ಮಹಿಳೆಯರ ಶಿಕ್ಷಣಕ್ಕೆ ಸುಬ್ಬಾರಾವ್ ಪೈ ಪಾತ್ರ ಅನನ್ಯ : ಕೆ.ಸತೀಶ ಭಂಡಾರಿ ಅನಿಸಿಕೆ

New Project (16)
Published on

ಮೂಲ್ಕಿ: ಗ್ರಾಮೀಣ ಮಹಿಳೆಯರ ಶಿಕ್ಷಣ ಹಾಗೂ ಸ್ವಾವಲಂಬನೆಗಾಗಿ ಅಮ್ಮೆಂಬಳ ಸುಬ್ಬಾರಾವ್ ಪೈ ಅವರು ಶಿಕ್ಷಣ ಹಾಗೂ ವಿತ್ತ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದ ಮಹಾನ್ ಚೇತನ ಎಂದು ಜಿ.ಎಸ್.ಬಿ ಬಡ ವಿದ್ಯಾರ್ಥಿ ಫಂಡ್ ಉಪಾಧ್ಯಕ್ಷ ಕೆ.ಸತೀಶ ಭಂಡಾರಿ ಹೇಳಿದರು.

ಮೂಲ್ಕಿ ಸಭಾಗೃಹ ಸಮಿತಿ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕೆನರಾ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್ ಸ್ಥಾಪಕ ಅಮ್ಮೆಂಬಳ ಸುಬ್ಬಾರಾವ್ ಪೈ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ಅಶೋಕ್ ಕಾಮತ್ ದಂಪತಿ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ಮೂಲ್ಕಿ ವಿಜಯಾ ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಎಸ್.ಭಟ್ ಅವರನ್ನು ಸನ್ಮಾನಿಸಲಾಯಿತು.

ಪ್ರಶಾಂತ್ ಭಟ್ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಿತು.

ಸಭಾಗೃಹ ಸಮಿತಿ ಧರ್ಮದರ್ಶಿ ಗಣೇಶ್ ಭಟ್, ಜಿ.ಎಸ್.ಬಿ ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ, ಕಾರ್ಯದರ್ಶಿ ವಿಶ್ವನಾಥ ಶೆಣೈ, ಕೋಶಾಧಿಕಾರಿ ಪ್ರವೀಣ್ ಕಾಮತ್ ಹಾಜರಿದ್ದರು. ವಿಶ್ವನಾಥ ಶೆಣೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net