Thaman S: ಟಾಲಿವುಡ್ ಅಂಗಳದಲ್ಲಿ ತಮ್ಮ ಸಂಗೀತದಿಂದಲ್ಲೇ ಅಪಾರ ಸಿನಿಪ್ರಿಯರ ಹೃದಯ ಗೆದ್ದಿರುವ, ಗೆಲ್ಲುತ್ತಿರುವ ಜನಪ್ರಿಯ ಸಂಗೀತ ನಿರ್ದೇಶಕ ಎಸ್. ಥಮನ್, ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ಪಟ್ಟ ಕಷ್ಟ, ಸವಾಲುಗಳನ್ನು ನೆನೆದು ಭಾವುಕರಾಗಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಶಿಕ್ಷಣಕ್ಕೆ ಸುಬ್ಬಾರಾವ್ ಪೈ ಪಾತ್ರ ಅನನ್ಯ : ಕೆ.ಸತೀಶ ಭಂಡಾರಿ ಅನಿಸಿಕೆ
ಪ್ರಸ್ತುತ ಸ್ಟಾರ್ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮುತ್ತಿರುವ ಥಮನ್, ತಮ್ಮ ಬಾಲ್ಯವು ತುಂಬಾ ಕಷ್ಟಕರವಾಗಿತ್ತು. ಸವಾಲಿನಿಂದ ಕೂಡಿತ್ತು ಎಂದು ಹೇಳಿಕೊಂಡಿದ್ದಾರೆ. “ನಮ್ಮ ತಂದೆ ಶಿವಕುಮಾರ್, ಚಲನಚಿತ್ರೋದ್ಯಮದಲ್ಲಿ ಸಂಗೀತ ನಿರ್ದೇಶಕರಿಗೆ ಡ್ರಮ್ ವಾದಕರಾಗಿ ಕೆಲಸ ಮಾಡುತ್ತಿದ್ದರು. ಅವರು ಅನೇಕ ಚಿತ್ರಗಳಿಗೆ ಡ್ರಮ್ ವಾದಕರಾಗಿ ಕೆಲಸ ಮಾಡಿದ್ದಾರೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡೆ. ಆಗ ನನಗೆ 11 ವರ್ಷ. ನನಗೆ ಚಿಕ್ಕ ವಯಸ್ಸಿನಿಂದಲೇ ತಂದೆ ಸಂಗೀತದ ಬಗ್ಗೆ ತರಬೇತಿ ನೀಡಿದ್ದರು. ಡ್ರಮ್ ಮತ್ತು ರಿದಮ್ ವಾದಕನಾಗಿ ಗುರುತಿಸಿಕೊಳ್ಳುವಂತೆ ಹುರಿದುಂಬಿಸಿದ್ದರು” ಎಂದರು.
ಇತ್ತೀಚಿನ ಸಂದರ್ಶನವೊಂದರಲ್ಲಿ ತಂದೆಯ ಸಾವಿನ ಕುರಿತಾಗಿ ಮನಬಿಚ್ಚಿ ಮಾತನಾಡಿದ ಥಮನ್, “ನನ್ನ ತಂದೆಯ ಸಾವು ಮತ್ತು ಅಂದಿನ ಸಂದರ್ಭಗಳು ಬಹಳ ಕಠಿಣವಾಗಿತ್ತು. ತಂದೆ ತೀರಿಕೊಂಡಾಗ, ನನ್ನ ತಾಯಿ ಮತ್ತು ಸಹೋದರಿ ಅವರ ದೇಹದ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆದರೆ, ನಾನು ದುಃಖಿಸಲಿಲ್ಲ. ಸಂಜೆ, ಶಿವಮಣಿ ಸರ್ ಬಂದಾಗ, ನಾನು ಅವರನ್ನು ತಬ್ಬಿ ಅಳುತ್ತಿದ್ದೆ. ಆಗ ನಾನು ನನ್ನ ತಾಯಿಗೆ ಹೇಳಿದೆ. ನಾನು ಓದುವುದಿಲ್ಲ ಬದಲಿಗೆ ಸಂಗೀತ ಕೆಲಸ ಮಾಡುತ್ತೇನೆ ಎಂದು. ತಂದೆ ಸಾವನ್ನಪ್ಪಿದಾಗ ನಮಗೆ 56 ಸಾವಿರ ರೂ. ವಿಮೆ ಹಣ ಸಿಕ್ಕಿತು. ಅದನ್ನು ಬಿಟ್ಟರೆ ಇನ್ನೇನು ನಮ್ಮ ಬಳಿ ಉಳಿದಿರಲಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಮೇಲ್ಸೇತುವೆ ಕೆಳಗಡೆ ವ್ಯಾಪಾರಿಗಳದ್ದೇ ಅಬ್ಬರ : ತೊಕ್ಕೊಟ್ಟು ಪೇಟೆ ಅಂದಗೆಡಿಸುತ್ತಿರುವ ಬೀದಿ ವ್ಯಾಪಾರ
“ವಿಮೆ ಹಣ ಬಿಟ್ಟರೆ ನಮ್ಮಲ್ಲಿ ಏನೂ ಇರಲಿಲ್ಲ. ಮನೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ ನನ್ನ ತಂಗಿ ಮುಖ ನೋಡಿದ ನನ್ನಮ್ಮ, ಅವಳಿಗೆ ಹಣವನ್ನು ನಾನು ಹೊಂದಿಸುತ್ತೇನೆ. ನೀನು ಈ ಹಣದಲ್ಲಿ ಸಂಗೀತಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡು ಎಂದು ನನ್ನ ಮೇಲೆ ಬಲವಾದ ನಂಬಿಕೆಯಿಟ್ಟು ಹಣ ಕೊಟ್ಟರು. ಅಂತಹ ಕಠಿಣ ಪರಿಸ್ಥಿತಿಯಲ್ಲಿಯೂ ನನ್ನ ತಾಯಿ ನನ್ನನ್ನು ಬೆಂಬಲಿಸಿದರು. ಅವರು ಆಡಿದ್ದ ಆ ಮಾತುಗಳು ಇಂದಿಗೂ ನನಗೆ ಚೆನ್ನಾಗಿ ನೆನಪಿದೆ” ಎಂದರು.
“ಸಂಗೀತ ಹಾದಿಯಲ್ಲಿ ಶಿವಮಣಿ ಸರ್ ನನಗೆ ಮಾರ್ಗದರ್ಶನ ನೀಡಿದರು. ತಾಯಿ ನೀಡಿದ ಹಣದಿಂದಲೇ ನಾನು ಸಂಗೀತ ಉಪಕರಣಗಳನ್ನು ಖರೀದಿಸಿದೆ. ನನ್ನ ತಂದೆಯ ದಯೆಯಿಂದಾಗಿ, ಎಲ್ಲರೂ ಕೆಲಸದ ವಿಷಯದಲ್ಲಿ ನನಗೆ ಪ್ರೋತ್ಸಾಹ ನೀಡುತ್ತ ಬಂದರು. ನಾನು ಹಣ ಸಂಪಾದಿಸಲು ಪ್ರಾರಂಭಿಸಿದಾಗ, ನನ್ನ ತಾಯಿಗೆ ಏನು ಬೇಕೋ ಅದೆಲ್ಲವನ್ನು ನಾನೇ ನೋಡಿಕೊಳ್ಳುತ್ತಿದ್ದೆ. ನನ್ನಮ್ಮ ನನಗಾಗಿ ತುಂಬಾ ಶ್ರಮಿಸಿದ್ದಾರೆ” ಎಂದು ಹೇಳುತ ಥಮನ್ ಭಾವುಕರಾದರು,(ಏಜೆನ್ಸೀಸ್).
14,000 ಉದ್ಯೋಗಿಗಳಿಗೆ ಗುಡ್ಬೈ! AI ಟೆಕ್ನಾಲಜಿಯಿಂದ ಜನರ ಬದುಕಿಗೆ ಕೊಡಲಿ: ಹೂಡಿಕೆದಾರ ಆಕ್ರೋಶ | Amazon