

ತಮಿಳುನಾಡು: ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್, ಹೈ-ಸ್ಪೀಡ್ ಮೋಟಾರ್‌ಸೈಕಲ್ ಸವಾರಿ ಮತ್ತು ಸಾಹಸಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದ ಟಿಟಿಎಫ್ ವಾಸನ್, ಭಾನುವಾರ (ಸೆ.17) ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ವೀಲಿ ಮಾಡಲು ಹೋಗಿ ಅಪಘಾತಕ್ಕೀಡಾಗಿದ್ದಾರೆ. ಈ ಬಗ್ಗೆ ಜನರಲ್ಲಿ ಮನವಿ ಮಾಡಿದ 'ಲಿಯೋ' ಸಿನಿಮಾದ ಬರಹಗಾರ, ಈ ರೀತಿಯ ಸ್ಟಂಟ್ಗಳನ್ನು ಬೆಂಬಲಿಸಬೇಡಿ ಎಂದು ಹೇಳಿದ್ದಾರೆ.
ಬೈಕ್ ಅಪಘಾತದ ಕುರಿತು ಮಾತನಾಡಿದ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾದ ಬರಹಗಾರ ರತ್ನ ಕುಮಾರ್, "ಜನಪ್ರಿಯ ಯೂಟ್ಯೂಬರ್, ದಯವಿಟ್ಟು ಈ ರೀತಿಯ ಡೇರ್‌ಡೆವಿಲ್ ಬೈಕ್ ಸ್ಟಂಟ್ಗಳನ್ನು ಪ್ರೋತ್ಸಾಹಿಸಬೇಡಿ. ನೀವು ಅಷ್ಟೂ ಆಸಕ್ತರಾಗಿದ್ದರೆ, ಇಂಥ ಸ್ಟಂಟ್ಗಳನ್ನು ರೇಸ್ ಟ್ರ್ಯಾಕ್‌ನಲ್ಲಿ ಮಾಡಿ. ನಿಮ್ಮ ಥ್ರಿಲ್‌ಗೋಸ್ಕರ ಸಾಮಾನ್ಯ ಜನರು ಯಾಕೆ ಬಲಿಯಾಗಬೇಕು. ಶೀಘ್ರವೇ ಗುಣಮುಖರಾಗಿ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಕ್ರಮವಾಗಿ ವಿದೇಶದಿಂದ ಸಾಗಿಸುತ್ತಿದ್ದ ಇ-ಸಿಗರೇಟ್ ವಶ!
ಟಿಟಿಎಫ್ ವಾಸನ್ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಜಾಗದಲ್ಲಿ ಅತಿವೇಗದ ಚಾಲನೆಗಾಗಿ ವಾಸನ್ ವಿರುದ್ಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).