ಸಿನಿಮಾ

ಪ್ರಧಾನಿ ಮೋದಿ ‘ಬಾಸ್’: ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್

ಸಿಡ್ನಿ: ಮಾರ್ಚ್ ತಿಂಗಳಿನಲ್ಲಿ ಕೈಗೊಂಡಿದ್ದ ಭಾರತ ಪ್ರವಾಸ ನೆನಪಿನಲ್ಲಿ ಉಳಿಯುವಂತಹದ್ದು. ಗುಜರಾತ್​ನಲ್ಲಿ ಹೋಳಿ ಆಚರಿಸಿರುವುದು, ದೆಹಲಿಯಲ್ಲಿ ಮಹಾತ್ಮಾ ಗಾಂಧಿ ಅವರ ಹಾರ ಹಾಕಿರುವುದು ಮರೆಯಲಾಗದ ಕ್ಷಣಗಳು. ಹೋದಲ್ಲೆಲ್ಲಾ ಭಾರತ ಮತ್ತು ಆಸ್ಟ್ರೇಲಿಯಾ ಜನರ ನಡುವೆ ಇರುವ ಆತ್ಮೀಯವಾದ ಸಂಬಂಧವನ್ನು ಅನುಭವಿಸಿದೆ. ಭಾರತವನ್ನು ಅರ್ಥೈಸಿಕೊಳ್ಳಬೇಕೆಂದು ಬಯಸಿದರೆ ಅಲ್ಲಿನ ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸಿ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದರು.

ಸಿಡ್ನಿಯಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಆಸ್ಟ್ರೇಲಿಯಾ ಪ್ರಧಾನಿ ಮಾತನಾಡುತ್ತಾ, ಪ್ರಧಾನಿ ಮೋದಿ ಅವರನ್ನು ನಗುತ್ತಾ ‘ಬಾಸ್’ ಎಂದು ಕರೆದರು. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಮೋದಿ ಅವರ ಜನಪ್ರಿಯತೆಯನ್ನು ಪೌರಾಣಿಕ ರಾಕ್‌ಸ್ಟಾರ್ ಬ್ರೂಸ್ ಸ್ಪ್ರಿಂಗ್‌ಸ್ಟೀನ್‌ಗೆ ಹೋಲಿಸಿದರು. ಪ್ರಧಾನಿ ಮೋದಿಗೆ ಅವರಿಗೆ ಸಿಕ್ಕಿದ ಸ್ವಾಗತ ಈವರೆಗೆ ಯಾರಿಗೂ ಸಿಕ್ಕಿಲ್ಲ ಎಂದು ಹೇಳಿದರು.

ಉಭಯ ದೇಶದ ಪ್ರಧಾನಿಗಳು ವೇದಿಕೆಗೆ ಆಗಮಿಸುವ ವೇಳೆ ಪ್ರಧಾನಿ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಈ ವೇಳೆ ನೆರೆದಿದ್ದ ಜನರು ಮೋದಿ… ಮೋದಿ… ಮೋದಿ ಎಂದು ಜೈಕಾರ ಕೂಗಿದರು. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್