More

  ಬೈಕ್ ಸವಾರರ ಮೇಲೆ ಕಾರು ಹತ್ತಿಸಿದ ಅಪ್ರಾಪ್ತ ಬಾಲಕನಿಗೆ ಸಿಕ್ತು 14 ಗಂಟೆಯೊಳಗೆ ಜಾಮೀನು! ವ್ಯಾಪಕ ಆಕ್ರೋಶ

  ಮಹಾರಾಷ್ಟ್ರ: ವೇಗವಾಗಿ ತನ್ನ ತಂದೆಯ ಪೋರ್ಷೆ ಕಾರನ್ನು ಚಲಾಯಿಸಿಕೊಂಡು ಬಂದ 17 ವರ್ಷದ ಬಾಲಕನೊಬ್ಬ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಾಲಕ ಮತ್ತು ತಂದೆಯನ್ನು ವಿಚಾರಣೆಗೆ ಒಳಪಡಿಸಿದ ಪುಣೆ ಪೊಲೀಸರು, ನಿನ್ನೆ (ಮೇ.20) ಅವರ ವಿರುದ್ಧ ದಾಖಲಾದ ಪ್ರಕರಣದ ಆಧಾರದ ಮೇಲೆ ಇಂದು ವಿಶಾಲ್ ಅಗರವಾಲ್ ಅವರನ್ನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸಿದ್ದಾರೆ.

  ಇದನ್ನೂ ಓದಿ: ಶಿರಾಡಿ ಘಾಟಿಯಲ್ಲಿ ಕಂಟೇನರ್- ಕಾರು ಅಪಘಾತ; ತಾಯಿ- ಮಗ ದಾರುಣ ಸಾವು

  ಬಾಲಕನ ತಂದೆ ವಿಶಾಲ್ ಅಗರವಾಲ್ ಒಬ್ಬ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದು, ಮಗ ಮಾಡಿದ ತಪ್ಪಿನಿಂದಾಗಿ ಇದೀಗ ಪುಣೆ ಪೊಲೀಸರ ಅತಿಥಿಯಾಗಿದ್ದಾರೆ. ಅಪಘಾತದ ಬಗ್ಗೆ ಹೆಚ್ಚಿನ ತನಿಖೆಗಾಗಿ ಹಲವು ತಂಡಗಳನ್ನು ರಚಿಸಿದ ಪೊಲೀಸರು, ಇಂದು ಮುಂಜಾನೆ ಛತ್ರಪತಿ ಸಂಭಾಜಿನಗರ ಪ್ರದೇಶದಿಂದ ಅವರನ್ನು ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ ಪುಣೆಯ ಹದಿಹರೆಯದ ಯುವಕ ದ್ವಿಚಕ್ರ ವಾಹನದಲ್ಲಿ ಬಂದ ದಂಪತಿಗಳ ಮೇಲೆ ತನ್ನ ಸ್ಪೋರ್ಟ್ಸ್ ಕಾರನ್ನು ಹರಿಸಿದ್ದಾನೆ. ಇದರಿಂದ ದಂಪತಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

  ಅಪ್ರಾಪ್ತ ವಯಸ್ಕ ಮದ್ಯದ ಅಮಲಿನಲ್ಲಿದ್ದ ಎಂದು ಹೇಳಲಾಗಿದ್ದು, ಪ್ರಕರಣದಲ್ಲಿ ಇನ್ನು ಇಬ್ಬರನ್ನು ಪೋಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆದರೆ, ಆತ ಅಪ್ರಾಪ್ತ ವಯಸ್ಕನು ಎಂಬ ಕಾರಣಕ್ಕೆ ಜಿಲ್ಲಾ ನ್ಯಾಯಾಲಯವು ಬಂಧನಕ್ಕೊಳಗಾದ 14 ಗಂಟೆಗಳೊಳಗೆ ಬಾಲಕನಿಗೆ ಜಾಮೀನು ನೀಡಿ, ಕಳುಹಿಸಿತು. ಇದು ಸಾರ್ವಜನಿಕರನ್ನು ಕೆರಳಿಸಿದ್ದು, ಭಾರೀ ಆಕ್ರೋಶವನ್ನು ಹೊರಹಾಕುವಂತೆ ಮಾಡಿತು. ಇದರ ಬೆನ್ನಲ್ಲೇ ಅಪ್ರಾಪ್ತ ಬಾಲಕನನ್ನು ವಯಸ್ಕರಂತೆ ಪರಿಗಣಿಸಲು ಉನ್ನತ ನ್ಯಾಯಾಲಯದ ಅನುಮತಿಯನ್ನು ಕೋರಿದ್ದೇನೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).

  ಲೀಗ್​ನಿಂದ ಹೊರಬಿದ್ದ MI​ಗೆ ನೀತಾ ಅಂಬಾನಿ ಕ್ಲಾಸ್​; ರೋಹಿತ್​, ಹಾರ್ದಿಕ್​ಗೆ ವಿಶೇಷ ಕಿವಿಮಾತು!

  ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts