More

    ನಟ ವಿಷ್ಣುವರ್ಧನ್ ಪುತ್ಥಳಿ ಹಿಂದಿರುವ ಕೈಚಳಕವೂ ಶಿಲ್ಪಿ ಅರುಣ್ ಯೋಗಿರಾಜ್​ದ್ದು!

    ಬೆಂಗಳೂರು: ಅಯೋಧ್ಯೆಯ ಬಾಲರಾಮ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್‌ ಯೋಗಿರಾಜ್ ಅವರು ಸಾಕಷ್ಟುದಿನಗಳಿಂದ ಸಾದಾ ಸುದ್ದಿಯಲ್ಲಿದ್ದಾರೆ. ಮಂದಹಾಸ ಬೀರುತ್ತಿರುವ ಸುಂದರವಾದ ರಾಮನ ಮೂರ್ತಿ ಕೆತ್ತಿದ್ದ ಈ ಶಿಲ್ಪಿ ಅರುಣ್ ಯೋಗಿರಾಜ್ ಅವರೆ ದಿವಂಗತ ನಟ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ತಯಾರು ಮಾಡಿದ್ದಾರೆ.

     ಅರುಣ್ ಯೋಗಿರಾಜ್ ಸ್ಥಳೀಯ ಮಟ್ಟದಲ್ಲಿ ಶಿಲ್ಪಿಕಾರರಾಗಿ ಗುರುತಿಸಿಕೊಂಡಿದ್ದರೂ, ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಸಿನಿಮಾ ರಂಗಕ್ಕೂ ಪರಿಚಿತ ಆದರು. ಅದರಲ್ಲೂ ಸ್ಮಾರಕದ ಉದ್ಘಾಟನೆ ದಿನದಂದು ವಿಷ್ಣುವರ್ಧನ್ ಪುತ್ಥಳಿ ಹಾಗೂ ಭಾರತಿ ವಿಷ್ಣುವರ್ಧನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ತಲೆಯೆತ್ತಿ ನಿಂತಿರುವ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ತಯಾರು ಮಾಡಿದ್ದು ಇದೇ ಅರುಣ್ ಯೋಗಿರಾಜ್.

    ಒಂದು ವರ್ಷದ ಹಿಂದೆ – ಅಮ್ಮ ಪದ್ಮಶ್ರೀ ಪುರಸ್ಕೃತೆ ಡಾ॥ ಭಾರತಿ ವಿಷ್ಣುವರ್ಧನ್ ರವರು ಮೈಸೂರಲ್ಲಿರೋ ಅಪ್ಪಾವರ ಸಾಹಸಸಿಂಹ ಡಾ॥ವಿಷ್ಣುವರ್ಧನ್‌ರವರ ಸ್ಮಾರಕದಲ್ಲಿರೋ ಪುತ್ಥಳಿಯ ಹಾಗೂ ಶ್ರೀ ರಾಮಲಲ್ಲ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ರವರ ಜತೆ ಎಂದು ಫೇಸ್​ಬುಕ್​​ನಲ್ಲಿ ಬರೆದುಕೊಂಡು ಫೋಟೋ ಶೇರ್​ ಮಾಡಿದ್ದಾರೆ.

    ಅರುಣ್ ಯೋಗಿರಾಜ್ ನ್ಯಾಷಿನಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಇವರದ್ದೇ ಕಲ್ಪನೆಯಲ್ಲಿ ತಯಾರಾದ ರಾಮ್ ಲಲ್ಲಾ ಮೂರ್ತಿಯು ಆಯ್ಕೆಯಾದ ನಂತರ ಅರುಣ್ ಸಖತ್ ಫೇಮಸ್ ಆಗಿದ್ದಾರೆ. ಇವರ ಕಲ್ಪನೆಯಲ್ಲಿ ಅರಳಿದ ಪ್ರತಿಮೆಗಳು ಇದೀ ಒಂದೊಂದೇ ಬೆಳಕಿಗೆ ಬರುತ್ತಿವೆ.

    ಬಾಲಾರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಶಿಲ್ಪಿ ಅರುಣ್ ಯೋಗಿರಾಜ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿಲ್ಪಿ ಅರುಣ್‌ಗೆ ಭವ್ಯ ಸ್ವಾಗತ ಕೋರಲಾಯ್ತು. ಈ ವೇಳೆ ಮಾತನಾಡಿದ ಅರುಣ್ ಯೋಗಿರಾಜು, ಇಂತಹ ಭಾಗ್ಯ ಸಿಗುತ್ತೆ ಅಂತಾ ಕನಸಿನಲ್ಲಿಯೂ ಊಹಿಸಿರಲಿಲ್ಲ. ಬಹಳ ದಿನಗಳಿಂದ ನಾನು ಕೊಠಡಿಯಿಂದ ಈಚೆ ಬಂದಿರಲಿಲ್ಲ. ಹೊರಗಡೆ ಬಂದ ನಂತರ ಶಿಲ್ಪಿಗೆ ಇಂತಹ ಗೌರವ ಸಿಗುತ್ತೆ ಅನ್ಕೊಂಡಿರಲ್ಲಿಲ್ಲ. ನನ್ನ ಜೀವನದಲ್ಲಿ ಇಷ್ಟು ನಿರೀಕ್ಷೆ ಇಟ್ಟಿರಲಿಲ್ಲ. ನಮ್ಮ ದೇಶದ ಜನರಿಗೆ ರಾಮನ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಗೊತ್ತಾಗ್ತಿದೆ ಎಂದು ಹೇಳಿದ್ದಾರೆ.

    ಬಾಲರಾಮ ಪ್ರಾಣ ಪ್ರತಿಷ್ಠೆ ವೇಳೆ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ತಮ್ಮ ಮುಖ ಮುಚ್ಚಿಕೊಂಡಿದ್ದು ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts