ವಿಂಡೋ ಗ್ಲಾಸ್​ಗೆ ಬಾಲಕಿ ಕತ್ತು ಸಿಲುಕಿ ಮೃತ್ಯು

Window Seat
ಸಾಂಧರ್ಭಿಕ ಚಿತ್ರ
Published on

ಹೈದರಾಬಾದ್​: ಹೃದಯ ವಿದ್ರಾವಕ ಘಟನೆ ಒಂದರಲ್ಲಿ ಕಾರ್​ ಚಾಲಕನ ಅಜಾಗರೂಕತೆಯಿಂದ 9 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ತೆಲಂಗಾಣದ ಸೂರ್ಯಪೇಟ್​ ಜಿಲ್ಲೆಯಲ್ಲಿ ನಡೆದಿದೆ.

ಕಾರಿನಲ್ಲಿ ಆಟವಾಡುತ್ತಿದ್ದ ವೇಳೆ ಚಾಲಕ ಕಿಟಿಕಿಯ ಗಾಜುಗಳನ್ನು ಏರಿಸಿದ್ದು ಈ ವೇಳೆ ಬಾಲಕಿ ಕತ್ತು ಸಿಲುಕಿಕೊಂಡಿದ್ದು ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾಳೆ ದಂಉ ಪೊಲೀಸರು ತಿಳಿಸಿದ್ದಾರೆ.

ಮದುವೆ ಮನೆಯಲ್ಲಿ ಅವಘಡ

ಮೃತ ದುರ್ದೈವಿಯನ್ನು ಬಾನೋತ್​ ಇಂದ್ರಜಾ(9) ಎಂದು ತಿಳಿದು ಬಂದಿದ್ದು ನೂತನ ವಧು-ವರನ ಜೊತೆ ಕಾರಿನ ಹಿಂದಿ ಸೀಟಿನಲ್ಲಿ ಆಟವಾಡುತ್ತ ಕತ್ತನ್ನು ಕಿಟಿಕಿಯಿಂದ ಹೊರಹಾಕಿದ್ದಾರೆ. ಇದನ್ನು ಗಮನಿಸದ ಚಾಲಕ ಕಿಟಿಕಿಯ ಗಾಜುಗಳನ್ನು ಮೇಲಕ್ಕೇರಿಸಿದ್ದಾನೆ.

ಬಾಲಕಿಯ ಕುತ್ತಿಗೆ ಕಾರಿನ ಕಿಟಕಿಯಲ್ಲಿ ಸಿಲುಕಿಕೊಂಡಿದ್ದು ಉಸಿರಾಡಲು ಸಾಧ್ಯವಾಗದೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಘಟನೆ ಸಂಬಂಧ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಕಾರ್​ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net