ಪತ್ನಿ ಪರ್ಮಿಶನ್ ಇಲ್ದೆ ಅಡುಗೆಗೆ 2 ಟೊಮ್ಯಾಟೋ ಬಳಸಿದ ಪತಿ; ಮನೆ ಬಿಟ್ಟು ಹೋದ ಮಹಿಳೆ!

Madhya Pradesh man uses tomatoes to cook without asking wife
Published on

ಮಧ್ಯಪ್ರದೇಶ: ಗಗನಕ್ಕೇರುತ್ತಿರುವ ಟೊಮ್ಯಾಟೋ ಬೆಲೆಯು ಅನೇಕ ಜನರ ಆರ್ಥಿಕತೆಯ ಮೇಲೆ ಭಾರಿ ಪರಿಣಾಮವನ್ನು ಬಿರಿದೆ. ಆದರೆ ಈ ಬೆಲೆ ಏರಿಕೆಯು ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ಜಗಳಕ್ಕೆ ಕಾರಣವಾಗಿದೆ.

ಟಿಫಿನ್ ಸರ್ವಿಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ತನ್ನ ಹೆಂಡತಿಯನ್ನು ಕೇಳದೆ ಅಡುಗೆಗೆ ಎರಡು ಟೊಮ್ಯಾಟೋಗಳನ್ನು ಬಳಸಿದ್ದರಿಂದ ದಂಪತಿ ನಡುವೆ ಭಾರಿ ಜಗಳವಾಗಿದೆ. ಟೊಮ್ಯಾಟೋ ಬಳಸಿದ ವಿಚಾರವಾಗಿ ಕೋಪಗೊಂಡ ಮಹಿಳೆ ತನ್ನ ಚಿಕ್ಕ ಮಗುವನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ.

ಜಗಳ ಅತಿರೇಕಕ್ಕೆ ತಿರುಗಿದ್ದು, ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಪತ್ನಿಯನ್ನು ಹುಡುಕಿ ಹುಡುಕಿ ಸಾಕಾದ ಪತಿ ಪೊಲೀಸರ ಮೊರೆ ಹೋಗಿದ್ದು, ಮೂರು ದಿನದಿಂದ ಪತ್ನಿ ಮಗಳ ಜತೆ ಮಾತನಾಡಿಲ್ಲ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಆದಷ್ಟು ಬೇಗ ಅವರನ್ನು ಹುಡುಕಿ ಮನೆಗೆ ಕಳುಹಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net