

ಉಪ್ಪಿನಂಗಡಿ: ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ದೀಪ ಪ್ರದಾನ ಕಾರ್ಯಕ್ರಮ ನಡೆಯಿತು. 10ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಜವಾಬ್ದಾರಿ ನೀಡುವ ಸಂಕೇತವಾಗಿ ದೀಪ ಹಸ್ತಾಂತರಿಸಿದರು.
ಮಂಗಳೂರು ವಿಭಾಗ ಸಾಮರಸ್ಯ ಸಂಯೋಜಕ್ ಶಿವಪ್ರಸಾದ್ ಉಜಿರೆ, ಖ್ಯಾತ ಮೃದಂಗ ವಾದಕ ವಸಂತಕೃಷ್ಣ ಕಾಂಚನ, ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಆಡಳಿತ ಮಂಡಳಿ ಸದಸ್ಯ ಸುಬ್ರಾಯ ಪುಣಚ, ಮುಖ್ಯಶಿಕ್ಷಕ ಗಣೇಶ ವಾಗ್ಲೆ ಉಪಸ್ಥಿತರಿದ್ದರು.
ವಿದ್ಯಾರ್ಥಿ ಹರ್ಷವರ್ಧನ್ ಪ್ರೇರಣಾ ಗೀತೆ ಹಾಡಿದರು. ಶಿಕ್ಷಕಿ ಸೂರ್ಯ ಮಾತಾಜಿ ವಿದ್ಯಾರ್ಥಿಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಭಾಗೀರಥಿ ಮಾತಾಜಿ ಸ್ವಾಗತಿಸಿದರು. ಗಣೇಶ್ ವಾಗ್ಲೆ ವಂದಿಸಿದರು. ಕಾವ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.