

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪೋಷಕ ನಟ, ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ನಟ ರಾಕ್ಲೈನ್ ಸುಧಾಕರ್ ಗುರುವಾರ ಇಹಲೋಕ ತ್ಯಜಿಸಿದ್ದಾರೆ.
ಶಶಿಧರ್ ನಿರ್ದೇಶಿಸುತ್ತಿರುವ 'ಶುಗರ್ ಲೆಸ್' ಸಿನಿಮಾ ಶೂಟಿಂಗ್ ವೇಳೆ ಹೃದಯಾಘಾತವಾಗಿ ರಾಕ್ಲೈನ್ ಸುಧಾಕರ್ ಅಕಾಲಿಕ ನಿಧನಕ್ಕೀಡಾದರು. ಇದಕ್ಕೂ ಮುನ್ನ ಬೆಳಗ್ಗೆ ಶೂಟಿಂಗ್ ಸೆಟ್ನಲ್ಲೇ ಸುಧಾಕರ್ ತಿಂಡಿ ಸೇವಿಸಿದ್ದರು. ಈ ವೇಳೆ ಕ್ಲಿಕ್ಕಿಸಿದ ಫೋಟೋವೇ ಅವರು ಬದುಕಿದ್ದಾಗ ತೆಗೆದ ಕೊನೇ ಫೋಟೋ ಎನ್ನಲಾಗಿದೆ. ಇದನ್ನೂ ಓದಿರಿ ಪೋಷಕ ನಟ ರಾಕ್ಲೈನ್ ಸುಧಾಕರ್ ನಿಧನ
ಕೆಲ ದಿನಗಳ ಹಿಂದಷ್ಟೇ ಕರೊನಾ ಸೋಂಕು ತಗುಲಿ, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಸಿನಿಮಾ ಚಿತ್ರೀಕರಣ ವೇಳೆಯೇ ವಿಧಿವಶರಾಗಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ.