ಹನುಮಾನ್ ಚಾಲೀಸಾ ಪಠಿಸಿದ ಕಳ್ಳ 10 ರೂ.ಕಾಣಿಕೆ ನೀಡಿ ದೇವಸ್ಥಾನದಿಂದ 5000 ರೂ. ದೋಚಿದ!

devotees
Published on

ಹರಿಯಾಣ: ರೇವಾರಿ ಜಿಲ್ಲೆಯ ಹನುಮಾನ್ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದ ನಂತರ, ಪೊಲೀಸರು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಹನುಮಾನ್ ಚಾಲೀಸಾವನ್ನು ಪಠಿಸುತ್ತಾ 10 ರೂಪಾಯಿಯನ್ನು ದೇವರ ಪಾದಕ್ಕೆ ಅರ್ಪಿಸಿದ ಕಳ್ಳನು ಕಾಣಿಕೆ ಹುಂಡಿಯನ್ನು ಮುರಿದು 5,000 ರೂಪಾಯಿ ದೋಚಿ ಪರಾರಿಯಾಗಿದ್ದಾನೆ.

ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಂತೆ, ಕಳ್ಳನು ಕುಳಿತು ಸುಮಾರು 10 ನಿಮಿಷಗಳ ಕಾಲ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸುತ್ತಾನೆ. ಅರ್ಚಕರ ಸಮ್ಮುಖದಲ್ಲಿ ದೇವರ ಪಾದಗಳಿಗೆ 10 ರೂಪಾಯಿಗಳನ್ನು ಕಳ್ಳ ಅರ್ಪಿಸುತ್ತಾನೆ. ಗರ್ಭಗುಡಿಯಲ್ಲಿ ಆಸುಪಾಸಿನಲ್ಲಿ ಯಾರೂ ಇಲ್ಲದ ವೇಳೆ ಸಿಕ್ಕ ಅವಕಾಶವನ್ನು ಪಡೆದುಕೊಂಡ ಕಳ್ಳನು ಕಾಣಿಕೆ ಡಬ್ಬಿ ಒಡೆದು 5 ಸಾವಿರ ರೂ.ಗಳೊಂದಿಗೆ ಪರಾರಿಯಾಗಿದ್ದಾನೆ.

ಕಳ್ಳತನ ನಡೆದಿರುವುದು ಅರಿಯದ ಅರ್ಚಕರು ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಹಿಂತಿರುಗಿ ನೋಡಿದಾಗ ಕಾಣಿಕೆ ಡಬ್ಬಿಯ ಬೀಗ ಮುರಿದಿರುವುದು ಕಂಡು ಬಂದಿದೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಳ್ಳತನ ಮಾಡುವ ಮೊದಲು ಹನುಮಾನ್ ಚಾಲೀಸಾವನ್ನು ಪಠಿಸುತ್ತಾ ದೇವರ ಪಾದಗಳಿಗೆ ಹಣೆಗಳನ್ನು ಅರ್ಪಿಸುತ್ತಿರುವುದು ಕಂಡುಬಂದಿದೆ. ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net