More

    ಗ್ರಾಚ್ಯುಟಿ ಮಿತಿ ಹೆಚ್ಚಳ, ಕುಟುಂಬ ಪಿಂಚಣಿ: LIC ಏಜೆಂಟರು​, ಉದ್ಯೋಗಿಗಳಿಗೆ ಸಿಹಿ ಸುದ್ದಿ​ ಕೊಟ್ಟ ಸರ್ಕಾರ

    ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಏಜೆಂಟರು ಮತ್ತು ಉದ್ಯೋಗಿಗಳ ಅನುಕೂಲಕ್ಕಾಗಿ ವಿತ್ತ ಸಚಿವಾಲಯವು ಇಂದು (ಸೆ.18) ಹಲವಾರು ಕಲ್ಯಾಣ ಕ್ರಮಗಳಿಗೆ ಅನುಮೋದನೆ ನೀಡಿದೆ.

    ಕಲ್ಯಾಣ ಕ್ರಮಗಳಲ್ಲಿ ಎಲ್ಐಸಿ (ಏಜೆಂಟ್ಸ್) ನಿಯಮಗಳು, 2017ರ ತಿದ್ದುಪಡಿ, ಗ್ರಾಚ್ಯುಟಿ ಮಿತಿ ಹೆಚ್ಚಳ, ನವೀಕರಿಸಿದ ವಿಮೆಯ ಕಮಿಷನ್ ಪಡೆಯಲು ಅರ್ಹತೆ, ಅವಧಿ ವಿಮಾ ರಕ್ಷಣೆ ಮತ್ತು ಎಲ್‌ಐಸಿ ಏಜೆಂಟರು ಮತ್ತು ಉದ್ಯೋಗಿಗಳಿಗೆ ಏಕರೂಪ ಕುಟುಂಬ ಪಿಂಚಣಿ ದರಗಳು ಮುಂತಾದವು ಕಲ್ಯಾಣ ಕ್ರಮಗಳಲ್ಲಿ ಸೇರಿವೆ.

    ಎಲ್ಐಸಿ ಏಜೆಂಟರು ಮತ್ತು ಉದ್ಯೋಗಿಗಳಿಗೆ ಸಂಬಂಧಿಸಿದ ಕಲ್ಯಾಣ ಕ್ರಮಗಳು ಈ ಕೆಳಗಿನಂತಿವೆ
    * ಎಲ್‌ಐಸಿ ಏಜೆಂಟರಿಗೆ ಗ್ರಾಚ್ಯುಟಿ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೂ ಹೆಚ್ಚಳ ಮಾಡಲಾಗಿದೆ. ಇದು LIC ಏಜೆಂಟರ ಕಾರ್ಯನಿರ್ವಹಣಾ ಸ್ಥಿತಿ ಮತ್ತು ಪ್ರಯೋಜನಗಳಲ್ಲಿ ಗಣನೀಯ ಮತ್ತು ಸ್ಥಿರ ಸುಧಾರಣೆಗಳನ್ನು ತರಲಿದೆ.

    * ಮರುನೇಮಕಗೊಂಡ ಏಜೆಂಟರು ನವೀಕರಣಗೊಂಡ ಪಾಲಿಸಿ ಕಮಿಷನ್​​ಗೆ ಅರ್ಹರಾಗುವಂತೆ ಸಕ್ರಿಯಗೊಳಿಸುವುದು, ಇದರಿಂದಾಗಿ ಅವರಿಗೆ ಹೆಚ್ಚಿನ ಆರ್ಥಿಕ ಸ್ಥಿರತೆಯನ್ನು ಒದಗಿಸುವುದು. ಪ್ರಸ್ತುತ LIC ಏಜೆಂಟರು ಹಳೆಯ ಏಜೆನ್ಸಿಯ ಅಡಿಯಲ್ಲಿ ಪೂರ್ಣಗೊಂಡ ಯಾವುದೇ ವ್ಯವಹಾರದ ನವೀಕರಣದ ಕಮಿಷನ್​ಗೆ ಅರ್ಹರಾಗಿರುವುದಿಲ್ಲ.

    * ಏಜೆಂಟರಿಗಾಗಿ ಇರುವ ಟರ್ಮ್ ಇನ್ಶೂರೆನ್ಸ್ ಕವರ್ ಅನ್ನು ಅಸ್ತಿತ್ವದಲ್ಲಿರುವ 3,000-10,000 ರೂಪಾಯಿಗಳಿಂದ 25,000-1,50,000 ರೂ. ವರೆಗೆ ವಿಸ್ತರಿಸಲಾಗಿದೆ. ಟರ್ಮ್ ಇನ್ಶೂರೆನ್ಸ್​ನಲ್ಲಿನ ಈ ಹೆಚ್ಚಳ ಮೃತ ಏಜೆಂಟರ ಕುಟುಂಬಗಳಿಗೆ ಸ್ಥಿರವಾದ ಕಲ್ಯಾಣ ಪ್ರಯೋಜನವನ್ನು ನೀಡುವುದರ ಜೊತೆಗೆ ಗಣನೀಯವಾಗಿ ಉಪಯುಕ್ತವಾಗಲಿದೆ.

    * LIC ಉದ್ಯೋಗಿಗಳ ಕುಟುಂಬಗಳ ಕಲ್ಯಾಣಕ್ಕಾಗಿ 30% ಏಕರೂಪ ದರದಲ್ಲಿ ಕುಟುಂಬ ಪಿಂಚಣಿ ನೆರವು ನೀಡಲಾಗುವುದು.

    ಎಲ್‌ಐಸಿಯ ಅಭಿವೃದ್ಧಿಯಲ್ಲಿ ಮತ್ತು ಭಾರತದಲ್ಲಿ ವಿಮೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ 13 ಲಕ್ಷಕ್ಕೂ ಹೆಚ್ಚು ಏಜೆಂಟರು ಮತ್ತು 1 ಲಕ್ಷಕ್ಕೂ ಹೆಚ್ಚು ಖಾಯಂ ಉದ್ಯೋಗಿಗಳು, ಈ ಕಲ್ಯಾಣ ಕ್ರಮಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ಕೇಂದ್ರದ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

    ಬೆಂಗಳೂರಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಹೆಸರು ತಳಕು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts