ಮುಂಬೈ: ಕಿಂಗ್ ಖಾನ್ ಜತೆ ‘ಜವಾನ್’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಲೇಡಿ ಸೂಪರ್‌ಸ್ಟಾರ್, ನಟಿ ನಯನತಾರಗೆ ಇದೀಗ ಬಾಲಿವುಡ್ ಅಂಗಳದಲ್ಲಿ ಭಾರೀ ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ: ಅಕ್ರಮವಾಗಿ ವಿದೇಶದಿಂದ ಸಾಗಿಸುತ್ತಿದ್ದ ಇ-ಸಿಗರೇಟ್ ವಶ!
‘ಜವಾನ್’ ಸಿನಿಮಾದಲ್ಲಿ ಶಾರೂಖ್ ಅವರೊಂದಿಗೆ ಆ್ಯಕ್ಷನ್ ಸೀಕ್ವೆನ್ಸ್ಗಳಲ್ಲಿ ಅಭಿನಯಿಸಿದ ನಟಿಗೆ ಅಭಿಮಾನಿಗಳು ಮತ್ತು ಸಿನಿಪ್ರೇಕ್ಷಕರು ಫಿದಾ ಆಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಜವಾನ್ ಭಾರೀ ಯಶಸ್ಸನ್ನು ಗಳಿಸುವ ಮುಖೇನ ಚಿತ್ರತಂಡಕ್ಕೆ ನಿರೀಕ್ಷಿಸಿದ ಗೆಲುವನ್ನು ತಂದುಕೊಟ್ಟಿದೆ.
‘ಜವಾನ್’ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ನಯನತಾರ ಅವರ ಅಭಿನಯವನ್ನು ಗಮನಿಸಿದ ಹಲವು ನಿರ್ದೇಶಕರು, ನಿರ್ಮಾಪಕರು ತಮ್ಮ ಮುಂಬರುವ ಪ್ರಾಜೆಕ್ಟ್ಗಳ ಸಂಭಾವ್ಯ ಪಾತ್ರಗಳಿಗೆ ಲೇಡಿ ಸೂಪರ್‌ಸ್ಟಾರ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಈ ಕುರಿತು ಬಾಲಿವುಡ್ನಲ್ಲಿ ಸದ್ಯ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: Gini & Jony embarks on transformation journey, targets five-fold growth to Rs. 1,000 cr
‘ಇರೈವನ್’, ‘ಥಾನಿ ಒರುವನ್ 2’, ‘ಲೇಡಿ ಸೂಪರ್‌ಸ್ಟಾರ್ 75’ ಮತ್ತು ‘ಟೆಸ್ಟ್’ ಸೇರಿದಂತೆ ಹಲವಾರು ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿರುವ ನಯನತಾರ, ಮುಂದಿನ ಯಾವ ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).