ಇದೇ ಟೀಮ್​ IPL 2025ರ ಟ್ರೋಫಿ ಗೆಲ್ಲಲಿದೆ; ಇವರೇ ಮ್ಯಾನ್​​ ಆಫ್​​ ದಿ ಮ್ಯಾಚ್​ ವಿನ್ನರ್​: ವಾರ್ನರ್​ ಭವಿಷ್ಯ!

dk - 2025-06-01T154933.860
Published on

ಈ ಬಾರಿಯ IPL 2025ರ 18ನೇ ಆವೃತ್ತಿ ಕೊನೆ ಹಂತ ತಲುಪಿದ್ದು, ಇದಾಗಲೇ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ಫೈನಲ್​ಗೆ ತಲುಪಿದೆ. ಇನ್ನು ಇಂದು ನಡೆಯುವ (ಜೂ.1) ಕ್ವಾಲಿಫೈಯರ್​-2ರಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವೇ ಜಿದ್ದಾಜಿದ್ದಾಯ ಪಂದ್ಯ ನಡೆಯಲಿದ್ದು, ಯಾವ ತಂಡ ಫೈನಲ್​​ಗೆ ತಲುಪಲಿದೆ ಎಂಬ ಕೂತುಹಲ ಎಲ್ಲರಲ್ಲೂ ಇದೆ.

ಇದೀಗ ಮೂರು ತಂಡಗಳ ನಡುವೆ IPL 2025ರ ಟ್ರೋಫಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಅಲ್ಲದೆ, ಇಂದು ನಡೆಯುವ ಪಂದ್ಯದಲ್ಲಿ ಸೋತ ತಂಡ ಹೊರ ಬೀಳಲಿದೆ. ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜೂ.3ರಂದು ನಡೆಯುವ ಫೈನಲ್​​ ಪಂದ್ಯದಲ್ಲಿ ಕಪ್​ ಯಾರ ಪಾಲಾಗಲಿದೆ ಎಂಬ ನಿರೀಕ್ಷೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಗರಿಗೆದರಿದೆ. ಇದರ ನಡುವೆ ಆಸ್ಟೇಲಿಯಾದ ಹಾಗೂ ಸನ್​​ರೈಸರ್ಸ್​ ಹೈದರಾಬಾದ್​ ಮಾಜಿ ಆಟಗಾರ ಡೇವಿಡ್​ ವಾರ್ನರ್​ ಕಪ್​​ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಐಪಿಎಲ್ ಮೊದಲ ಆವೃತ್ತಿಯ ನಂತರ ಯಾವುದೇ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಆವೃತ್ತಿಯಲ್ಲಿ ಉತ್ತಮವಾಗಿ ಕಾಣುತ್ತಿದೆ. ತಂಡದ ಆಟಗಾರರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ - ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕ್ವಾಲಿಫೈಯರ್-1 ರಲ್ಲಿ ಆರ್‌ಸಿಬಿ ಪಂಜಾಬ್ ತಂಡವನ್ನು ಸೋಲಿಸಿ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ಡೇವಿಡ್ ವಾರ್ನರ್ ಭವಿಷ್ಯ ನುಡಿದು ಆರ್‌ಸಿಬಿ ಎಂದು ಹೆಸರಿಸಿದರು. "ಆರ್‌ಸಿಬಿ ಮತ್ತು ಜೋಶ್ ಹ್ಯಾಜಲ್‌ವುಡ್ ಪಂದ್ಯದ ಆಟಗಾರ ಎಂದು ನಾನು ಭಾವಿಸುತ್ತೇನೆ" ಎಂದು ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net