More

    CWRC ಆದೇಶದಂತೆ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಲು CWMA ಸಭೆಯಲ್ಲಿ ಕರ್ನಾಟಕಕ್ಕೆ ಸೂಚನೆ

    ನವದೆಹಲಿ: ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​​ ನೀರನ್ನು ಹರಿಸಬೇಕೆಂಬ ಸೆ.12ರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಇಂದು (ಸೆ.18) ಆದೇಶ ಹೊರಡಿಸಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಆದೇಶ ಹೊರಡಿಸಲಾಗಿದೆ. ಈ ಆದೇಶದಂತೆ 15 ದಿನಗಳ ಕಾಲ ತಮಿಳುನಾಡಿಗೆ ಕರ್ನಾಟಕ ನೀರು ಹರಿಸಬೇಕಿದೆ. ಪ್ರತಿದಿನ 12,500 ಕ್ಯೂಸೆಕ್​ನಂತೆ 15 ದಿನ​ ನೀರನ್ನು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಮನವಿ ಮಾಡಿತ್ತು. ಆದರೆ, 5 ಸಾವಿರ ಕ್ಯೂಸೆಕ್​​ ನೀರು ಬಿಡುವಂತೆ ಪ್ರಾಧಿಕಾರ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಹಳೇ ಸಂಸತ್​ ಭವನದ ಭಾವನಾತ್ಮಕ ಕ್ಷಣ, ಐತಿಹಾಸಿಕ ನಿರ್ಧಾರಗಳನ್ನು ನೆನೆದ ಪ್ರಧಾನಿ ಮೋದಿ

    ಸಿಡಬ್ಲ್ಯುಆರ್​ಸಿ ಆದೇಶವನ್ನು ಕರ್ನಾಟಕ ಸರಿಯಾಗಿ ಪಾಲಿಸಿಲ್ಲ ಎಂದು ತಮಿಳುನಾಡು ಇದೇ ಸಂದರ್ಭದಲ್ಲಿ ಆರೋಪ ಮಾಡಿತು. ಈ ಹಿಂದಿನ ಆದೇಶದಂತೆ ಕರ್ನಾಟಕ 5 ಸಾವಿರ ಕ್ಯೂಸೆಕ್​ ನೀರು ಹರಿಸಿಲ್ಲ ಬದಲಾಗಿ 3 ಸಾವಿರ ಕ್ಯೂಸೆಕ್​ ನೀರು ಮಾತ್ರ ಇದೆ. ತಮಿಳುನಾಡಿನಲ್ಲಿ ಭತ್ತದ ಬೆಳೆ ಒಣಗುತ್ತಿದೆ. ಹೀಗಾಗಿ ಪ್ರತಿದಿನ 12,500 ಕ್ಯೂಸೆಕ್​ ನೀರು ಬಿಡುವಂತೆ ಆದೇಶಿಸಬೇಕೆಂದು ತಮಿಳುನಾಡು ಕ್ಯಾತೆ ತೆಗೆದಿತ್ತು. ಆದರೆ, 5 ಸಾವಿರ ಮಾತ್ರ ಬಿಡುವಂತೆ ಪ್ರಾಧಿಕಾರ ಆದೇಶಿಸಿದೆ.

    ರಾಜ್ಯದ ನಾಲ್ಕೂ ಕಾವೇರಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದ್ದು, ಈ ಸಂದರ್ಭದಲ್ಲಿ ನೀರು ಬಿಡುಗಡೆ ಸಾಧ್ಯ ಇಲ್ಲ ಎಂದಿದ್ದ ಕರ್ನಾಟಕ, ನಿಯಂತ್ರಣ ಸಮಿತಿ ಶಿಫಾರಸುಗಳನ್ನು ಮರುಪರಿಶೀಲಿಸಬೇಕು ಎಂದು ಕಾವೇರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿತ್ತು. ಜತೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೂ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರು.

    ಯೂಟ್ಯೂಬರ್ ವಾಸನ್​ ಬೈಕ್​ ಅಪಘಾತ; ಈ ರೀತಿಯ ಸ್ಟಂಟ್​ಗಳನ್ನು ಬೆಂಬಲಿಸಬೇಡಿ: ರೈಟರ್ ರತ್ನ ಕುಮಾರ್

    Meghana Raj Comes To See Junior Dhruva Sarja | ಧ್ರುವ ಸರ್ಜಾ 2ನೇ ಮಗು ನೋಡಲು ಬಂದ ಮೇಘನಾ ರಾಜ್ ಫ್ಯಾಮಿಲಿ

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts