4 ತಿಂಗಳ ಭ್ರೂಣ ಹೊಟ್ಟೆಯಲ್ಲಿರುವಾಗಲೇ ಗೃಹಿಣಿ ಆತ್ಮಹತ್ಯೆ!

wife suicide
Published on

ಕೋಲಾರ: ಒಂಬತ್ತು ತಿಂಗಳ ಹಿಂದೆ ನೂರಾರು ಕನಸಿನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಶುಕ್ರವಾರ ಗಂಡನ ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ.

ಮಾಲೂರು ತಾಲೂಕಿನ ದೊಡ್ಡಕಲ್ಲಹಳ್ಳಿಯ ನವವಿವಾಹಿತೆ ಮೇಘನಾ 23 ಮೃತಳು. ಈಕೆಯ ಹೊಟ್ಟೆಯಲ್ಲಿ ನಾಲ್ಕು ತಿಂಗಳ ಭ್ರೂಣವಿತ್ತು. ಇನ್ನು ಐದು ತಿಂಗಳಲ್ಲಿ ಮಗಳೋ-ಮಗನೋ ಮನೆಗೆ ಹೊಸ ಅತಿಥಿಯಾಗಿ ಬರುತ್ತಿದ್ದರು. ಆ ಮಗುವನ್ನು ಮುದ್ದಾಡಿಕೊಂಡು ಖುಷಿಯಾಗಿರಬೇಕಿದ್ದ ಆ ಹೆಣ್ಣುಮಗಳು ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿರಿ ಇನ್ನೂ ಋತುಮತಿ ಆಗದ ಯುವತಿಯನ್ನು ತುಂಬಾ ಇಷ್ಟಪಟ್ಟು ಮದುವೆಯಾದ… ಬಳಿಕ ಆಗಿದ್ದೆಲ್ಲವೂ ದುರಂತ!

ಮಹೇಶ್​ ಎಂಬುವವರ ಜತೆ ಕಳೆದ 9 ತಿಂಗಳ ಹಿಂದೆ ಮೇಘನಾಳ ಮದುವೆ ಮಾಡಲಾಗಿತ್ತು. ಇನ್ನು ಕೆಲವೇ ತಿಂಗಳಲ್ಲಿ ಮೊಮ್ಮಗು ಬರುವ ನಿರೀಕ್ಷೆಯಲ್ಲಿದ್ದ ಮೇಘನಾ ಪಾಲಕರಿಗೆ ಆಕೆಯ ಸಾವು ಆಘಾತ ತಂದಿದೆ.

ಮಗಳ ಸಾವು ಆತ್ಮಹತ್ಯೆಯಲ್ಲ, ಇದು ಕೊಲೆ. ವರದಕ್ಷಿಣೆಗಾಗಿ ಗಂಡನ ಮನೆಯವರು ಕಿರುಕುಳ ಕೊಟ್ಟು ಕೊಂದಿದ್ದಾರೆ ಎಂದು ಮೇಘನಾಳ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಘನಾಳ ಪತಿ ಹಾಗೂ ಮಾವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ‌ ನಡೆಸುತ್ತಿದ್ದಾರೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net