ಚಿರಂಜೀವಿ ಕಳುಹಿಸಿದ ಗಿಫ್ಟ್ ನೋಡಿ ಶಾಕ್​ ಆದ ಕಾಮಿಡಿಯನ್ ಅಲಿ ದಂಪತಿ!: ಉಡುಗೊರೆ ಏನು ಗೊತ್ತೆ! | Comedian Ali

dk - 2025-06-01T145938.085
Published on

Comedian Ali: ಭಾರತೀಯ ಚಿತ್ರರಂಗದ ದಿಗ್ಗಜ ನಟ ಹಾಗೂ ರಾಜಕಾರಣಿ ಮೆಗಸ್ಟಾರ್​ ಚಿರಂಜೀವಿ ತಮ್ಮ ಸಹ ನಟ ಖ್ಯಾತ ಹಾಸ್ಯ ನಟ ಅಲಿ ದಂಪತಗಳಿಗೆ ವಿಶೇಷ ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾರೆ.ಇದನ್ನು ನೋಡಿದ ಹಾಲಿ ದಂಪತಿಗಳು ಶಾಕ್​ ಆಗಿದ್ದಾರೆ.

ಹೌದು, ಚಿರಂಜೀವಿ ಅವರ ಅನೇಕ ಸಿನಿಮಾಗಳಲ್ಲಿ ಅಲಿ ಅವರು ನಟಿಸಿದ್ದಾರೆ. ಹೀಗಾಗಿ, ಚಿರಂಜೀವಿಗೆ ಅಲಿ ಎಂದ್ರೆ ಎಲ್ಲಿಲ್ಲದ ಪ್ರೀತಿ. ಚಿರಂಜೀವಿ ಅಲಿಗೆ ಗಿಫ್ಟ್​ ಕಳುಹಿಸುತ್ತಿರುವುದು ಇದೇ ಮೊದಲಲ್ಲ. ಆಗಾಗ ಒಂದಲ್ಲೊಂದು ಪ್ರೀತಿಯ ಉಡುಗೊರೆಯನ್ನು ಕಳುಹಿಸಿದ್ದಾರೆ. ಇದೀಗ ತಮ್ಮ ಮನೆಯಂಗಳದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮಗದೇ ಈ ಭಾರಿ ಬೇರೆ ರೀತಿಯ ಕೆಲ ಗಿಫ್ಟ್​ ಕಳುಹಿಸಿದ್ದಾರೆ. ಈ ಕುರಿತು ಸ್ವತ ಅಲಿ ದಂಪತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊ0ಡಿದ್ದಾರೆ.

ಚಿರಂಜೀವಿ ದಂಪತಿ ಅಲಿಗೆ ಕಳುಹಿಸಿದ್ದೇನು..? ಚಿರಂಜೀವಿ ಮತ್ತು ಸುರೇಖಾ ದಂಪತಿಗಳು ಆವಕಾಯ ಪಚ್ಚಡಿ, ಉಪ್ಮಾ, ಪುಳಿಹೋರ, ಕೇಸರಿ, ರಸಂ, ಪೊಂಗಲ್ ಮತ್ತು ಇತರ ರೆಡಿ ಟು ಮಿಕ್ಸ್ ಪೌಡರ್‌ಗಳಂತಹ ರೆಡಿ ಟು ಮಿಕ್ಸ್ ಪೌಡರ್‌ಗಳನ್ನು ಅಲಿ ದಂಪತಿಗಳಿಗೆ ಕಳುಹಿಸಿದರು. ಮೆಗಾಸ್ಟಾರ್ ಇವುಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಿ ಅಲಿಯ ಮನೆಗೆ ಕಳುಹಿಸಿದರು. ಅಲಿ ಮತ್ತು ಅವರ ಪತ್ನಿ ಜುಬೇದಾ ಇದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.

ಅಲಿ ದಂಪತಿ ಹೇಳಿದ್ದೇನು..?

ಅಲಿ ದಂಪತಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಇವುಗಳನ್ನು ನೋಡಿದ ಸಿನಿಮಾ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಹುಚ್ಚುಚ್ಚಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಚಿರಂಜೀವಿ, ಪತ್ನಿ ಸುರೇಖಾ ಮತ್ತು ಸೊಸೆ ಉಪಾಸನಾ ಅವರೊಂದಿಗೆ ಕಳೆದ ವರ್ಷ ಅಟ್ಟಮ್ಮಾಸ್ ಕಿಚನ್ ಎಂಬ ಆಹಾರ ವ್ಯವಹಾರವನ್ನು ಪ್ರಾರಂಭಿಸಿದರು. ಪ್ರಯಾಣದಲ್ಲಿರುವಾಗ ಅಡುಗೆಗಾಗಿ ರೆಡಿ-ಟು-ಮಿಕ್ಸ್ ಪೌಡರ್‌ಗಳನ್ನು ಮಾರಾಟ ಮಾಡುತ್ತಾರೆ. ಇದೀಗ ಇದನ್ನು ನಮಗೆ ಕಳುಹಿಸಿದ್ದಾರೆ. ಇದು ನಮಗೆ ತುಂಬಾ ಸಂತೋಷ ನೀಡಿದೆ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net