More

    ಅನ್ನಭಾಗ್ಯ ಯೋಜನೆಯ 5 ಕೆಜಿಯ ಹಣ ಬಂದಿದೆಯೋ? ಇಲ್ಲವೋ? ಪರಿಶೀಲಿಸಲು ಹೀಗೆ ಮಾಡಿ…

    ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರ ಜುಲೈ 1ರಿಂದ ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿದೆ. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವ ಯೋಜನೆ ಇದಾಗಿದೆ. ಆದರೆ, ಅಕ್ಕಿ ದಾಸ್ತಾನು ಕೊರತೆಯಿಂದ 5 ಕೆಜಿ ಅಕ್ಕಿ ನೀಡಿ, ಇನ್ನುಳಿದ ಐದು ಕೆಜಿ ಅಕ್ಕಿಯ ಬದಲು ಹಣ ನೀಡಲು ಸರ್ಕಾರ ನಿರ್ಧರಿಸಿ, ಈಗಾಗಲೇ ಹಣ ವಿತರಿಸುತ್ತಿದೆ.

    ಹಣ ನೀಡುವುದು ತಾತ್ಕಾಲಿಕವಷ್ಟೇ ಅಕ್ಕಿ ಕೊರತೆ ಸಮಸ್ಯೆ ನೀಗಿದ ಬಳಿಕ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಸದ್ಯಕ್ಕೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ ತಲಾ 170 ರೂಪಾಯಿಯನ್ನು ನೀಡಲಾಗುತ್ತಿದೆ. ಹಣ ವಿತರಣೆಗೆ ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಈಗಾಗಲೇ ಕೆಲವರು ಹಣ ಪಡೆದುಕೊಂಡಿದ್ದಾರೆ. ಒಂದು ವೇಳೆ ನಿಮ್ಮ ಖಾತೆಗೆ ಹಣ ಇನ್ನು ಬಂದಿಲ್ಲವಾದರೆ, ನಿಮ್ಮ ಕಾರ್ಡಿಗೆ ಹಣ ಬಿಡುಗಡೆಯಾಗಿದೆಯೇ ಎಂಬುದನ್ನು ನೀವು ಪರಿಶೀಲಿಸಿಕೊಳ್ಳಬಹುದಾಗಿದೆ.

    ಇದನ್ನೂ ಓದಿ: ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?

    ಈ ರೀತಿ ಪರಿಶೀಲಿಸಿ

    ಹಣ ಪರಿಶೀಲಿಸಿಕೊಳ್ಳಲು ನೀವು ಮಾಡಬೇಕಾಗಿರುವುದಿಷ್ಟೇ, ಆಹಾರ ಇಲಾಖೆಯ ವೆಬ್​ಸೈಟ್​ https://ahara.kar.nic.in/lpg ಕ್ಲಿಕ್ ಮೇಲೆ ಮಾಡಿ. ಬಳಿಕ ನಿಮಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕಂದಾಯ ವಲಯವಾರು ಮೂರು ವಿಭಾಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಯಾವ ವಿಭಾಗದಲ್ಲಿದೆ ಎಂಬುವುದನ್ನು ಗುರುತಿಸಿ, ಬಳಿಕ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನಂತರ ಮತ್ತೊಂದು ಪುಟ ತೆರೆದುಕೊಳುತ್ತದೆ. ಅದರಲ್ಲಿ ನಗದು ವರ್ಗಾವಣೆಯ ಸ್ಥಿತಿ (Statu of Debit) ಎಂಬ ಆಪ್ಷನ್​ ಮೇಲೆ ಕ್ಲಿಕ್​ ಮಾಡಿ. ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಆನಂತರ ವರ್ಷ, ತಿಂಗಳು ಮತ್ತು ರೇಷನ್​ ಕಾರ್ಡ್​ ನಂಬರ್​ ಎಂಬ ಮೂರು ಕಾಲಂ ಇರುತ್ತದೆ. ವರ್ಷ 2023, ತಿಂಗಳು ಜುಲೈ ಮತ್ತು ನಿಮ್ಮ ರೇಷನ್​ ಕಾರ್ಡ್​ ನಂಬರ್​ ನಮೂದಿಸಿ GO ಎಂಬ ಆಪ್ಷನ್​ ಮೇಲೆ ಕ್ಲಿಕ್​ ಮಾಡಿದರೆ, ನಿಮ್ಮ ರೇಷನ್​ ಕಾರ್ಡ್​ನಲ್ಲಿರುವ ಮನೆಯ ಯಜಮಾನಿ ಅಥವಾ ಯಜಮಾನನ ಹೆಸರು, ಆಧಾರ್​ಕಾರ್ಡ್​ ನಂಬರ್​ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ ಅಕ್ಕಿಯ ಪ್ರಮಾಣ ಮತ್ತು ನಿಮಗೆ ಬಂದಿರುವ ಮೊತ್ತವನ್ನು ತೋರಿಸುತ್ತದೆ.

    ಇನ್ನು ಅನ್ನಭಾಗ್ಯ ಯೋಜನೆಯನ್ನು ಬಡವರು ಮತ್ತು ನಿರ್ಗತಿಕರಿಗಾಗಿ ರೂಪಿಸಲಾಗಿದೆ. ಆದರೆ, ಆರ್ಥಿಕ ಸ್ಥಿತಿವಂತರೂ ಕೂಡ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಕ್ಕೆ ಗಮನಕ್ಕೆ ಬಂದಿದ್ದು, ಅನರ್ಹ ರೇಷನ್ ಕಾರ್ಡ್ ರದ್ದುಗೊಳಿಸುವ ಹಿನ್ನಲೆಯಲ್ಲಿ ರೇಷನ್​ ಕಾರ್ಡ್​ ಅನ್ನು ಆಧಾರ್​ಗೆ ಲಿಂಕ್ ಮಾಡಲಾಗುತ್ತಿದೆ. ರೇಷನ್​ ಕಾರ್ಡ್​ ಮಾತ್ರವಲ್ಲದೆ, ಬ್ಯಾಂಕ್‌ ಖಾತೆಗೂ ಆಧಾರ್ ಲಿಂಕ್‌ ಕಡ್ಡಾಯವಾಗಿ ಆಗಿರಬೇಕು. ಮನೆಯ ಮುಖ್ಯಸ್ಥರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಮನೆ ಯಜಮಾನಿಯ ಹೆಸರಿನಲ್ಲಿ ಬ್ಯಾಂಕ್‌ ಅಕೌಂಟ್ ಖಾತೆ ಇರಬೇಕು, ಒಂದು ವೇಳೆ ಮನೆಯ ಮುಖ್ಯಸ್ಥರು ಇಲ್ಲದೇ ಹೋದಲ್ಲಿ, ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬರ ಹೆಸರಿನಲ್ಲಿ ಖಾತೆ ಆಧಾರ್ ಲಿಂಕ್ ಆಗಿರಬೇಕು ಎಂದು ಸರ್ಕಾರ ಹೇಳಿದೆ.

    ಇದನ್ನೂ ಓದಿ: VIDEO| ಮುಸ್ಲಿಂ ಕಂಡಕ್ಟರ್​ ಧರಿಸಿದ್ದ ಟೋಪಿ ತೆಗೆಸಿದ ಮಹಿಳೆ; ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು

    ಆನ್‌ಲೈನ್‌ನಲ್ಲಿ ಹೀಗೆ ಲಿಂಕ್ ಮಾಡಿ

    ಆಹಾರ ಇಲಾಖೆಯ ವೆಬ್​ಸೈಟ್ https://ahara.kar.nic.in/lpg ಲಿಂಕ್​ ಮಾಡಿದರೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕಂದಾಯ ವಲಯವಾರು ಮೂರು ವಿಭಾಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಯಾವ ವಿಭಾಗದಲ್ಲಿದೆ ಎಂಬುವುದನ್ನು ಗುರುತಿಸಿ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನಂತರ ಮತ್ತೊಂದು ಪುಟ ತೆರೆದುಕೊಳುತ್ತದೆ. ಅದರಲ್ಲಿ UID Linking for RC Members ಆಕ್ಷನ್ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ Aadhaar Number ಮತ್ತು Virtul Id ಎಂದು ಎರಡು ಆಪ್ಪನ್‌ಗಳಿದ್ದು, ಆ ಪೈಕಿ Aadhaar Number ಮೇಲೆ ಟಿಕ್ ಮಾಡಿ, ಆಧಾರ್ ನಂಬರ್ ಹಾಕಿ GO ಮೇಲೆ ಕ್ಲಿಕ್ ಮಾಡಿ, ನಂತರ OTP ಆಪ್ಪನ್ ಬರುತ್ತದೆ. ನಿಮ್ಮ ಮೊಬೈಲ್‌ಗೆ ಬರುವ OTP ನಮೂದಿಸಿ ಯಥಾಪ್ರಕಾರ GO ಮೇಲೆ ಕ್ಲಿಕ್ ಮಾಡಿದರೆ aadhar card number linked successfully ಎಂಬ ಮೆಸೇಜ್ ಆದ ಮಾಹಿತಿ ಸಿಗುತ್ತದೆ. ಇದಲ್ಲದೆ, ಸಮೀಪದ ಪಡಿತರ ಕಚೇರಿಗೆ ಹೋಗಿ ಉಚಿತವಾಗಿ ಆಧಾರ್ ನಂಬರ್ ಅನ್ನು ರೇಷನ್​ ಕಾರ್ಡ್​ ಜತೆ ಲಿಂಕ್ ಮಾಡಬಹುದು.

    ಭ್ರಷ್ಟಾಚಾರ ದಾಖಲೆ ಸಿಎಂಗೆ ನೀಡುವೆ: ಸದನದಲ್ಲಿ ಕುಮಾರಸ್ವಾಮಿ ಹೇಳಿಕೆ; ಎಲೆಕ್ಷನ್ ಸೋಲು ಹೊಸದಲ್ಲವೆಂದ ಮಾಜಿ ಸಿಎಂ

    ರಿಯಾಯಿತಿ ಬೆಲೆಗೆ ಟೊಮ್ಯಾಟೊ ಮಾರಾಟ; ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಲ್ಲಿ ನಾಫೆಡ್, ಎನ್​ಸಿಸಿಎಫ್ ಮೂಲಕ ಖರೀದಿ

    ಪಂಚಾಯ್ತಿ ಪ್ರಗತಿಗೆ ರೇಟಿಂಗ್: 20 ಅಂಶಗಳ ಅಳತೆಗೋಲು;  ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts