ಸಿನಿಮಾ

ಈ ಶ್ವಾನದ ವಾರ್ಷಿಕ ಆದಾಯ ಎಷ್ಟು ಗೊತ್ತಾ?; ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಾಯಿ

ಸಾಮಾಜಿಕ ಜಾಲತಾಣ ಉಆರನ್ನ ಬೇಕಾದರೂ ರಾತ್ರೋ ರಾತ್ರಿ ಸೂಪರ್​ಸ್ಟಾರ್​ಗಳನ್ನಾಗಿ ಮಾಡುತ್ತದೆ. ಇದೇ ರೀತಿಯ ಹಲವಾರು ಉದಾಹರಣೆಗಳನ್ನು ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.

ಇದೀಗ ಇದೇ ರೀತಿಯ ಘಟನೆ ಒಂದರಲ್ಲಿ ಶ್ವಾನ ಒಂದು ವರ್ಷಕ್ಕೆ ಕೋಟಿ ರೂಪಾಯಿ ಸಂಪಾದಿಸುತ್ತದೆ ಎಂದು ಎಲ್ಲಾದರೂ ಕೇಳಿದ್ದೀರಾ.

ಹೌದು ಗೋಲ್ಡನ್​ ರೆಟ್ರಿವರ್​ ತಳಿಯ ಟಕ್ಕರ್​ ಎಂಬ ಹೆಸರಿನ ಶ್ವಾನವು ಸಾಮಾಜಿಕ ಜಾಲತಾಣಗಳಿಂದ ವರ್ಷಕ್ಕೆ 8, 28, 46, 400 ಕೋಟಿ ರೂಪಾಯಿ ಸಂಪಾದಿಸುತ್ತಿದ್ದು ಈ ಬಗ್ಗೆ ತಮ್ಮ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.

tucker (1)
ಮಾಲಕಿ ಜೊತೆ ಶ್ವಾನ

ಕೋಟಿ ಲೆಕ್ಕದಲ್ಲಿ ವಾರ್ಷಿಕ ಆದಾಯ

ಕರ್ಟ್ನಿ ಬಡ್ಜಿನ್ ಮತ್ತು ಮೈಕ್ ದಂಪತಿಯೂ ಟಕ್ಕರ್​ ಎರಡು ವರ್ಷ ಇದ್ದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅದರ ತುಂಟಾಟದ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದರು. ದಿನ ಕಳೆದಂತೆ ಅದರ ಜನಪ್ರಿಯತೆ ಹೆಚ್ಚಾಯಿತು ಮತ್ತು ಹಿಂಬಾಲಕರು ಕೂಡ ಜಾಸ್ತಿಯಾಗುತ್ತ ಹೋದರೂ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಲಕಿ ಟಕ್ಕರ್ ಕುರಿತು ಹಾಕುವ ಒಂದು ಪೋಸ್ಟ್​ನಿಂದಲೇ​ ಯೂಟ್ಯೂಬ್​ ಒಂದರಲ್ಲೇ 33,12,000-49,68,030 ಲಕ್ಷ ರೂಪಾಯಿ ಸಂಪಾದಿಸುತ್ತಾನೆ. ಇನ್ಸ್​​ಟಾಗ್ರಾಂನಲ್ಲಿ ನಾವು ಹಾಕುವ ಪ್ರತಿ ಸ್ಟೋರಿಗಳಿಂದ 16,58,282 ರೂಪಾಯಿ ಸಂಪಾದಿಸುತ್ತಾನೆ.

ಟಕ್ಕರ್​​ ಇನ್‌ಸ್ಟಾಗ್ರಾಮ್‌ನಲ್ಲಿ 3 ಮಿಲಿಯನ್, ಫೇಸ್‌ಬುಕ್‌ನಲ್ಲಿ 4.3 ಮಿಲಿಯನ್, ಟ್ವಿಟರ್‌ನಲ್ಲಿ 62,400 ಮತ್ತು ಯೂಟ್ಯೂಬ್‌ನಲ್ಲಿ 5.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾನೆ ಎಂದು ಮಾಲಕಿ ಸಂತಸ ವ್ಯಕ್ತಪಡಿಸಿದ್ದಾರೆ.

Latest Posts

ಲೈಫ್‌ಸ್ಟೈಲ್