More

    ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್​: ಬಾಯಲ್ಲಿ ನೊರೆ ಬಂದಿದ್ದರ ಹಿಂದಿನ ರಹಸ್ಯ ಬಯಲು

    ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾಳೆ.

    ಚೈತ್ರಾಳ ಆರೋಗ್ಯ ಸ್ಥಿತಿಯ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದ್ದು, ಆಕೆಗೆ ಏನೂ ಆಗಿರಲಿಲ್ಲ ಮತ್ತು ಎಲ್ಲ ಟೆಸ್ಟ್​ ರಿಪೋರ್ಟ್​ನಲ್ಲೂ ನಾರ್ಮಲ್​ ಇರುವುದು ಕಂಡುಬಂದಿದೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ.

    ವಿಚಾರಣೆಗೆಂದು ಮಹಿಳಾ ಸಾಂತ್ವಾನ ಕೇಂದ್ರಿಂದ ಸಿಸಿಬಿ ಕಚೇರಿಗೆ ಬಂದಂತಹ ಸಂದರ್ಭದಲ್ಲಿ ಬಾಯಲ್ಲಿ ನೊರೆ ಕಾಣಿಸಿಕೊಂಡು ಚೈತ್ರಾ ನಿತ್ರಾಣಗೊಂಡ ಸ್ಥಿತಿಯಲ್ಲಿದ್ದರು. ತಕ್ಷಣ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ಫಿಟ್ಸ್​ ಇದೆ ಎಂದೂ ಹೇಳಲಾಗಿತ್ತು. ಆದರೆ, ಇದೆಲ್ಲವೂ ಚೈತ್ರಾಳೇ ಮಾಡಿರುವ ಹೈಡ್ರಾಮ ಎಂಬುದು ವೈದ್ಯರ ಹೇಳಿಕೆಯಿಂದ ಸಾಬೀತಾಗಿದೆ.

    ಇದನ್ನೂ ಓದಿ: ನನ್ನ ಬಂಧನಕ್ಕೆ ಪೊಲೀಸ್ ಕಮಿಷನರ್ ಕಾರಣ, ಗೂಂಡಾ ಕಾಯ್ದೆಯಡಿ ಕೇಸ್ ಹಾಕ್ಸಿದ್ದು ಜಮೀರ್ ಅಹಮದ್: ಪುನೀತ್ ಕೆರೆಹಳ್ಳಿ

    ಚೈತ್ರಾಳ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯ ದಿವ್ಯ ಪ್ರಕಾಶ್ ಹೇಳಿಕೆ ನೀಡಿದ್ದಾರೆ. ಎಲ್ಲ ಪರೀಕ್ಷೆಯನ್ನು ಮಾಡಿದ್ದೇವೆ ಮತ್ತು ಎಲ್ಲವೂ ನಾರ್ಮಲ್​ ಇದೆ ಎಂದು ಹೇಳಿದ್ದಾರೆ. ಬಾಯಲ್ಲಿ ನೊರೆ ಬಂದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ಫಂಕ್ಷನಲ್ ಆಗಿ ಆಗಿರೋದು. ಅವರೇ ಅದನ್ನು ಮಾಡಿಕೊಂಡಿದ್ದಾರೆ. ಫಿಟ್ಸ್​ ಬಗ್ಗೆ ಏನು ಕಂಡು ಬಂದಿಲ್ಲ ಎಂದು ಹೇಳಿದರು. ಬಹುಶಃ ಸೋಪಿನ ನೊರೆ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.

    ಫಿಟ್ಸ್​ ಇತ್ತ ಎಂಬುದನ್ನು ಪತ್ತೆ ಮಾಡುವುದಕ್ಕೆಂದು ಎಂಆರ್​ಐ ಸ್ಕ್ಯಾನಿಂಗ್ ಮಾಡಿದ್ದೀವಿ. ಅಲ್ಲದೆ, ಇಸಿಜಿ ಸ್ಕ್ಯಾನಿಂಗ್ ಮಾಡಿದ್ದೀವಿ. ಎಲ್ಲ ಟೆಸ್ಟ್​ ರಿಪೋರ್ಟ್​ ನಾರ್ಮಲ್​ ಇದೆ. ಸದ್ಯಕ್ಕೆ ಫಿಟ್ಸ್ ಕಂಡುಬಂದಿಲ್ಲ. ಆದರೆ, ನ್ಯೂರಾಲಾಜಿಸ್ಟ್ ಕೆಲವು ಮಾತ್ರೆ ಕೊಟ್ಟಿದ್ದಾರೆ. ಮೊದಲ ಬಾರಿ ಇಸಿಜಿ ಮಾಡಿದಾಗ ಸ್ವಲ್ಪ ವ್ಯತ್ಯಾಸ ಕಾಣಿಸಿತು. ಮತ್ತೊಮ್ಮೆ ಇಸಿಜಿ ಮಾಡಿದ ಬಳಿಕ ಏನು ವ್ಯತ್ಯಾಸ ಕಂಡು ಬಂದಿಲ್ಲ. ಎಲ್ಲವೂ ನಾರ್ಮಲ್ ಇದೆ ಎಂದು ವೈದ್ಯ ದಿವ್ಯ ಪ್ರಕಾಶ್ ತಿಳಿಸಿದ್ದಾರೆ.​

    ಇಂದಿನಿಂದ ಫುಲ್​ ಡ್ರಿಲ್​

    ಡಿಸ್ಚಾರ್ಜ್​ ಆದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಯ ಹಿಂಬಾಗಿಲಿನಿಂದ ಸಿಸಿಬಿ ಅಧಿಕಾರಿಗಳು ಕರೆತಂದರು. ಸದ್ಯ ಆಕೆಯ ಅರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಿನ್ನೆವರೆಗೂ ಆಸ್ಪತ್ರೆಯಲ್ಲಿ ಚೈತ್ರಾಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಆಕೆಯನ್ನು ಸಿಸಿಬಿ ಕಚೇರಿಗೆ ಕರೆತರಲಾಗಿದೆ. ಇಂದಿನಿಂದ ಚೈತ್ರಾಳ ಅಸಲಿ ವಿಚಾರಣೆ ಆರಂಭವಾಗಲಿದೆ. ಯಾರ್ಯಾರಿಗೆ ಹಣ ವರ್ಗಾವಣೆ ಆಗಿದೆ ಮತ್ತು ಹಗರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಅನ್ನೋದರ ಬಗ್ಗೆ ವಿಚಾರಣೆ ನಡೆಯಲಿದೆ.

    ಚೈತ್ರಾ ಕುಂದಾಪುರ ಕಾರು ಮುಧೋಳ ತಲುಪಿದ್ಯಾಕೆ, ಹೇಗೆ?: ಆ ವ್ಯಕ್ತಿ ಹೇಳಿದ್ದೇನು?; ಇಲ್ಲಿದೆ ವಿವರ..

    ಚೈತ್ರಾ ಕುಂದಾಪುರ ಪ್ರಕರಣ, ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

    ಚೈತ್ರಾ ಕುಂದಾಪುರ ಹೆಲ್ತ್​ ಬುಲೆಟಿನ್​ ಬಿಡುಗಡೆ: ಆರೋಗ್ಯ ಸ್ಥಿರ, ದಂತ ವೈದ್ಯರಿಗೆ ಬುಲಾವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts