VIDEO| ದೃಷ್ಟಿ ತೆಗೆಯುವ ನೆಪದಲ್ಲಿ ಬಂದ ಮಂಗಳಮುಖಿಯರ ಗ್ಯಾಂಗ್​ ಮಾಡಬಾರದ್ದನ್ನು ಮಾಡಿ ಎಸ್ಕೇಪ್​!

TertiaryGender-robbery
Published on

ಬೆಂಗಳೂರು: ಕಚೇರಿಯೊಂದರ ಉದ್ಘಾಟನೆ ವೇಳೆ ಎಂಟ್ರಿ ಕೊಟ್ಟ ಮಂಗಳಮುಖಿಯರ ಗ್ಯಾಂಗ್​ವೊಂದು ದೃಷ್ಟಿ ತೆಗೆಯುವ ನೆಪದಲ್ಲಿ ಚಿನ್ನಾಭರಣ, ಲಕ್ಷಾಂತರ ರೂ. ನಗದು ಮತ್ತು ಮೊಬೈಲ್​ ದೋಚಿ ಪರಾರಿಯಾಗಿದೆ.

ವಿದ್ಯಾರಣ್ಯಪುರದ ಈಚಲಮರ ಬಸ್ ಸ್ಟಾಪ್ ಬಳಿ ಈ ಘಟನೆ ಸಂಭವಿಸಿದ್ದು, ಆಟೋದಲ್ಲಿ ಬಂದಿದ್ದ ನಾಲ್ವರು ಮಂಗಳಮುಖಿಯರು ಚಿನ್ನ, ಹಣ ಲೂಟಿ ಮಾಡಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿರಿ ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ವಿದ್ಯಾರಣ್ಯಪುರದ ಈಚಲಮರ ಬಸ್ ಸ್ಟಾಪ್ ಬಳಿ ಸೆ.23ರಂದು ಅನುವೃದ್ಧಿ ಕೋ ಆಪರೇಟಿವ್ ಕಚೇರಿಯ ಉದ್ಘಾಟನೆ ಕಾರ್ಯಕ್ರಮವಿತ್ತು. ಈ ವೇಳೆ ಶಾಖೆಯ ದ್ವಾರಕ್ಕೆ ದೃಷ್ಟಿ ತೆಗೆಯುವ ನೆಪದಲ್ಲಿ ಮಂಗಳಮುಖಿಯರ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ನಿಂಬೆಹಣ್ಣಿನಿಂದ ದ್ವಾರಕ್ಕೆ ದೃಷ್ಟಿ ತೆಗೆದು ನಂತರ ದೇವರ ಫೋಟೋಗೆ ಅಕ್ಷತೆ ಹಾಕುವ ನೆಪದಲ್ಲಿ ಕಚೇರಿಯ ಒಳಗೆ ಹೋದ ಆ ಗ್ಯಾಂಗ್, ಅಲ್ಲಿದ್ದ 1.65 ಲಕ್ಷ ರೂ. ನಗದು, 23 ಗ್ರಾಂ ತೂಕದ 1 ಚಿನ್ನದ ಸರ, 1 ಮೊಬೈಲ್ ಎಗರಿಸಿಕೊಂಡು ಸಿನಿಮೀಯ ರೀತಿಯಲ್ಲಿ ಆಟೋ ಹತ್ತಿ ಎಸ್ಕೇಪ್ ಆದರು.

ಮೊದಲೇ ಪ್ರೀ ಪ್ಲಾನ್ ಮಾಡಿಕೊಂಡು ಆಟೋದಲ್ಲಿ ಈ ಖರ್ತನಾಕ್ ಗ್ಯಾಂಗ್ ಬಂದಿತ್ತು. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net