More

    ಬಹುನಿರೀಕ್ಷಿತ ‘ಯುಐ’ ಟೀಸರ್​ಗೆ ಕ್ಷಣಗಣನೆ ಆರಂಭ; ಕಾರ್ಯಕ್ರಮದ ಸಮಯ ಹೀಗಿದೆ​

    ಬೆಂಗಳೂರು: ಸ್ಯಾಂಡಲ್​ವುಡ್​ನ ‘ಬುದ್ದಿವಂತ’ ನಿರ್ದೇಶಕ, ರಿಯಲ್​ ಸ್ಟಾರ್​ ನಟ ಉಪೇಂದ್ರ ನಟಿಸಿ, ನಿರ್ದೇಶನದ ‘ಯುಐ’ ಸಿನಿಮಾದ ಟೀಸರ್​ ಅನಾವರಣ ಕಾರ್ಯಕ್ರಮಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅಧಿಕೃತ ಬಿಡುಗಡೆಗೆ ಸಜ್ಜಾಗಿದೆ.

    ಇದನ್ನೂ ಓದಿ: ನರೇಗಾ ಕೆಲಸದ ದಿನಗಳ ವಿಸ್ತರಣೆಗೆ ಚಿಂತನೆ

    ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ಅವರ ಮುಂದಿನ ಸಿನಿಮಾಗೆ ಬಹಳ ಕಾತರದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ದಿನಾಂಕ ಸ್ಪಷ್ಟವಾಗಿದೆ. ‘ಯುಐ’ ಟೈಟಲ್​ ಅನಾವರಣಗೊಂಡ ಮೊದಲ ದಿನದಿಂದಲೂ ಉಪ್ಪಿ ಅಭಿಮಾನಿಗಳಲ್ಲಿ ಭಾರೀ ಗೊಂದಲ ಮೂಡಿದೆ.

    ಈ ಶೀರ್ಷಿಕೆಯ ಹಿಂದಿರುವ ಕಥೆಯೇನು, ಪೋಸ್ಟರ್ ಹೇಳುತ್ತಿರುವುದೇನು? ವರ್ಷಗಳ ನಂತರ ಮತ್ತೊಮ್ಮೆ ಡೈರಕ್ಟರ್​ ಕ್ಯಾಪ್​ ತೊಟ್ಟಿರುವ ಉಪ್ಪಿ, ಈ ಬಾರಿ ವಿಭಿನ್ನವಾಗಿ ಏನು ಮಾಡಲಿದ್ದಾರೆ ಎಂಬ ಹಲವು ಪ್ರಶ್ನೆಗಳು ಫ್ಯಾನ್ಸ್​ಗಳಲ್ಲಿ ಕಾಡುತ್ತಿದೆ. ಒಟ್ಟಾರೆ ಸಿನಿಮಾದ ಟೀಸರ್​, ಟ್ರೇಲರ್​ಗಾಗಿ ಭಾರೀ ನಿರೀಕ್ಷೆ ವ್ಯಕ್ತಪಡಿಸಿರುವ ಸಿನಿರಸಿಕರು, ಚಿತ್ರದ ಟೀಸರ್​ ರಿಲೀಸ್​ಗೆ ಕುತೂಹಲದಿಂದ ಕಾಯತೊಡಗಿದ್ದಾರೆ.

    ಇದನ್ನೂ ಓದಿ: ಸಮೃದ್ಧ ಭಾರತ ನಿರ್ಮಾಣಕ್ಕೆ ಒಂದಾಗಿ ಕೆಲಸ ಮಾಡೋಣ: ಡಾ.ಮನಮೋಹನ್ ವೈದ್ಯ

    ಚಿತ್ರತಂಡ ತಿಳಿಸಿರುವಂತೆ ಸಿನಿಮಾದ ಟೀಸರ್​, ಸೆ. 18 ರಂದು ಊರ್ವಶಿ ಚಿತ್ರಮಂದಿರದಲ್ಲಿ ಮಧ್ಯಾಹ್ನ 2 ರಿಂದ 8 ಗಂಟೆಯವರೆಗೂ ನಡೆಯಲಿದ್ದು,  ಸಂಜೆ 6:30ರ ವೇಳೆಗೆ ಲಹರಿ ಯೂಟ್ಯೂಬ್​ ಚಾನಲ್​ನಲ್ಲಿ ಅಧಿಕೃತವಾಗಿ ರಿಲೀಸ್ ಆಗಲಿದೆ ಎಂದು ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts