More

    VIDEO| ಮಾಜಿ ಡಿಸಿಎಂ ಜತೆ ಪೊಲೀಸರ ಅನುಚಿತ ವರ್ತನೆ; ಕಿಡಿಕಾರಿದ ಎಎಪಿ

    ನವದೆಹಲಿ: 2020-21ರಲ್ಲಿ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಎಎಪಿ ನಾಯಕರ ಜಟಾಪಟಿ ತಾರಕಕ್ಕೇರಿದೆ.

    ಮಂಗಳವಾರ ದೆಹಲಿ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರನ್ನು ಬಿಗಿ ಪೊಲೀಸ್​ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಕುರಿತು ಎಎಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ.

    ಅನುಚಿತ ವರ್ತನೆ

    ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಪತ್ರಕರ್ತರು ಮನೀಶ್​ ಅವರನ್ನು ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಿ ನೌಕರರ ನಡುವಿನ ಜಟಾಪಟಿ ಕುರಿತು ಪ್ರಶ್ನೆಯನ್ನು ಕೇಳುತ್ತಾರೆ.

    ಈ ವೇಳೆ ಸುದ್ದಿಗಾರರ ಬಳಿ ಮಾತನಾಡಲು ಮುಂದಾದ ಸಿಸೋಡಿಯಾ ಅವರನ್ನು ಪೊಲೀಸ್​ ಅಧಿಕಾರಿಯೊಬ್ಬರು ಮಾಧ್ಯಮದವರನ್ನು ತಳುತ್ತಾ ಕರೆದೊಯ್ಯುವುದು ಕಂಡು ಬರುತ್ತದೆ. ಪೊಲೀಸರು ಅವರ ಕತ್ತಿನ ಪಟ್ಟಿಗೆ ಕೈ ಹಾಕಿ ಎಳೆದೊಯ್ಯುವುದು ಸದ್ಯ ವೈರಲ್​ ವಿಡಿಯೋದಲ್ಲಿ ಕಂಡು ಬಂದಿದೆ.

    ಯಾರ ಆಜ್ಞೆ ಮೇಲೆ ಕೆಲಸ ಮಾಡುತ್ತಿದ್ದಾರೆ

    ಈ ಕುರಿತು ಟ್ವೀಟ್​ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಈ ರೀತಿ ಅನುಚಿತವಾಗಿ ವರ್ತಿಸುವ ಹಕ್ಕೆ ಪೊಲೀಸರಿಗೆ ಇದೆಯಾ. ಈಗೆ ಮಾಡುವಂತೆ ಮೇಲಿಂದ ಆಜ್ಞೆ ಆಗಿದೆಯೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ಆರೋಪಿತರ ಸ್ಥಾನದಲ್ಲಿರುವವರು ಮಾಧ್ಯಮಗಳಿಗೆ ಹೇಳಿಕೆ ಕೊಡುವುದು ಕಾನೂನಿಗೆ ವಿರುದ್ಧವಾಗಿದೆ. ವೈರಲ್​ ಆಘಿರುವ ವಿಡಿಯೋದಲ್ಲಿ ನಾವು ಮನೀಶ್​ ಅವರಿಗೆ ಭದ್ರತೆಯನ್ನು ಒದಗಿಸಿದ್ದೇವೆ ಇಲ್ಲಿ ಯಾರು ಅನುಚಿತವಾಗಿ ವರ್ತಿಸಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts