ಅದ್ಯಪಾಡಿ ಮಣ್ಣಿಗಿದೆ ಸಾತ್ವಿಕ ಗುಣ : ಒಡಿಯೂರು ಸ್ವಾಮೀಜಿ ಆಶೀರ್ವಚನ

New Project (11)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಅದ್ಯಪಾಡಿ ಮಣ್ಣಿಗೆ ಸಾತ್ವಿಕ ಗುಣವಿದೆ. ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ಇಲ್ಲಿನ ಜನರ ಕ್ರಿಯಾಶೀಲನೆಗೆ ಸಾಕ್ಷಿ. ವ್ಯವಸ್ಥೆಗೆ ಮತ್ತೊಂದು ಹೆಸರು ಅದ್ಯಪಾಡಿ. ಪ್ರೀತಿ ಮತ್ತು ಮಮಕಾರ ತುಂಬಿದ ಈ ಊರವರ ಒಗ್ಗೂಡುವಿಕೆ ಅಪೂರ್ವವಾದುದು ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶನಿವಾರ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ತುಳುನಾಡಿಗೆ ಸದಾ ದೈವ-ದೇವರ ಆಶೀರ್ವಾದವಿದೆ. ಭಾರತವು ಎಲ್ಲ ವಿಧದಲ್ಲೂ ಜಗತ್ತಿಗೆ ಪ್ರೇರಣೆ ನೀಡುವ ದೇಶ. ಇಂಥ ಪುಣ್ಯಭೂಮಿಯಲ್ಲಿ ನಾವಿದ್ದೇವೆ. ದೇವರ ಪ್ರೇರಣೆಯಿಂದಲೇ ಇಲ್ಲಿನ ದೇವಾಲಯ ಸುಂದರವಾಗಿ ಮರು ನಿರ್ಮಾಣಗೊಂಡಿದೆ. ಬ್ರಹ್ಮಕಲಶದಲ್ಲಿ ಶ್ರಮದಾನ ಮಾಡಿರುವವರು ಧನ್ಯರು ಎಂದರು.

ವಾಸ್ತುಶಿಲ್ಪಿ ಕೃಷ್ಣರಾಜ ತಂತ್ರಿ ಕುಡುಪು, ದೇವಸ್ಥಾನದ ಪ್ರಧಾನ ಅರ್ಚಕ ಸದಾಶಿವ ಭಟ್, ಇಂಜಿನಿಯರ್ ಪುರುಷೋತ್ತಮ ವಾಮಂಜೂರು ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು. ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜೀತ್ ಆಳ್ವ ಬೈಲು ಏತಮೊಗರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಉಪಸ್ಥಿತರಿದ್ದರು. ಅಶ್ವಿನಿ ಶೆಟ್ಟಿ ಬೊಂಡಂತಿಲಗುತ್ತು, ಸತೀಶ್ ಶೆಟ್ಟಿ ಕಂದಾವರ ಮತ್ತು ಜಯಕರ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net