More

    ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ! ವಿಡಿಯೋ ವೈರಲ್​

    ಚಂಡೀಗಢ: ಪ್ರವಾಹದ ಸಮಸ್ಯೆಯಿಂದ ಆಕ್ರೋಶಗೊಂಡ ಮಹಿಳೆಯೊಬ್ಬಳು ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬಂದಿದ್ದ ಜನನಾಯಕ್​ ಜನತಾ ಪಾರ್ಟಿಯ ಶಾಸಕ ಈಶ್ವರ್​ ಸಿಂಗ್ ಅವರ ಕಪಾಳಕ್ಕೆ ಬಾರಿಸಿರುವ ಘಟನೆ ಹರಿಯಾಣದ ಘುಲಾ ಎಂಬಲ್ಲಿ ಬುಧವಾರ ನಡೆದಿದೆ.

    ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಉಕ್ಕಿ ಹರಿಯುತ್ತಿರುವ ಘಾಗ್ಗರ್​ ನದಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಶಾಸಕರು ವೀಕ್ಷಿಸಲು ಬಂದಿದ್ದ ಸಂದರ್ಭದಲ್ಲಿ ಅವರೊಂದಿಗೆ ವಾಗ್ವಾದಕ್ಕೆ ಇಳಿದ ಮಹಿಳೆ, ನೀನು ಈಗ ಬಂದ್ರಿ? ಎಂದು ಕಪಾಳಕ್ಕೆ ಬಾರಿಸಿದ ದೃಶ್ಯ ವಿಡಿಯೋದಲ್ಲಿದೆ.

    ಸಣ್ಣ ಅಣೆಕಟ್ಟೊಂದು ಒಡೆದು ಪ್ರವಾಹ ಸ್ಥಿತಿ ಎದುರಾಗಿದೆ. ಅದನ್ನು ವೀಕ್ಷಿಸಲು ಶಾಸಕ ಈಶ್ವರ್​ ಸಿಂಗ್​ ಬಂದಿದ್ದರು. ಅಂದಹಾಗೆ ಜನನಾಯಕ್​ ಜನತಾ ಪಾರ್ಟಿಯು ಆಡಳಿತರೂಢ ಬಿಜೆಪಿಯ ಮೈತ್ರಿ ಪಕ್ಷವಾಗಿದೆ.

    ಇದನ್ನೂ ಓದಿ: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ! ತನಿಖೆಯಲ್ಲಿ ಕಿಲಾಡಿ ಲೇಡಿಯ ಕರಾಳ ಮುಖ ಬಯಲು

    ಸಣ್ಣ ಅಣ್ಣೆಕಟ್ಟು ಒಡೆಯಬಾರದೆಂದು ಮಹಿಳೆ ಭಾವಿಸಿದ್ದಳು. ಆದರೆ, ಇದೊಂದು ಪ್ರಾಕೃತಿಕ ವಿಕೋಪ ಎಂದು ವಿವರಿಸಿದೆ. ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದೆ. ಆದರೂ ಮಹಿಳೆ ನನ್ನ ಕಪಾಳಕ್ಕೆ ಬಾರಿಸಿದರು. ಆಕೆಯನ್ನು ನಾನು ಕ್ಷಮಿಸಿದ್ದೇನೆ. ನಾನು ಅವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಈಶ್ವರ್​ ಸಿಂಗ್​ ಹೇಳಿದ್ದಾರೆ.

    ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದಾಗಿ ಉಕ್ಕಿ ಹರಿಯುತ್ತಿರುವ ಘಗ್ಗರ್ ನದಿಯಿಂದ ಪಂಜಾಬ್ ಮತ್ತು ಹರಿಯಾಣದ ಹಲವಾರು ಹಳ್ಳಿಗಳು ಪ್ರವಾಹ ಸ್ಥಿತಿ ಎದುರಿಸುತ್ತಿದ್ದು, ಪರಿಹಾರ ಕ್ರಮಗಳು ನಡೆಯುತ್ತಿವೆ. (ಏಜೆನ್ಸೀಸ್​)

    ಮತ್ತಷ್ಟು ಹೆಚ್ಚಾಯ್ತು ಯಮುನಾ ನದಿ ನೀರಿನ ಮಟ್ಟ: ಸಿಎಂ ಕೇಜ್ರಿವಾಲ್​ ಮನೆಯ ಸಮೀಪವೇ ಪ್ರವಾಹ

    ಅನ್ನಭಾಗ್ಯ ಯೋಜನೆಯ 5 ಕೆಜಿಯ ಹಣ ಬಂದಿದೆಯೋ? ಇಲ್ಲವೋ? ಪರಿಶೀಲಿಸಲು ಹೀಗೆ ಮಾಡಿ…

    ಪಂಚಾಯ್ತಿ ಪ್ರಗತಿಗೆ ರೇಟಿಂಗ್: 20 ಅಂಶಗಳ ಅಳತೆಗೋಲು;  ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts