More

    ಹಾಲು ತರಲು ಹೋಗುತ್ತಿದ್ದವನ ಎದುರಿಗೆ ಬಂತು ಮೃತ್ಯು!

    ಬಾಗಲಕೋಟೆ: ಮನೆಗೆ ಹಾಲು ತರಲೆಂದು ಹೊರ ಹೋದವ ಮಾರ್ಗಮಧ್ಯೆ ಜಲಸಮಾಧಿಯಾದ ಘಟನೆ ಶನಿವಾರ ಬೆಳಗ್ಗೆ ಮುಧೋಳ ತಾಲೂಕಿನಲ್ಲಿ ಸಂಭವಿಸಿದೆ.

    ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಭಾರೀ ಪ್ರಮಾಣ ಮಳೆಯಾಗಿದ್ದು, ಜನರ ಅಕ್ಷರಶಃ ಮೂರಾಬಟ್ಟೆಯಾಗಿದೆ. ಈ ಮಳೆ ಅವಾಂತರಕ್ಕೆ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದ ನಿವಾಸಿ ಸಂತೋಷ ಅಡವಿ(34) ಬಲಿಯಾಗಿದ್ದಾರೆ. ಇವರು ಬೆಳಗ್ಗೆ ಹಾಲು ತರಲೆಂದು ಬೈಕ್​ನಲ್ಲಿ ಹೊರಟಿದ್ದರು. ಒಂಟಗೋಡಿ ಕ್ರಾಸ್ ಬಳಿ ಮಳೆಗೆ ತುಂಬಿ ಹರಿಯುತ್ತಿದ್ದ ಯಾದವಾಡ ಹಳ್ಳದಲ್ಲಿ ಕೊಚ್ಚಿಹೋದ ಸಂತೋಷ ಸ್ಥಳದಲ್ಲೇ ಅಸುನೀಗಿದರು. ಮೃತರು ಮುಧೋಳ ಡಿಸಿಸಿ ಬ್ಯಾಂಕ್​ನ ಕ್ಲರ್ಕ್ ಆಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದರು. ಮಳೆ ಅವಾಂತರಕ್ಕೆ ಇತ್ತ ಓರ್ವ ಬಲಿಯಾದರೆ, ಅತ್ತ ಜಿಲ್ಲೆಯ ಹಲವೆಡೆ ಜನ ಹೈರಾಣಾಗಿದ್ದಾರೆ. ಇದನ್ನೂ ಓದಿರಿ ವರುಣನ ರೌದ್ರಾವತಾರಕ್ಕೆ ಆಯ್ತು ಬದುಕು ಮೂರಾಬಟ್ಟೆ!

    ರಬಕವಿ ನಗರದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ಮಳೆನೀರು ನುಗ್ಗಿದ್ದು, ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದರು. ಗುಡ್ಡದಿಂದ ನಗರದೊಳಗೆ ಹರಿದು ಬಂದ ಅಪಾರ ಪ್ರಮಾಣದ ಮಳೆನೀರು ಜಲಪಾತದಂತೆ ಹರಿದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ರಬಕವಿ ನಗರದ ಹಳೇ ಬಸ್ ನಿಲ್ದಾಣದ ಅಕ್ಕಪಕ್ಕದ ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದು, ಅದನ್ನು ಹೊರ ಹಾಕಲು ಜನರು ಪರದಾಡಿದರು.

    ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!

    ‘ನಾವು ಡ್ರಗ್ಸ್​ ಪಾರ್ಟಿ ಮಾಡ್ತಾ ಇದ್ವಿ, ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts