Cardamoms:ಜೀರ್ಣಾಂಗ ವ್ಯವಸ್ಥೆಗೆ ಏಲಕ್ಕಿ ಅನೇಕ ಪ್ರಯೋಜನೆಗಳನ್ನು ಹೊಂದಿದೆ. ಊಟದ ನಂತರ ಎರಡು ಏಲಕ್ಕಿ ಕಾಳುಗಳನ್ನು ತಿಂದರೆ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಶೀಘ್ರವೇ ಶಮನವಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.
ಹೌದು, ಪ್ರತಿದಿನ ರಾತ್ರಿ ಊಟದ ಬಳಿಕ ಅಥವಾ ಮಲಗುವ ಮುನ್ನ ಎರಡು ಏಲಕ್ಕಿ ಕಾಳುಗಳನ್ನು ಅಗೆಯುವುದರಿಂದ ಗ್ಯಾಸ್, ಆಮ್ಲೀಯತೆ ಮತ್ತು ಮಲಬದ್ಧತೆಯಂತ ಸಮಸ್ಯೆಗಳು ಪರಿಹಾರವಾಗುತ್ತದೆ. ಹೀಗಾಗಿ, ಏಲಕ್ಕಿ ತಿನ್ನುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗಿ ಹೆಚ್ಚಿಸುತ್ತದೆ. ಅಲ್ಲದೆ, ರಾತ್ರಿಯಲ್ಲಿ ಏಲಕ್ಕಿ ತಿನ್ನುವುದರಿಂದ ತೂಕ ಇಳಿಕೆಗೆ ತುಂಬಾ ಸಹಕಾರಿ ಎಂದು ವೈದ್ಯರು ಹೇಳುತ್ತಾರೆ.
ಏಲಕ್ಕಿ ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಹೀಗಾಗಿ, ಇದು ದೇಹದಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ಹೊರ ಹಾಕುತ್ತದೆ. ಜತೆಗೆ ಮೂತ್ರಪಿಂಡದ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ದಿನಾ ರಾತ್ರಿ ಏಲಕ್ಕಿ ತಿನ್ನುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಬ್ಯಾಕ್ಟೀರಿಯಾದಿಂದ ಹಲ್ಲುಗಳು ಮತ್ತು ವಸಡುಗಳನ್ನು ಕಾಪಾಡುತ್ತದೆ.
ಇನ್ನು ಏಲಕ್ಕಿ ಆರೋಗ್ಯ ಪ್ರಯೋಜನಗಳನ್ನು ಮಾತ್ರವಲ್ಲದೆ, ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಗುಣಪಡಿಸುವ ಗುಣಗಳನ್ನು ಸಹ ಹೊಂದಿದೆ. ಏಲಕ್ಕಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಚರ್ಮವು ಹೊಳೆಯುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಗಳ ವಿರುದ್ಧ ಹೋರಾಡುತ್ತವೆ. ಏಲಕ್ಕಿಯಲ್ಲಿರುವ ಪೋಷಕಾಂಶಗಳು ಕೂದಲನ್ನು ಬಲಪಡಿಸುತ್ತವೆ. ಅವು ತಲೆಹೊಟ್ಟು ಕೂಡ ಕಡಿಮೆ ಮಾಡುತ್ತವೆ.(ಏಜೆನ್ಸೀಸ್)