ನವದೆಹಲಿ: ಭಾರತ (Team India) ಹಾಗೂ ಪಾಕಿಸ್ತಾನದ (Pakistan) ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದು ಹಲವು ವರ್ಷಗಳಾಗಿವೆ. ಉಭಯ ದೇಶಗಳು ಐಸಿಸಿ ಹಾಗೂ ಏಷ್ಯಾಕಪ್ನಂತಹ ಟೂರ್ನಿಗಳು ನಡೆದಾಗ ಮಾತ್ರ ಮುಖಾಮುಖಿಯಾಗುತ್ತಿದ್ದು, ಪ್ರತಿಬಾರಿ ಮುಖಾಮುಖಿಯಾದಾಗಲೂ ಆಟಗಾರರ ನಡುವಿನ ಕಿತ್ತಾಟದಿಂದಲೇ ಹೆಚ್ಚು ಸುದ್ದಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರೆಂದರೆ ಗೌತಮ್ ಗಂಭೀರ್ (Gautam Gambhir) ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ (kamran Akmal) ಹಲವು ಬಾರಿ ಕಿತ್ತಾಡಿಕೊಂಡಿದ್ದು, ಈ ಬಗ್ಗೆ ಮಾಜಿ ಆಟಗಾರ ಮಾತನಾಡಿದ್ದಾರೆ.
ಕ್ರಿಕ್ಬ್ಲಾಗ್ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಕಮ್ರಾನ್ ಅಕ್ಮಲ್, ನಾನು ಹಾಗೂ ಗೌತಮ್ ಸಹೋದರರಂತಿದ್ದು, ಇಬ್ಬರು ಒಳ್ಳೆಯ ಸ್ನೇಹಿರಾಗಿದ್ದೇವೆ. ನಾನು ಆತನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಕೋಚ್ ಆಗಿ ಮೊದಲ ಟೆಸ್ಟ್ ಸರಣಿ ಗೆದ್ದಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಆತನನ್ನು ಕೋಚ್ ಆಗಿ ನೋಡಲು ನನಗೆ ಖುಷಿಯಾಗುತ್ತದೆ.
ಇದನ್ನೂ ಓದಿ: ಸತ್ಯವೇನೆಂದರೇ ನಾನು… ರಿಷಭ್ ಪಂತ್ ಜೊತೆಗಿನ ಅಫೇರ್ ಕುರಿತು ಮೌನ ಮುರಿದ Urvashi Rautela
ನನ್ನ ಪ್ರಕಾರ ಎಂ.ಎಸ್. ಧೋನಿ ಸಂಪೂರ್ಣವಾಗಿ ವಿಭಿನ್ನ ಮನಸ್ಥಿತಿಯನ್ನು ಹೊಂದಿರುವವರು ಮತ್ತು ಶಾಂತ ಸ್ವಭಾವದವರು. ಪ್ರತಿಬಾರಿಯೂ ನಾವು ಭೇಟಿಯಾದಾಗಲೂ ವಿಕೆಟ್ ಕೀಪಿಂಗ್ ಬಗ್ಗೆ ಹೆಚ್ಚು ಮಾತನಾಡಿದ್ದೇವೆ. ಇಂದಿಗೂ ನಾನು ಅಥವಾ ಯಾವುದೇ ಆಟಗಾರ ಧೋನಿಯನ್ನು ಅಂತರಾಷ್ಟ್ರೀಯವಾಗಿ ಅಥವಾ ಪ್ರವಾಸದ ಸಮಯದಲ್ಲಿ ಭೇಟಿಯಾದಾಗ, ಅವರ ಸಲಹೆಯನ್ನ ಪಡೆಯುತ್ತೇವೆ.
ಕೆಲ ತಿಂಗಳ ಹಿಂದೆ ನಾನು ಇಂಗ್ಲೆಂಡ್ನಲ್ಲಿ ರಾಬಿನ್ ಉತ್ತಪ್ಪ, ಯುವರಾಜ್ ಸಿಂಗ್ ಅವರನ್ನು ಭೇಟಿ ಮಾಡಿದೆ.ರೈನಾ ಅವರೊಂದಿಗೆ ಮಾತನಾಡುವುದು ನನಗೆ ಖುಷಿ ನೀಡುತ್ತದೆ. ಯುವರಾಜ್ ಸಿಂಗ್ ನನ್ನ ಫೇವರಿಟ್ ಮಿಡಲ್ ಆರ್ಡರ್ ಬ್ಯಾಟರ್ ಆಗಿದ್ದು, ಅವರನ್ನು ಭೇಟಿಯಾದಾಗ ಹಲವು ವಿಚಾರಗಳ ಕುರಿತು ಚರ್ಚಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.