More

    ಪುರುಷರ ಜಾವೆಲಿನ್ ಶ್ರೇಯಾಂಕದಲ್ಲಿ ವಿಶ್ವದಲ್ಲೇ ನಂ.1 ಪಟ್ಟಕ್ಕೇರಿದ ಚಿನ್ನದ ಹುಡುಗ ನೀರಜ್​ ಚೋಪ್ರಾ

    ನವದಹಲಿ: ಒಲಿಂಪಿಕ್​ ಚಿನ್ನದ ಪದಕ ವಿಜೇತ ಭಾರತೀಯ ನೀರಜ್​ ಚೋಪ್ರಾ ಅವರು ವಿಶ್ವದ ನಂಬರ್​ ಒನ್​ ಜಾವೆಲಿನ್​ ಎಸೆತಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಆ ಮೂಲಕ ನೀರಜ್‌ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮುಡಿಗೇರಿಸಿಕೊಂಡಿದ್ದಾರೆ. 2020ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಟ್ರ್ಯಾಕ್‌ ಆಂಡ್‌ ಫೀಲ್ಡ್‌ ಅಥ್ಲೆಟಿಕ್ಸ್‌ ವಿಭಾಗದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು.

    25 ವರ್ಷದ ನೀರಜ್​ ಚೋಪ್ರಾ 1,455 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಗ್ರೆನೆಡಾದ ಆಂಡರ್ಸನ್‌ ಪೀಟರ್ಸ್‌ 1433 ಅಂಕದೊಂದಿಗೆ 2ನೆ ಸ್ಥಾನಕ್ಕೆ ಕುಸಿದಿದ್ದಾರೆ. ಜೆಕ್‌ ಗಣರಾಜ್ಯದ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಜಾಕುಬ್‌ ವಾಡ್ಲಚ್ 1416 ಅಂಕದೊಂದಿಗೆ ಮೂರನೇ ಸ್ಥಾನ, ಜರ್ಮನಿಯ ಜೂಲಿಯನ್‌ ವೆಬರ್‌ 1385 ಅಂಕದೊಂದಿಗೆ 4ನೇ ಸ್ಥಾನ, ಪಾಕಿಸ್ತಾನದ ಆರ್ಶದ್‌ ನದೀಮ್‌ 1306 ಅಂಕದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

    25 ವರ್ಷದ ನೀರಜ್‌ ಚೋಪ್ರಾ, ಪ್ರತಿಷ್ಠಿತ ಡೈಮಂಡ್‌ ಲೀಗ್‌ ಸರಣಿಯಲ್ಲಿ ಚಿನ್ನ ಗೆಲ್ಲುವ ಮೂಲಕ 2023ರ ಆರಂಭಿಕ ಇವೆಂಟ್‌ನಲ್ಲಿಯೇ ಭರ್ಜರಿ ನಿರ್ವಹಣೆ ತೋರಿದ್ದಾರೆ. ಹಾಲಿ ಋತುವಿನ ಮೊದಲ ಪ್ರಯತ್ನದಲ್ಲಿಯೇ ವರ್ಲ್ಡ್‌ ಲೀಡಿಂಗ್‌ನೊಂದಿಗೆ 88.67 ಮೀಟರ್‌ ದೂರ ಎಸೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts