More

    ಸಸ್ಯಕಾಶಿ ಲಾಲ್​​​​​ಬಾಗ್‌ನಲ್ಲಿ ಆಗಸ್ಟ್‌ 4ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ; ಈ ಬಾರಿ ಥೀಮ್ ಏನು?


    ಬೆಂಗಳೂರು: ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್‌ 4ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಸ್ಯಕಾಶಿ ಲಾಲ್ ಬಾಗ್‌ನಲ್ಲಿ ಈ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಕೆಂಗಲ್ ಹನುಮಂತಯ್ಯ ಅವರ ಕುರಿತಾದ ಪರಿಕಲ್ಪನೆಯಡಿ ಪ್ರದರ್ಶನ ಏರ್ಪಡಿಸಲು ನಿರ್ಧಾರ ಮಾಡಲಾಗಿದೆ.
    10 ಲಕ್ಷ ಜನಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದ್ದು, ತೋಟಗಾರಿಕೆ ಇಲಾಖೆಯಿಂದ ಸುಮಾರು 22 ಕೋಟಿ ವೆಚ್ಚದಲ್ಲಿ ಪ್ರದರ್ಶನ ಆಯೋಜಿಸಲಾಗುತ್ತದೆ. ಆ.4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ, ಡಿ.ಕೆ.ಶಿವಕುಮಾ‌ರ್​​​​ರಿಂದ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತದೆ.

    ಇದನ್ನೂ ಓದಿ: ಕುರ್ಕುರೆಯನ್ನು ತೊಳೆದು ತಿನ್ನುತ್ತಾರಂತೆ ಉರ್ಫಿ ಜಾವೇದ್! ಯಾಕೆ ಗೊತ್ತಾ?

    ವಿಧಾನಸೌಧ ನಿರ್ಮಾಣಕ್ಕೆ ಕೊಡುಗೆ ಸೇರಿದಂತೆ ಕರ್ನಾಟಕಕ್ಕೆ ಕೆಂಗಲ್ ಹನುಮಂತಯ್ಯ ಅವರ ಕೊಡುಗೆ ಕುರಿತಾದ ಪರಿಕಲ್ಪನೆಯಡಿ ಪ್ರದರ್ಶನವಿರಲಿದೆ. ಜೊತೆಗೆ ಮೈಸೂರು ರಾಜ್ಯ ನಾಮಕರಣವಾಗಿ 50 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಹೆಸರಿನಡಿ ಅರಿವು ಕಾರ್ಯಕ್ರಮವಿರಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಅರಿವು ಕಾರ್ಯಕ್ರಮ ನಡೆಯಲಿದೆ.

    ಇದನ್ನೂ ಓದಿ: ಅಭಿಮಾನಿಯೊಬ್ಬ ಫೋನ್ ಕಿತ್ತುಕೊಳ್ಳಲು ಯತ್ನಿಸಿದಾಗ ಕೂಲ್ ಆಗಿಯೇ ಪರಿಸ್ಥಿತಿ ನಿಭಾಯಿಸಿದ ರಶ್ಮಿಕಾ ಮಂದಣ್ಣ

    ಕಳೆದ ಬಾರಿಯಂತೆ ಮೈಸೂರು ಉದ್ಯಾನ ಕಲಾ ಸಂಘವನ್ನು ಹೊರಗಿಟ್ಟು, ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಗುಲಾಬಿ, ಆಂಥೋನಿ, ಜರ್ಬೇರಾ, ಆರ್ಕಿಡ್, ನಂದಿ ಗಿರಿಧಾಮದ ಇಂಟೇಷನ್, ಮೊಗಳು, ರೆಡ್ ಹಾಟ್ ಫೋಕರ, ಆಲ್‌ಸ್ಟೋಮೇರಿಯನ್ ಲಿಲ್ಲಿಯಿಂದ ಆಕೃತಿ ರಚಿಸಲಾಗುತ್ತಿದ್ದು, ಪೂಷಿಯಾ, ಕ್ಯಾಲಾಲಲ್ಲಿ ಸುಗಂಧರಾಜ ಸೇರಿದಂತೆ ಶಿಟ್ ವಲಯದ ಹೂಗಳು ಕಣ್ಮನ ಸೆಳೆಯಲಿವೆ. ಇಕೆಬಾನ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಗಳ ಪ್ರದರ್ಶನವೂ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts