ಜವಾನ್​: ಶಾರುಖ್​ ಬೋಳುತಲೆಯಲ್ಲಿರುವ ಸಂಸ್ಕೃತ ಪದದ ಟ್ಯಾಟೂವಿನ ಅರ್ಥ ಹೀಗಿದೆ...

Shah Rukh Khan'
Published on

ಮುಂಬೈ: ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ ಮತ್ತು ನಯನತಾರಾ ಅಭಿಯನದ ಜವಾನ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರದ ಪ್ರಿವ್ಯೂ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಶಾರುಖ್​ ಹಿಂದೆಂದು ಕಾಣಿಸಿದಕೊಳ್ಳದ ಲುಕ್​ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಫೋಟೋದಲ್ಲಿ ಟ್ಯಾಟೂ ಒಂದನ್ನು ಗಮನಿಸಿದ್ದಾರೆ. ಇದೀಗ ಆ ಟ್ಯಾಟೂವಿನ ಅರ್ಥವನ್ನು ಡೀಕೋಡ್​ ಮಾಡಲಾಗಿದೆ. ಎಡಭಾಗದ ಕಿವಿಯ ಪಕ್ಕದಲ್ಲಿ ಸಂಸ್ಕೃತ ಭಾಷೆಯಲ್ಲಿ ಟ್ಯಾಟೂ ಹಾಕಲಾಗಿದೆ. ಮಾ ಜಗತ್​ ಜನನಿ ಎಂದು ಬರೆಯಲಾಗಿದೆ. ಅದರ ಅರ್ಥ ಜಗದ ತಾಯಿ ಎಂದರ್ಥ.

ಅಂದಹಾಗೆ ಜವಾನ್ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ. ಇದನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಬರೆದು ನಿರ್ದೇಶಿಸಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ಈ ಚಲನಚಿತ್ರವು ಕಮರ್ಷಿಯಲ್ ಎಂಟರ್‌ಟೈನರ್ ಎಂದು ಹೇಳಲಾಗಿದೆ.

ಶಾರುಖ್​ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುಳಿವು ಬಿಡುಗಡೆಯಾದ ಪ್ರಿವ್ಯೂನಲ್ಲಿ ಸಿಕ್ಕಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ನಯನತಾರಾ ಅವರ ಹಿಂದಿಯ ಚೊಚ್ಚಲ ಚಿತ್ರವೂ ಹೌದು. ದೀಪಿಕಾ ಪಡುಕೋಣೆ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಜವಾನ್​ ಸಿನಿಮಾವನ್ನು ಶಾರುಖ್​ ಪತ್ನಿ ಗೌರಿ ಖಾನ್​ ಅವರು ರೆಡ್​ ಚಿಲ್ಲೀಸ್​ ಸಂಸ್ಥೆಯಡಿ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್​ 7ಕ್ಕೆ ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net