More

    ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಯಜಮಾನ!; ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸಿನಿಮಾಗಳಲ್ಲಿರುವ ಸಂದೇಶಗಳು..

    ‘ಹದಿನಾಲ್ಕು’- ಉಕ್ಕುವ ಯೌವನವಸ್ಥೆಯ ಕಾಲ. ಕನ್ನಡಿಗರ ಮನದಂಗಳದಲ್ಲಿ ‘ಸಾಹಸಸಿಂಹ’ ಎಂಬುದಾಗಿ ಅಚ್ಚೊತ್ತಿರುವ ಡಾ.ವಿಷ್ಣುವರ್ಧನ್, ಇಹಲೋಕ ತ್ಯಜಿಸಿ ಸರಿಯಾಗಿ ಹದಿನಾಲ್ಕು ವರ್ಷ. ದಶಕ ಉರುಳಿದರೂ ಅತ್ಯಂತ ಸ್ಫುರದ್ರೂಪಿ ನಟನ ನೆನಪು ಸದಾ ಹಸಿರು. ಅವರು ಬದುಕಿದ್ದಿದ್ದರೆ, ಇಂದಿಗೆ 73 ವಸಂತಗಳು ತುಂಬುತ್ತಿದ್ದವು. ‘ದೇಹ ನಶ್ವರ, ಸಾಧನೆ ಶಾಶ್ವತ’ ಎಂಬ ಉಕ್ತಿಯಂತೆ ವಿಷ್ಣು ತಮ್ಮ 200+ ಚಿತ್ರಗಳ ಮೂಲಕ ಸಿನಿಪ್ರಿಯರ ಹೃದಯದಲ್ಲಿದ್ದಾರೆ. ಅವರ ಸಂದೇಶಭರಿತ ಕೆಲ ಸಿನಿಮಾಗಳು ಅಭಿಮಾನಿಗಳಿಗೆ ಬಿಡಿಸಲಾರದ ‘ಬಂಧನ’. ಬೆಳಗಿನ ‘ಸುಪ್ರಭಾತ’, ಮಳೆಯಲ್ಲಿ ನಿಂತು ಆಯ್ದ ‘ಮುತ್ತಿನ ಹಾರ’! ಡೇರಿಂಗ್ ವ್ಯಕ್ತಿತ್ವ ಹಾಗೂ ಮೃದುವಾದ ನಡವಳಿಕೆ ಎರಡನ್ನೂ ಸಮವಾಗಿ ನಿಭಾಯಿಸದ ವಿಷ್ಣುವರ್ಧನ್, ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ‘ಹೃದಯವಂತ’. ಕಣ್ಣಿನಲ್ಲೇ ಪ್ರೇಕ್ಷಕರನ್ನು ಅಳಿಸುತ್ತಾ, ನಗಿಸುತ್ತಾ, ಸ್ಫೂರ್ತಿ ತುಂಬುತ್ತಾ, ಎಲ್ಲರ ಮನ ಗೆಲ್ಲುತ್ತಾ ಅಭಿನಯವನ್ನು ಜೀವಿಸಿದ ‘ಕೋಟಿಗೊಬ್ಬ’. ಇಂದು (ಸೆ.18) ಅವರ ಜಯಂತಿ. ಈ ವಿಶೇಷ ಸಂದರ್ಭದಲ್ಲಿ ಡಾ.ವಿಷ್ಣು ನಾಯಕತ್ವದ ಚಿತ್ರಗಳಲ್ಲಿನ ವೈಶಿಷ್ಟ, ಸಂದೇಶ ಇಲ್ಲಿದೆ.

    ನಾಗರಹಾವು:
    ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ. ‘ರಾಮಾಚಾರಿ’ ಒಬ್ಬ ಮುಂಗೋಪಿ ತರುಣ. ಊರಿನಲ್ಲಿ ಯಾರ ಮಾತನ್ನೂ ಕೆಳದವನು ಒಬ್ಬ ಗುರುವಿನ ಮಾತನ್ನು ಗಂಭೀರವಾಗಿ ಸ್ವೀಕರಿಸುತ್ತಾನೆ. ಅಂತಹ ಒಬ್ಬ ಶಿಷ್ಯನ ಪಾತ್ರ ವಿಷ್ಣು ಅವರದ್ದು. ಗುರು ಮತ್ತು ಶಿಷ್ಯರ ಸಂಬಂಧದ ಜತೆಗೆ ಮನುಷ್ಯನ ವರ್ತನೆಗೆ ಕುಟುಂಬ, ಸಮಾಜ ಹೇಗೆಲ್ಲ ಪರಿಣಾಮ ಬೀರುತ್ತದೆ ಎನ್ನುವ ಸಂದೇಶವಿದೆ.

    ಜೀವನದಿ:
    ಒಂದು ನದಿಯ ಉಗಮ ಹಾಗೂ ಅದರಿಂದ ಆಗುವ ಉಪಯೋಗವನ್ನು ಸಾರುವಂಥ ಚಿತ್ರ. ಪ್ರಕೃತಿಯ ಬಗೆಗಿನ ಪ್ರೀತಿ, ಕಾಳಜಿ ಹಾಗೂ ಅವುಗಳನ್ನು ರಕ್ಷಣೆ ಮಾಡಬೇಕು ಎಂದು ತೋರಿಸಿಕೊಟ್ಟ ಸಿನಿಮಾ.

    ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಯಜಮಾನ!; ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸಿನಿಮಾಗಳಲ್ಲಿರುವ ಸಂದೇಶಗಳು..

    ಮುತ್ತಿನ ಹಾರ:
    ಒಂದು ಯುದ್ಧ ಹೇಗೆಲ್ಲ ಪರಿಣಾಮ ಬೀರುತ್ತದೆ? ಸೈನಿಕರು ಯುದ್ಧದಲ್ಲಿ ಹೋರಾಡುವುದರ ಜತೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಎಷ್ಟೆಲ್ಲ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ತೋರಿಸಲಾಗಿದೆ. ಸೈನಿಕರ ಜೀವನದ ಪರಿಚಯ ಮಾಡಿಸುತ್ತಲೇ, ಶಾಂತಿ ಕಾಪಾಡಬೇಕು ಎನ್ನುವ ಸಂದೇಶ.

    ಬಂಧನ:
    ಇದೊಂದು ಭಾವನಾತ್ಮಕವಾದ ಪ್ರೇಮಕಥೆ. ಒಬ್ಬ ಅಂತರ್ಮುಖಿ ವ್ಯಕ್ತಿ ತನ್ನ ಪ್ರೇಮವನ್ನು ನಿವೇದನೆ ಒದ್ದಾಡುತ್ತಾನೆ. ಆದರೆ, ಪ್ರೀತಿಯನ್ನು ವ್ಯಕ್ತಪಡಿಸಲು ತಡಮಾಡಬಾರದು ಎಂದು ಹೇಳಿದ ಚಿತ್ರ. ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ, ಅವುಗಳನ್ನು ಸರಿಯಾಗಿ ಬಗೆಹರಿಸಿಕೊಳ್ಳದಿದ್ದರೆ ಆನಾಹುತಗಳೇ ಆಗಬಹುದು. ಅವುಗಳನ್ನು ತಪ್ಪಿಸಲು ಸರಿಯಾದ ಸಂವಹನ ಮುಖ್ಯ ಎಂದು ಹೇಳುವ ಸಿನಿಮಾ.

    ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಯಜಮಾನ!; ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸಿನಿಮಾಗಳಲ್ಲಿರುವ ಸಂದೇಶಗಳು..

    ಸುಪ್ರಭಾತ:
    ಒಮ್ಮೊಮ್ಮೆ ಮನುಷ್ಯನ ದೌರ್ಬಲ್ಯ ಸಮಾಜದಲ್ಲಿ ಎಲ್ಲರಿಂದ ದೂರವಿರುವಂತೆ ಮಾಡುತ್ತದೆ. ಆದರೆ, ಆತನೊಳಗೂ ಮಾನವೀಯತೆ ಜೀವಂತವಾಗಿರುತ್ತದೆ. ಅದನ್ನು ಗುರತಿಸಬೇಕು. ಇಂತಹ ಸಂದೇಶವನ್ನು ನೀಡುವ ಚಿತ್ರವಿದು. ಇನ್ನೊಬ್ಬರಿಗೆ ಮಾಡುವ ಸಹಾಯ, ತೋರುವ ಪ್ರೀತಿ ನಿಜವಾದ ಜೀವನ.

    ಜಿಮ್ಮಿಗಲ್ಲು:
    ‘ತುತ್ತು ಅನ್ನ ತಿನ್ನೋಕೆ.. ಬೊಗಸೆ ನೀರು ಕುಡಿಯೋಕೆ..ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ..’ ಈ ಹಾಡು ಯಾರಿಗೆ ಗೊತ್ತಿಲ್ಲ! ಇದರಲ್ಲೇ ಜೀವನದ ದೊಡ್ಡ ಸಂದೇಶವಿದೆ. ಐಷಾರಾಮಿ ಬದುಕಿನ ಬೆನ್ನತ್ತಿ ಓಡಿ ಇರುವ ನೆಮ್ಮದಿ ಕಳೆದುಕೊಳ್ಳುವ ಬದಲು ಇದ್ದಿದ್ದರಲ್ಲೇ ಹಾಯಾಗಿ ಬದುಕಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts