ಗನ್​ ತೋರಿಸಿ ಕಾರು ಕದ್ದೊಯ್ದ 8 ವರ್ಷದ ಬಾಲಕ...

albama
Published on

ಅಲಬಾಮಾ: ಎಂಟು ವರ್ಷದ ಬಾಲಕನೊಬ್ಬ ಬಂದೂಕು ತೋರಿಸಿ ಕಾರನ್ನು ಕದ್ದುಕೊಂಡು ಹೋಗಿರುವ ಘಟನೆ ಘಟನೆ ಅಮೇರಿಕಾದ ಅಲಬಾಮಾ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಜಮೀನು ವಿವಾದ; ತೆಂಗಿನ ತೋಟದಲ್ಲಿ ಮಹಿಳೆಯ ಬಟ್ಟೆ ಹರಿದು ಥಳಿತ

ಘಟನೆಗೆ ಸಂಬಂಧಿಸಿದಂತೆ ಬಾಲಕನನ್ನು ಬಂಧಿಸಲಾಗಿದ್ದು, ಆತನ ಗುರುತನ್ನು ಬಹಿರಂಗಪಡಿಸಿಲ್ಲ. ಬಾಲಕಿನಿಂದ ಕದ್ದ ಕಾರು ಹಾಗೂ ಗನ್​​ನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರದಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆ ಮಾಡಿ ತನ್ನ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಆತ ಹಾಗೇ ಹೋಗಿದ್ದಾನೆ ಎಂದು ಕರೆಮಾಡಿದ್ದಾನೆ, ಕೂಡಲೇ ಜಾಗೃತರಾದ ಪೊಲೀಸರು, ತಂತ್ರಜ್ಞಾನದ ಮೂಲಕ ಕಾರಿನ ಲೊಕೇಶನ್​ ಪತ್ತೆ ಹಚ್ಚಿದ್ದು, ಅಲಬಾಮಾದಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು, ಕೂಡಲೇ ಕಾರನ್ನು ಬೆನ್ನಟ್ಟಿದ್ದು ಕಾರನ್ನು ನಿಲ್ಲಿಸುವಂತೆ ಮೈಕ್​ ಮೂಲಕ ಹೇಳಿದ್ದಾರೆ. ಆದರೆ ಚಾಲಕ ಹಾಗೇ ಕಾರನ್ನು ಚಲಾಯಿಸಿದ್ದು, ಪೊಲೀಸರು ಕೊನೆಗೆ ಕಾರನ್ನು ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಈ ವೇಳೆ ಚಾಲಕನನ್ನು ಅರೆಸ್ಟ್​​ ಮಾಡಲು ಬಂದ ಪೊಲೀಸರು 8 ವರ್ಷದ ಬಾಲಕನನ್ನು ಕಂಡು ಗಾಬರಿಯಾಗಿದ್ದಾರೆ. ಇನ್ನು ದರೋಡೆ ಮತ್ತು ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪದ ಮೇಲೆ ಬಾಲಕನನ್ನು ಬಂಧಿಸಿ ಬಾಲಪರಾಧಿ ಕೇಂದ್ರದಲ್ಲಿ ಇರಿಸಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net