More

    ಸಿಡ್ನಿಯಲ್ಲಿ ಪ್ರಧಾನಿ ಮೋದಿ; ಭಾರತ-ಆಸ್ಟ್ರೇಲಿಯಾ ಸಂಬಂಧ ಇನ್ನಷ್ಟು ಗಟ್ಟಿ

    ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸಲದಲಿರುವ ಭಾರತದ ಪ್ರಧಾನಿ ನರೇಂದ್ರ ಅವರಿಗೆ ಭರ್ಜರಿ ಸ್ವಾಗತ ದೊರೆತ್ತಿದ್ದು ಅಲ್ಲಿನ ಪಿಎಂ ಆಂಥೊನಿ ಆಲ್ಬನೀಸ್ ಅವರೊಂದಿಗೆ ಸಿಡ್ನಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

    ಇನ್ನು ಸಿಡ್ನಿಯಲ್ಲಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ಬಣ್ಣಿಸಿದ್ದಾರೆ.

    3D ಎಂದು ಕರೆಯಲಾಗುತ್ತಿದೆ

    ಈ ಮೊದಲು ಭಾರತ ಹಾಗೂ ಆಸ್ಟ್ರೇಲಿಯ ಆನಡುವಿನ ಸಂಬಂಧವನ್ನು 3ಸಿ ಎಂದು ಕರೆಯಲಾಗುತ್ತಿತ್ತು. ಕ್ರಿಕೆಟ್​, ಕಾಮನ್​ವೆಲ್ತ್​, ಕರಿ ಎಂದು ಗುರುತಿಸಲಾಗುತ್ತಿತ್ತು. ಆದರೆ, ನಂತರದ ದಿನಗಳಲ್ಲಿ ಡೆಮಾಕ್ರಸಿ, ಡಯ್​ಪೋರಾ, ದೋಸ್ತಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.

    ಉಭಯ ದೇಶಗಳ ಸಂಬಂಧವು ಶಿಕ್ಷಣ, ಇಂಧನ, ಆರ್ಥಿಕತೆ ಮೇಲೆ ಅವಲಂಬಿತವಾಗಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ, ನನ್ ಪ್ರಕಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧವು ಇವೆಲ್ಲಕ್ಕಿಂತ ಮೀರಿದ್ದು ಎಂದು ಬಣ್ಣಿಸಿದ್ಧಾರೆ.

    ಒಮ್ಮೆ ಕರೆದುಕೊಂಡು ಹೋಗಿ

    ನಮ್ಮ ಜೀವಶೈಲಿ ವಿಭಿನ್ನವಾಗಿರಬಹುದು ಆದರೆ, ಯೋಗ, ಕ್ರೀಡೆ, ಮನರಂಜನಾ ಕ್ಷೇತ್ರಗಳು ನಮ್ಮನ್ನೆಲ್ಲಾ ಬೆಸೆಯುತ್ತಿದೆ. ಉಭಯ ದೇಶಗಳ ನಡುವಿನ ಸಂಬಂಧ ವೃದ್ದಿಸಲು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಭಾರತೀಯರು ಕಾರಣ ಎಂದು ಹೇಳಿದ್ದಾರೆ.

    ಹ್ಯಾರಿಸ್​ ಪಾರ್ಕ್​ನಲ್ಲಿರುವ ಜೈಪುರ ಸ್ವೀಟ್ಸ್​​ನ ಚಾಟ್ಸ್​​ ಮತ್ತು ಜಿಲೇಬಿ ತುಂಬಾ ಚೆನ್ನಾಗಿರುತ್ತದೆ ಎಂದು ಕೇಳಿದ್ದೇನೆ. ನೀವೆಲ್ಲರೂ ನನ್ನ ಸ್ನೇಹಿತ ಅಲ್ಬನೀಸ್ ಅವರನ್ನು ಆ ಸ್ಥಳಕ್ಕೆ ಕರೆದೊಯ್ಯಬೇಕೆಂದು ಆಸ್ಟ್ರೇಲಿಯಾದಲ್ಲಿ ವಾಸಿಸುವ ಭಾರತೀಯರಿಗೆ ಕರೆ ನೀಡಿದ್ಧಾರೆ.

    ಭಾರತಕ್ಕೆ ಸಾಮರ್ಥ್ಯ ಅಥವಾ ಸಂಪನ್ಮೂಲಗಳ ಕೊರತೆ ಇಲ್ಲ. ಏಕೆಂದರೆ ವಿಶ್ವದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ವಿಶ್ವ ಆರ್ಥಿಕತೆಯಲ್ಲಿ ನಮ್ಮ ದೇಶ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ವ ಬ್ಯಾಂಕ್​ ಪರಿಗಣಿಸಿದೆ.

    100 ವರ್ಷಗಳಿಗೊಮ್ಮೆ ಎದುರಾಗುವ ಬಿಕ್ಕಟ್ಟಿನ ಸಮಸ್ಯೆಯ ನಡುವೆ ಭಾರತ ಕಳೆದ ಕೆಲವು ವರ್ಷಗಳಿಂದ ದಾಖಲೆಯ ರಫ್ತು ಮಾಡಿದೆ. ಜಾಗತಿಕ ಮಟ್ಟದಲ್ಲಿ ಭಾರತ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಉದಾಹರಣೆ ಡಿಜಿಟಲ್​ ಕ್ರಾಂತಿ ಎಂದು ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts