ಮುಂಬೈ: ಇತ್ತೀಚೆಗಷ್ಟೇ ಟಾಲಿವುಡ್ನ ಸ್ಟಾರ್ ನಟ ವಿಜಯ್ ದೇವರಕೊಂಡ ಜತೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ‘ಖುಷಿ’ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದ್ದು, ಸಮಂತಾ ನಟನೆಯ ಈ ಸಿನಿಮಾಗೆ ಫ್ಯಾನ್ಸ್ ಅಭಿನಂದನೆ ತಿಳಿಸಿದ್ದರು. ಇದೀಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ಬ್ಯಾಂಕ್ ವಂಚನೆ ಪ್ರಕರಣ; ಮುಂಬೈ ಮೂಲದ ಡೆವಲಪರ್ ವಿರುದ್ಧ ಎಫ್ಐಆರ್ ದಾಖಲು!
‘ಖುಷಿ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮುಂಬೈ ಸೇರಿದಂತೆ ಕೆಲವು ಪ್ರವಾಸಿ ತಾಣಗಳಿಗೆ ಸ್ನೇಹಿತರೊಡನೆ ಭೇಟಿ ನೀಡಿರುವ ಸಮಂತಾ, ತಮ್ಮ ರಜೆ ದಿನಗಳನ್ನು ಕಳೆಯುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ನ ಸಲ್ಮಾನ್ ಖಾನ್ ಜತೆ ಸಮಂತಾ ಹೊಸ ಸಿನಿಮಾದಲ್ಲಿ ಅಭಿನಯಿಸಲಿದ್ದು, ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ನಿರ್ದೇಶ ಕರಣ್ ಜೋಹರ್ ಮತ್ತು ಸಲ್ಮಾನ್ ಖಾನ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ನಟಿಗೆ ಆಫರ್ ಲಭಿಸಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಚ್ಚರಿ ಸಂಗತಿ ಎಂದರೆ ಈ ಚಿತ್ರದಲ್ಲಿ ಅಭಿನಯಿಸಲು ಸಮಂತಾ ಇನ್ನೂ ಸಹಿ ಹಾಕಿಲ್ಲ. ನಿರ್ಧರಿಸಲು ಒಂದಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್: ಬಾಯಲ್ಲಿ ನೊರೆ ಬಂದಿದ್ದರ ಹಿಂದಿನ ರಹಸ್ಯ ಬಯಲು
ಮುಂದಿನ ದಿನಗಳಲ್ಲಿ ಸಮಂತಾ ಯಾವ ರೀತಿಯ ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಸದ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿರುವ ಖುಷಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ,(ಏಜೆನ್ಸೀಸ್).
ಯೂಟ್ಯೂಬರ್ ವಾಸನ್ ಬೈಕ್ ಅಪಘಾತ; ಈ ರೀತಿಯ ಸ್ಟಂಟ್ಗಳನ್ನು ಬೆಂಬಲಿಸಬೇಡಿ: ರೈಟರ್ ರತ್ನ ಕುಮಾರ್