ಪ್ರೀತಿಗಾಗಿ ಅಂಗಲಾಚಿ 4.3 ಕೋಟಿ ರೂ. ಆಸ್ತಿ ಒಡತಿ ಇದೀಗ ಅನಾಥೆ; ನಂಬಿದವರಿಂದಲೇ ಮೋಸ?: ಈ ವಿಷಯದಲ್ಲಿ ಹುಷಾರಾಗಿರಿ! | Cheated

dk - 2025-02-19T123258.321
Published on

Cheated:ಪ್ರೀತಿಗಾಗಿ ಅಂಗಲಾಚಿದ 53ರ ಮಹಿಳೆಯೊಬ್ಬಳಿಗೆ ನಂಬಿದವರಿಂದಲೇ ಒಂದೇ ವಿಚಾರದಲ್ಲಿ ಪ್ರತ್ಯೇಕವಾಗಿ ಎರಡು ಬಾರಿ ಒಟ್ಟು 4.3 ಕೋಟಿ ರೂ. ಕಳೆದುಕೊಂಡು ಮೋಸಹೋಗಿದ್ದಾರೆ. ಅಲ್ಲದೆ, ಇದೀಗ ಆಕೆ ಅನಾಥವಾಗಿ ಯಾರು ಮೋಸ ಹೊಗದೀರಿ ಎಂದು ಮನವಿ ಮಾಡುತ್ತಿದ್ದಾರೆ.

ಹೌದು, ಆಸ್ಟ್ರೇಲಿಯಾದ ಪರ್ತ್​ ಮೂಲದ ಆನೆಟ್​ ಫೋರ್ಡ್​​ ಮಹಿಳೆ ಇದೀಗ ಮೋಸಗೊಳಗಾಗಿ ಅನಾಥೆಯಾಗಿದ್ದಾಳೆ. ಆನ್​ಲೈನ್​ನಲ್ಲಿ ಸಂಗಾತಿಯನ್ನು ಹುಡುಕುವಾಗ ವಂಚಕರು 4.3 ಕೋಟಿ ರೂ. ವಂಚಿಸಿದ್ದಾರೆ.

2018ರಲ್ಲಿ 33 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಫೋರ್ಡ್​ ತನ್ನ ಗಂಡನಿಂದ ವಿಚ್ಛೇದನ ಪಡೆದರು. ಗಂಡನಿಂದ ದೂರವಾದ ಫೋರ್ಡ್​, ಕೆಲ ದಿನಗಳ ಬಳಿಕ ಡೇಟಿಂಗ್​ ಸೈಟ್​(ಪ್ಲೆಂಟಿ ಆಫ್​ ಫಿಶ್​) ಸಬ್​ಸ್ಕ್ರೈಬ್​ ಮಾಡಿಕೊಂಡು ಮತ್ತೊಬ್ಬ ಸಂಗಾತಿಯನ್ನು ಹುಡುಕಾಟ ಆರಂಭಿಸಿದ್ದಾರೆ. ಇನ್ನು ಆ್ಯಪ್​ನಲ್ಲಿ ಪರಿಚಿತನಾದ ವಿಲಿಯಂ ಎಂಬ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದಾಳೆ.

ಮುಂದುವರೆದು, ಹಲವಾರು ತಿಂಗಳು ಬಳಿಕ ವಿಲಿಯಂ, ಆನೆಟ್​ ಪೋರ್ಡ್​ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆಗಾಲೇ ಪೋರ್ಡ್​ ಇತನನ್ನು ಸಂಪೂರ್ಣವಾಗಿ ನಂಬಿದ್ದಳು. ಬಳಿಕ ಕೌಲಂಲಪುರದ ಸಿಟಿಯ ಬಸ್​​ಸ್ಟಾಪ್​ ಒಂದರಲ್ಲಿ ತನ್ ಪರ್ಸ್​ ಮತ್ತು ಬ್ಯಾಗ್​ ಕಳುವಾಗಿದ್ದರ ಬಗ್ಗೆ ಪೋರ್ಡ್​ ಬಳಿ ಹೇಳಿ, ಪ್ರಾಥಮಿಕವಾಗಿ 2,75,000 ರೂ.(5000 ಡಾಲರ್) ಖಾತೆಗೆ ಹಾಕಿಸಿಕೊಂಡಿದ್ದಾನೆ. ಇದೇ ಚಾಳಿಯನ್ನು ಮುಂದುವರೆಸಿದ ವಿಲಿಯಂ ಆಸ್ಪತ್ರೆ ಎಮರ್ಜೆನ್ಸಿ ಸೇರಿದಂತೆ ಇತರ ಕೆಲಸಗಳಿಗಾಗಿ ಆಕೆಯನ್ನು ನಂಬಿಸಿ 2 ಕೋಟಿ ರೂ. ವಂಚಿಸಿದ್ದಾನೆ. ಇತನ ಮೋಸದ ಜಾಲದ ಬಲೆ ತಿಳಿಯುವುದರೊಳಗೆ ವಿಲಿಯಂ ಫೋನ್​ ಸ್ವೀಚ್​ ಆಪ್​ ಮಾಡಿಕೊಂಡು ಆ್ಯಪ್​ನಿಂದ ನಾಪತ್ತೆಯಾಗಿದ್ದಾನೆ.

ಬಳಿಕ ಇತನ ಮೇಲೆ ಸೈಬರ್​ ಕ್ರೈಂ ಪ್ರಕರಣದಡಿ ಕೇಸ್ ದಾಖಲಿಸಿದ್ದಾಳೆ. ಈ ಕೇಸ್​ ಸತತವಾಗಿ ನಾಲ್ಕು ವರ್ಷಗಳು ಜಾಲಡಿದರೂ ಆರೋಪಿ ಪತ್ತೆಯಾಗಿಲ್ಲ. ಇದನ್ನೇ ಅವಕಾಶವಾಗಿ ಮಾಡಿಕೊಂಡ ವಂಚಕ ನಲ್ಸನ್​ ಎಂಬಾತ ಕೇಸ್​ ಮುಂದುವರೆಸುವುದಾಗಿ 2.3 ಕೋಟಿ ರೂ. ವಂಚಿಸಿದ್ದಾನೆ. ಇದೀಗ ಒಂದೇ ಪ್ರಕರಣದಡಿ ಎರಡು ಬಾರಿ ಮೋಸಹೊದ ಆನೆಟ್​ ಪೋರ್ಡ್​ ಅನಾಥಶ್ರಮದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ, ಇಂತಹ ಮೋಸಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ(ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net