ಗರ್ಲ್​ಫ್ರೆಂಡ್​ನಿಂದ ದುಬಾರಿ ಐಫೋನ್ ಸರ್ಪ್ರೈಸ್​​ ಗಿಫ್ಟ್​! ವೈರಲ್​ ಆಯ್ತು ಬಾಯ್​ಫ್ರೆಂಡ್​ ಪ್ರತಿಕ್ರಿಯೆ

Girlfriend Gift
Published on

ನವದೆಹಲಿ: ಯುವತಿಯೊಬ್ಬಳು ತನ್ನ ಬಾಯ್​ಫ್ರೆಂಡ್​ಗೆ ಸರ್ಪ್ರೈಸ್​ ಆಗಿ ಐಫೋನ್​ ಉಡುಗೊರೆ ನೀಡುವ ಮನಮುಟ್ಟವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಸೆಳೆದಿದೆ.

ದುಬಾರಿ ಉಡುಗೊರೆಯನ್ನು ನಿರೀಕ್ಷಿಸದ ಬಾಯ್​ಫ್ರೆಂಡ್​ ಐಫೋನ್​ ನೋಡುತ್ತಿದ್ದಂತೆ ಒಂದು ಕ್ಷಣ ನಂಬಲಾಗದೇ ಬಾಯಿ ಮೇಲೆ ತನ್ನ ಕೈಯಿಟ್ಟು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಈ ವೇಳೆ ಆತನ ಪ್ರತಿಕ್ರಿಯೆಯು ನೆಟ್ಟಿಗರ ಮೆಚ್ಚುಗೆ ಪಡೆದಿದೆ. ಖುಷಿಯಿಂದ ಐಪೋನ್ ತೆಗೆದು ಪ್ರದರ್ಶಿಸುತ್ತಾನೆ. ಅಲ್ಲದೆ, ಪ್ರೀತಿಯ ಉಡುಗೊರೆ ನೀಡಿ ತನ್ನ ಪ್ರೇಯಸಿಯನ್ನು ತಬ್ಬಿಕೊಳ್ಳುತ್ತಾನೆ.

ವಿಡಿಯೋದಲ್ಲಿ ಏನಿದೆ?

ಕಾರೊಂದರಲ್ಲಿ ಯುವತಿ ಮನೆಯಿಂದ ಹೊರಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಆರಂಭವಾಗುತ್ತದೆ. ಬಳಿಕ ಆಕೆ ಐಫೋನ್​ ಸ್ಟೋರ್​ಗೆ ತೆರಳಿ, ಉತ್ತಮವಾದ ಐಫೋನ್​ ಖರೀದಿ ಮಾಡಿ, ಅದನ್ನು ಪ್ಯಾಕ್​ ಮಾಡಿಸಿಕೊಂಡು, ನಿನಗೊಂದು ಸರ್ಪ್ರೈಸ್​ ಇದೆ ಎಂದು ಬಾಯ್​ಫ್ರೆಂಡ್​ಗೆ ಮಸೇಜ್​ ಮಾಡಿ, ಸ್ಟಾರ್​ಬಕ್ಸ್​ಗೆ ತೆರಳುತ್ತಾಳೆ. ಪ್ರೇಯಸಿಯ ಮೆಸೇಜ್​ ನೋಡಿ ಬಾಯ್​ಫ್ರೆಂಡ್​ ಕೂಡ ಅಲ್ಲಿಗೆ ಬರುತ್ತಾನೆ.

ಬಾಯ್​ಫ್ರೆಂಡ್​ ಬರುವ ಮುನ್ನವೇ ತನ್ನ ಬ್ಯಾಗ್​ನ ಹಿಂದೆ ಕ್ಯಾಮೆರಾ ಇಟ್ಟು ಬಾಯ್​ಫ್ರೆಂಡ್​ ಪ್ರತಿಕ್ರಿಯೆಯನ್ನು ರೆಕಾರ್ಡ್​ ಮಾಡಿಕೊಳ್ಳುತ್ತಾಳೆ. ಸ್ಟಾರ್​ಬಕ್ಸ್​ ಒಳಗೆ ಬರುತ್ತಿದ್ದಂತೆ ಗರ್ಲ್​ಫ್ರೆಂಡ್​ ಇರುವ ಕಡೆ ಬರುವ ಪ್ರಿಯಕರ, ಆಕೆಯನ್ನು ತಬ್ಬಿಕೊಂಡು, ನಗು ಬೀರಿ ಮುತ್ತಿಗಾಗಿ ಬೇಡಿಕೆ ಇಡುತ್ತಾನೆ. ಬಳಿಕ ಪ್ರೇಯಿಸಿ ಆತನ ಕೆನ್ನಗೆ ಚುಂಬಿಸುತ್ತಾಳೆ. ಬಳಿಕ ಪ್ರೇಯಸಿ ಬಾಯ್​ಫ್ರೆಂಡ್​ ಬ್ಯಾಗ್​ ಇಟ್ಟು ಸರ್ಪ್ರೈಸ್​ ನೀಡುತ್ತಾಳೆ. ಅದರಲ್ಲಿದ್ದ ಐಫೋನ್​ ನೋಡಿ ಪ್ರಿಯಕರ ಒಂದು ಕ್ಷಣ ಶಾಕ್​ ಆಗುತ್ತಾನೆ. ಕೊನೆಗೂ ತುಂಬಾ ಸಂತೋಷದಿಂದ ಫೋನ್​ ಬಾಕ್ಸ್​ ಓಪನ್​ ಮಾಡಿ ಐಫೋನ್​ ಅನ್ನು ಪ್ರೇಯಸಿಯ ಮೊಬೈಲ್​ ಕ್ಯಾಮೆರಾ ಮುಂದೆ ಪ್ರದರ್ಶನ ಮಾಡುತ್ತಾನೆ.

ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಯ ಬಗೆಯ ಕಾಮೆಂಟ್​ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಎಲ್ಲ ಹುಡುಗರಿಗೆ ಇಂತಹ ಹುಡುಗಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ನೆಟ್ಟಿಗರೊಬ್ಬರು ಕಮೆಂಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net