More

    ನನ್ನ ಬಂಧನಕ್ಕೆ ಪೊಲೀಸ್ ಕಮಿಷನರ್ ಕಾರಣ, ಗೂಂಡಾ ಕಾಯ್ದೆಯಡಿ ಕೇಸ್ ಹಾಕ್ಸಿದ್ದು ಜಮೀರ್ ಅಹಮದ್: ಪುನೀತ್ ಕೆರೆಹಳ್ಳಿ

    ಬೆಂಗಳೂರು: ಗೂಂಡಾ ಕಾಯ್ದೆಯಡಿ ಕೇಸ್ ಹಾಕಿದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಜೈಲಿನಲ್ಲಿದ್ದು, ನಿನ್ನೆಯಷ್ಟೇ ಬಂಧಮುಕ್ತ ಆಗಿರುವ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಇಂದು ಸುದ್ದಿಗೋಷ್ಠಿ ನಡೆಸಿ ಹಲವು ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ.

    ಹಿಂದೂಪರ ಸಂಘಟನೆಗಳ ಒಕ್ಕೂಟದೊಂದಿಗೆ ಇಂದು ಪುನೀತ್ ಕೆರೆಹಳ್ಳಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನನ್ನ ಬಂಧನಕ್ಕೆ ಪೊಲೀಸ್ ಆಯುಕ್ತರು ನೇರ ಕಾರಣ, ಸಿಸಿಬಿ ಪೊಲೀಸರ ಮೇಲೆ‌ ಒತ್ತಡ ಹಾಕಿ ನನ್ನನ್ನು ಬಂಧಿಸಲಾಗಿದೆ ಎಂದಿರುವ ಪುನೀತ್, ತನ್ನ ವಿರುದ್ಧ ಗೂಂಡಾ ಕಾಯ್ದೆ ಹಾಕಿಸಿದ್ದು ಸಚಿವ ಜಮೀರ್ ಅಹಮದ್ ಎಂದು ಆರೋಪಿಸಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪಗಳಿಗೆ ಸಾಕ್ಷಿ ಕೊಡಿ ಎಂದಿರುವ ಪುನೀತ್, ತಪ್ಪಿದರೆ ಸರ್ಕಾರ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದಿದ್ದಾರೆ.

    ಸುಳ್ಳು ದಾಖಲೆ ಒದಗಿಸಿ ನಾಟಕ ಮಾಡಿದ ದಾಖಲೆ ನನ್ನ ಹತ್ತಿರವಿದೆ. ಎಲ್ಲವನ್ನೂ ಪೆನ್ ಡ್ರೈವ್​ನಲ್ಲಿ ಇರಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದೂ ಪುನೀತ್ ಹೇಳಿದ್ದಾರೆ.

    ಜೀವ ಬೆದರಿಕೆ: ನನಗೆ ಜೀವ ಬೆದರಿಕೆ ಇದೆ. ಇಲ್ಲಿನ ಲೋಕಲ್ ನಂಬರ್​​ನಿಂದ ಕರೆ ಮಾಡಿ, ಹೊಡೆದು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಧರ್ಮದ ಪರ ಹೋರಾಟ ನಾನಿದ್ದೇನೆ, ನನ್ನ ಹಿಂದೆ ಧರ್ಮದ ರಕ್ಷಣೆ ಇದೆ. ಜೈಲಿನಲ್ಲಿ ಪ್ರಾಣಾಪಾಯ ಇದೆ ಅಂತ ಹೇಳುವ ಸರ್ಕಾರಕ್ಕೆ, ಹೊರಗೆ ಕೊಡುವ ಈ ಬೆದರಿಕೆ ಬಗ್ಗೆ ಯಾಕೆ ಮಾಹಿತಿ ಇಲ್ಲ? ನಾನು ಹೋರಾಟಕ್ಕೆ ಸದಾ ಸಿದ್ಧ, ರಕ್ಷಣೆ ಕೊಡಿ ಅಂತ ಸರ್ಕಾರಕ್ಕೆ ಮನವಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ನಾನು ಕನಕಪುರ ನ್ಯಾಯಾಲಯಕ್ಕೆ ಹೋದಾಗ, ಏಕಾಏಕಿ ಕಾರು ಅಡ್ಡ ಹಾಕಿ ಸಿಸಿಬಿ ಅಂತ ಹೇಳಿ ಬಂಧಿಸಿದ್ದಾರೆ. ನನಗೆ ರಾತ್ರಿ 9 ಗಂಟೆವರೆಗೆ ಊಟ-ನೀರು ಕೊಡದೆ ಅಜ್ಞಾತ ಸ್ಥಳದಲ್ಲಿ ಇಟ್ಟಿದ್ದರು. ಇದು ಹಿಂದೂಗಳಿಗೆ ಅವಮಾನ, ಸರ್ಕಾರ ಕ್ಷಮೆ ಕೇಳಬೇಕು, ಸರ್ಕಾರ ನನಗೆ ಪರಿಹಾರ ಕೊಡಬೇಕು ಎಂದ ಪುನೀತ್, ಮುಂದೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

    ಫೇಸ್​​ಬುಕ್​ನಲ್ಲಿ ಒಂದು ಬರಹ ಬರೆದರೂ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಲಾಗುತ್ತಿದೆ. ಈ ಮೂಲಕ ಸರ್ಕಾರ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ. ಹಿಂದುಗಳ ವಾಕ್ ಸ್ವಾತಂತ್ರ್ಯವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ಹಿಂದೂಪರ ಕಾರ್ಯಕರ್ತ ಮೋಹನ್ ಗೌಡ ಹೇಳಿದ್ದಾರೆ.

    ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಯಜಮಾನ!; ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸಿನಿಮಾಗಳಲ್ಲಿರುವ ಸಂದೇಶಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts