More

  ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಹೆಸರು ತಳಕು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟನೆ ಹೀಗಿದೆ…

  ಬೆಂಗಳೂರು: ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಹಗರಣ‌ದಲ್ಲಿ ತಮ್ಮ ಹೆಸರು ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

  ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಈ ಪ್ರಕರಣ ಮಾಧ್ಯಮಗಳಲ್ಲಿ ಬರುವುದಕ್ಕೂ ‌ಮುನ್ನವೇ ನನಗೆ ಗೊತ್ತು. ವಜ್ರದೇಹಿ ರಾಜಶೇಕರಾನಂದ ಸ್ವಾಮೀಜಿಗಳು ನನ್ನ ಬಳಿ‌ ಹೇಳಿದ್ದರು. ವಂಚನೆಗೆ ಒಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ನನಗೂ ಆತ್ಮೀಯರು. ಆದರೆ, ವಂಚನೆ‌ ಬಗ್ಗೆ ನನಗೆ ಯಾವುದೇ ಮಾಹಿತಿ‌ ನೀಡಲಿಲ್ಲ. ಅವರ ಬಗ್ಗೆ ನನಗೆ ಬಹಳ‌ ಅನುಕಂಪವಿದೆ ಎಂದು ಹೇಳಿದರು.

  ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿಯ ನಡುವೆಯೂ ಖರೀದಿ ಭರಾಟೆ : ಸೂಪರ್ ಮಾರುಕಟ್ಟೆ ಫುಲ್‌ ರಶ್

  ಸ್ವಾಮೀಜಿಗಳ ಬಳಿ ಮಾತನಾಡುವಾಗ ತಮಾಷೆಗೆ ನನ್ನ ಹೆಸರು ಇದೆಯಾ ಅಂತ ಕೇಳಿದ್ದೆ. ಅಭಿನವ ಹಾಲಶ್ರೀಗಳು ನನಗೆ ತುಂಬಾ ಆತ್ಮೀಯರು. ಗೋವಿಂದ್ ಬಾಬು ಪೂಜಾರಿ ನನಗೆ ಒಳ್ಳೆಯ ಸ್ನೇಹಿತರು. ಅದರೆ, ಚೈತ್ರ ಕುಂದಾಪುರಳನ್ನು‌ ನಾನು ಭೇಟಿ‌ ಮಾಡಿದ್ದು ಒಂದೇ ಬಾರಿ. ಅದು ಆಕೆ ಸ್ಪಂದನ ಟಿವಿಯಲ್ಲಿ ರಿಪೋರ್ಟರ್ ಆಗಿದ್ದಾಗ, ಸಂದರ್ಶನ ಮಾಡಿದಾಗ ಮಾತ್ರ ನಾನು ಭೇಟಿಯಾಗಿದ್ದೆ. ಅದಾದ ನಂತರ ನಾನು ಭೇಟಿಯಾಗಿಲ್ಲ ಎಂದರು.

  ಬಿಜೆಪಿಯಲ್ಲಿ ಈ ರೀತಿ ಹಣ ಕೊಟ್ಟ ಟಿಕೆಟ್ ಪಡೆಯುವ ಸಂಸ್ಕೃತಿ ಇಲ್ಲ. ಈ ವಿಚಾರವನ್ನು ನಾನು ಸಿ.ಟಿ. ರವಿ ಅವರ ಜತೆ ಚರ್ಚೆ ಮಾಡಿದೆ. ಅದಾದ ನಂತರ ಸಾಕಷ್ಟು ಸಂಧಾನ ಮಾತುಕತೆ ನಡದರೂ ಪ್ರಯೋಜನ‌ ಆಗಿಲ್ಲ. ಬಳಿಕ ಅವರಾಗಿಯೇ ಬೀದಿಗೆ ಬರಲಿ ಎಂದು ಸಿ.ಟಿ. ರವಿ ಹೇಳಿದ್ದರು. ಪಡೆದ ಹಣವನ್ನು ಚೈತ್ರಾ ಕುಂದಾಪುರ ಕೊಡಲು ಒಪ್ಪದೇ ಇದ್ದಾಗ ಅನಿವಾರ್ಯವಾಗಿ ಮಾಧ್ಯಮಗಳ ಮುಂದೆ ಬರಬೇಕಾಯ್ತು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

  CWRC ಆದೇಶದಂತೆ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಲು CWMA ಸಭೆಯಲ್ಲಿ ಕರ್ನಾಟಕಕ್ಕೆ ಸೂಚನೆ

  ಬಾಲಿವುಡ್​ ಸ್ಟಾರ್​ ನಟನ ಚಿತ್ರಕ್ಕೆ ಸಮಂತಾ ನಾಯಕಿ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts