More

    ಕುರ್ಕುರೆಯನ್ನು ತೊಳೆದು ತಿನ್ನುತ್ತಾರಂತೆ ಉರ್ಫಿ ಜಾವೇದ್! ಯಾಕೆ ಗೊತ್ತಾ?

    ಮುಂಬೈ: ಫ್ಯಾಷನ್ ಮತ್ತು ಸ್ಟೈಲ್​​​ಗೆ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್ ಆಗೊಮ್ಮೆ ಈಗೊಮ್ಮೆ ಸೃಜನಾತ್ಮಕ ಉಡುಪುಗಳನ್ನು ಧರಿಸುತ್ತಾ ಸುದ್ದಿಯಲ್ಲಿರುತ್ತಾರೆ. ಅದು ಪಿಜ್ಜಾ ಬಿಕಿನಿ ಟಾಪ್ ಆಗಿರಬಹುದು, ಟೀ ಬ್ಯಾಗ್‌ಗಳಿಂದ ಮಾಡಿದ ಡ್ರೆಸ್ ಆಗಿರಬಹುದು ಅಥವಾ ಸ್ಕರ್ಟ್ ಮತ್ತು ಹ್ಯಾಂಡ್‌ಬ್ಯಾಗ್ ಬಳಸಿ ಮಾಡಿದ ಟಾಪ್‌ಗಳಾಗಿರಬಹುದು. ಆದರೆ ಈ ಬಾರಿ ಉರ್ಫಿ ಸುದ್ದಿಯಲ್ಲಿರುವುದು ತಮ್ಮ ವಿಶಿಷ್ಟವಾದ ಫ್ಯಾಷನ್‌ ಡ್ರೆಸ್​​ಗಾಗಿ ಅಲ್ಲ, ಆಕೆ ಚಿಪ್ಸ್ ತಿನ್ನುವ ರೀತಿಗೆ. ಹೌದು, ಸದ್ಯ ಉರ್ಫಿ ಚಿಪ್ಸ್ ತಿನ್ನುವ ವಿಡಿಯೋ ವೈರಲ್ ಆಗಿದೆ.

    ಉರ್ಫಿ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಮೊದಲಿಗೆ ಕುರ್ಕುರೆ ಪ್ಯಾಕೆಟ್ ತೆರೆಯುತ್ತಾರೆ. ನಂತರ ಎಲ್ಲವನ್ನೂ ಸ್ಟ್ರೈನರ್ ಮೇಲೆ ಸುರಿದು ನಂತರ, ನೀರಿನ ಅಡಿಯಲ್ಲಿ ತೊಳೆಯುತ್ತಾರೆ. ಕೊನೆಗೆ ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ತಿನ್ನುತ್ತಾರೆ. ಕೊನೆಯಲ್ಲಿ “ನಾನು ಬಾಲ್ಯದಿಂದಲೂ ಹೀಗೆ ಮಾಡುತ್ತಿದ್ದೇನೆ. ಕುರ್ಕುರೆ ತಿನ್ನಲು ಇದು ಉತ್ತಮ ವಿಧಾನ” ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಅಭಿಮಾನಿಯೊಬ್ಬ ಫೋನ್ ಕಿತ್ತುಕೊಳ್ಳಲು ಯತ್ನಿಸಿದಾಗ ಕೂಲ್ ಆಗಿಯೇ ಪರಿಸ್ಥಿತಿ ನಿಭಾಯಿಸಿದ ರಶ್ಮಿಕಾ ಮಂದಣ್ಣ

    ಈ ಪೋಸ್ಟ್ ಅನ್ನು ಕೆಲವೇ ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಉರ್ಫಿ ಪೋಸ್ಟ್ ಮಾಡಿದ ನಂತರ, ಇದನ್ನು ಒಂದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಪೋಸ್ಟ್ ಕೂಡ 14,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಈ ಪೋಸ್ಟ್‌ಗೆ ಹಲವರು ಹಲವು ರೀತಿ ಕಾಮೆಂಟ್ ಕೂಡ ಮಾಡಿದ್ದಾರೆ.
    “ನೀವು ಕುರ್ಕುರೆ ರಾಪರ್​​ನಲ್ಲಿ ಕ್ರಿಯೇಟಿವ್ ಆಗಿರುವ ಉಡುಪನ್ನು ತಯಾರಿಸುತ್ತಿರೇನೋ ಎಂದು ನಾವು ಭಾವಿಸಿದ್ದೆವು”, “ಇದೂ ಒಂದು ಹೊಸ ಸಂಗತಿಯೇ”, “ಗೋಪಿ ಬಹು ನೀನು?” “ಈಗ ನಾನು ಮನನೊಂದಿದ್ದೇನೆ” ಎಂದೆಲ್ಲಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದ ಬಗ್ಗೆ ನಿಮ್ಮ ಅಭಿಪ್ರಾಯವೇನು ನಮಗೆ ಕಾಮೆಂಟ್ ಸೆಕ್ಷನ್​​ನಲ್ಲಿ ತಿಳಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts