

ಕಡಬ: ಸಮಾಜದ ಅಗತ್ಯಗಳನ್ನು ಅರಿತು ಮಾಡುವ ಕೆಲಸಗಳೇ ನಿಜವಾದ ಸಮಾಜ ಸೇವೆ. ಕಡಬ ಪರಿಸರದಲ್ಲಿ ಹಲವು ವರ್ಷಗಳಿಂದ ಜೇಸಿ ಸಂಸ್ಥೆ ಈ ರೀತಿಯ ಜನಪರ ಕಾರ್ಯ ನಡೆಸುತ್ತಿದೆ ಎಂದು ಕಡಬ ಪೊಲೀಸ್ ಠಾಣೆ ಉಪನಿರೀಕ್ಷಕ ಅಭಿನಂದನ್ ಎಂ.ಎಸ್. ಹೇಳಿದರು.
ಜೇಸಿಐ ಕಡಬ ಕದಂಬ ಘಟಕ ಆಶ್ರಯದಲ್ಲಿ ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಕಡಬದಿಂದ ಪಾಲೋಳಿ ಸೇತುವೆ ಮೂಲಕ ಎಡಮಂಗಲ ಪ್ರದೇಶ ಸಂಪರ್ಕಿಸುವ ರಸ್ತೆಗೆ ಕಡಬದ ಯುವ ಉದ್ಯಮಿ ದಿನೇಶ್ ತುಂಬೆತ್ತಡ್ಕ ಕೊಡುಗೆಯಾಗಿ ನೀಡಿದ ದಾರಿ ಸೂಚಕ ಫಲಕ ಅನಾವರಣಗೊಳಿಸಿ ಮಾತನಾಡಿದರು.
ಜೇಸಿ ಘಟಕಾಧ್ಯಕ್ಷೆ ವಿಶ್ರುತಾ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಮಾತನಾಡಿದರು. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಾಜಿ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಜೇಸಿ ಪೂರ್ವಾಧ್ಯಕ್ಷರಾದ ಶಿವಪ್ರಸಾದ್ ರೈ ಮೈಲೇರಿ, ಕೆ.ಎಸ್.ದಿನೇಶ್ ಆಚಾರ್ಯ, ತಸ್ಲೀಂ ಮರ್ದಾಳ, ನಿಕಟಪೂರ್ವಾಧ್ಯಕ್ಷ ಜಾಫಿರ್ ಮಹಮ್ಮದ್, ಪದಾಧಿಕಾರಿಗಳಾದ ರಾಜೇಶ್ ಎ.ಕೆ., ಕೃಷ್ಣ ಕಾರಂತ್, ಚೇತನ್ ಪ್ರಭು, ಪ್ರಸನ್ನ ಪುತ್ರಬೈಲು, ಪ್ರಣೀತಾ ದಿನೇಶ್, ಅಬ್ದುಲ್‌ರಹಿಮಾನ್, ಕಡಬ ಆಟೋ ಚಾಲಕ ಮಾಲೀಕ ಸಂಘ ಪದಾಧಿಕಾರಿಗಳಾದ ಸುಂದರ ಗೌಡ, ಸುಂದರ ಪೂಜಾರಿ, ಗ್ರಾಪಂ ಮಾಜಿ ಸದಸ್ಯ ಕೃಷ್ಣಪ್ಪ ಬೈಲಂಗಡಿ ಉಪಸ್ಥಿತರಿದ್ದರು. ಜೆೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ನಿರೂಪಿಸಿದರು. ಜೇಸಿ ಕಾರ್ಯದರ್ಶಿ ನವ್ಯಾಕೃಷ್ಣ ವಂದಿಸಿದರು.