More

    ವರುಣನ ರೌದ್ರಾವತಾರಕ್ಕೆ ಆಯ್ತು ಬದುಕು ಮೂರಾಬಟ್ಟೆ!

    ಕಲಬುರಗಿ: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು, ಮತ್ತೆ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ. ಹಲವೆಡೆ ಮನೆಗಳು ಕುಸಿದಿದ್ದು, ಕೆಲವೆಡೆ ಜಲಾವೃತಗೊಂಡು ನಿವಾಸಿಗಳು ಪರದಾಡುತ್ತಿದ್ದಾರೆ.

    ಕಳೆದ ಒಂದು ವಾರದಿಂದ ಶಾಂತನಾಗಿದ್ದ ವರುಣದೇವ‌ ಶುಕ್ರವಾರ ರಾತ್ರಿ ಅಬ್ಬರಿಸಿದ್ದಾನೆ. ಪರಿಣಾಮ ಕಲಬುರಗಿ -ಸೇಡಂ ಮತ್ತು ಚಿಂಚೋಳಿ- ಬೀದರ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಲಬುರಗಿ ನಗರದ ಕೆಳ‌ಪ್ರದೇಶದ ಬಡಾವಣೆಯ ‌ಮನೆಗಳು‌ ಜಲಾವೃತವಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಳೆನೀರು ಹರಿಯುತ್ತಿದ್ದ ರಭಸಕ್ಕೆ ಚಿಂಚೋಳಿ ತಾಲೂಕಿನಲ್ಲಿ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಕೇರಳ್ಳಿ ಗ್ರಾಮದ 15ಕ್ಕೂ ಅಧಿಕ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇನ್ನು ಸೇಡಂ ತಾಲೂಕಿನ ಕಾಗಿಣಾ ನದಿಯ ಮಳಖೇಡ ಬಳಿ ಸೇತುವೆ‌ ಮುಳುಗಿದ್ದು, ಕಲಬುರಗಿ-ಸೇಡಂ ಸಂಪರ್ಕ ಕಡಿತಗೊಂಡಿದೆ. ಇದನ್ನೂ ಓದಿರಿ ವಾಡಿಕೆಯಂತೆ ತುಸು ಹೆಚ್ಚು ಮಳೆಯಾದರೂ 48 ತಾಲೂಕಿನಲ್ಲಿ ವರುಣನ ಅಭಾವ

    ವರುಣನ ರೌದ್ರಾವತಾರಕ್ಕೆ ಆಯ್ತು ಬದುಕು ಮೂರಾಬಟ್ಟೆ!ಜೇವರ್ಗಿ ತಾಲೂಕಿನ ದೇಣಗಿ ಗ್ರಾಮದಲ್ಲಿ ಹತ್ತಾರು ಮನೆಗಳು ಕುಸಿದಿವೆ. ಮಯೂರ್ ಗ್ರಾಮದಲ್ಲಿ ನೂರಾರು ಎಕರೆ ಜಮೀನು ಮಿನಿಕೆರೆಯಂತಾಗಿದ್ದು, ಬೆಳೆಹಾನಿಯಾಗಿದೆ. ದೇಸಣಗಿಯಲ್ಲಿ‌ ಮನೆ ಕುಸಿದು ಮಹಿಳೆ ಗಾಯಗೊಂಡಿದ್ದಾರೆ. ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲೂ ಮಳೆಯಿಂದಾಗಿ ಹತ್ತಾರು ಮನೆಗಳು ಕುಸಿದಿವೆ. ಕೃಷಿ ಜಮೀನಿನಲ್ಲಿ ನೀರು ನಿಂತು ಬೆಳೆಹಾನಿಯಾಗಿದೆ. ಚಿನ್ನಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಗೊರಗುಂಡಗಿ ಮುರಗಾನೂರ ಹಾಲಘತ್ತರಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಹಾಬಾದ ಪಟ್ಟಣದ‌ಲ್ಲಿ ಅಜನಿ ಹಳ್ಳ ತುಂಬಿ ಹರಿಯುತ್ತಿದ್ದು, ಇಂದಿರಾನಗರ ಮಡ್ಡಿ ಪ್ರದೇಶವು ನಗರದಿಂದ ಸಂಪರ್ಕ ಕಡಿದುಕೊಂಡಿದೆ.

    ‘ನಾವು ಡ್ರಗ್ಸ್​ ಪಾರ್ಟಿ ಮಾಡ್ತಾ ಇದ್ವಿ, ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು…’

    ಶೂಟಿಂಗ್​ ಸ್ಪಾಟ್​ನಲ್ಲೇ ಪ್ರಾಣಬಿಟ್ಟ ಪೋಷಕ ನಟನ ಕೊನೇ ಫೋಟೋ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts