ಯೋಗಿಯಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆರೋಪಿ ಅಬ್ದುಲ್ ರಶೀದ್ ಕೇರಳದ ತ್ರಿಶೂರ್ ಮೂಲದವರು, ಏಳು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜಯನಗರ ಮೂಲದ ಮಹಿಳೆಯನ್ನು ವಿವಾಹವಾಗಿದ್ದ. ಎರಡು ವರ್ಷಗಳ ಹಿಂದೆ ಅಬ್ದುಲ್ ತನ್ನ ಪತ್ನಿಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿದ್ದ. ಆದ್ರೆ, ಎರಡನೇ ಹೆರಿಗೆ ವೇಳೆ ಆಕೆಯನ್ನು ಸುಳ್ಯದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.

    ಇದನ್ನೂ ಓದಿ:  ಗೌರಿ ಗಣೇಶ ಹಬ್ಬದ ದಿನ ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ

    ಈ ಘಟನೆಗಳ ನಂತರ ದಂಪತಿಯ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಸಮಸ್ಯೆಯನ್ನು ಕುಟುಂಬದ ಹಿರಿಯರು ಇತ್ಯರ್ಥಗೊಳಿಸಿದ್ದರು. ಆದ್ರೆ, ಇದೀಗ ತ್ರಿವಳಿ ತಲಾಖ್ ಅನ್ನು ವ್ಯಾಟ್ಸ್​ಆ್ಯಪ್ ಮುಖೇನ ಕಳುಹಿಸಿದ ಪತಿ ವಿರುದ್ಧ ಮಹಿಳೆ ದೂರನ್ನು ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ಸುಳ್ಯ ಪೊಲೀಸರು ನಡೆಸುತ್ತಿದ್ದಾರೆ,(ಏಜೆನ್ಸೀಸ್).

    ಬಾಲಿವುಡ್​ ಸ್ಟಾರ್​ ನಟನ ಚಿತ್ರಕ್ಕೆ ಸಮಂತಾ ನಾಯಕಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts