More

    ಅಭಿಮಾನಿಯೊಬ್ಬ ಫೋನ್ ಕಿತ್ತುಕೊಳ್ಳಲು ಯತ್ನಿಸಿದಾಗ ಕೂಲ್ ಆಗಿಯೇ ಪರಿಸ್ಥಿತಿ ನಿಭಾಯಿಸಿದ ರಶ್ಮಿಕಾ ಮಂದಣ್ಣ

    ಮುಂಬೈ: ಅಭಿಮಾನಿಯೊಬ್ಬ ಅಸಭ್ಯವಾಗಿ ವರ್ತಿಸಿದಾಗಲೂ ಕೂಲ್ ಆಗಿಯೇ ಇದ್ದ ನಟಿ ರಶ್ಮಿಕಾ ಮಂದಣ್ಣ ವರ್ತನೆ ಇದೀಗ ನೆಟ್ಟಿಗರ ಮನ ಗೆದ್ದಿದೆ. ಹೌದು, ಅಭಿಮಾನಿಯೊಬ್ಬ ತನ್ನ ಫೋನ್ ಕಸಿದುಕೊಳ್ಳಲು ಯತ್ನಿಸಿದಾಗ ರಶ್ಮಿಕಾ ಶಾಂತವಾಗಿ ಪರಿಸ್ಥಿತಿ ನಿಭಾಯಿಸಿದ ರೀತಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಕೊನೆಗೆ ಅಭಿಮಾನಿಯ ವರ್ತನೆಯಿಂದ ಬೇಸರಗೊಳ್ಳದೆ ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ ಇತರ ಅಭಿಮಾನಿಗಳಿಗೆ ರಶ್ಮಿಕಾ ನಗುತ್ತಲೇ ಪೋಸ್ ನೀಡುವುದನ್ನು ಮುಂದುವರೆಸಿದರು.

     

     
     
     
     
     
    View this post on Instagram
     
     
     
     
     
     
     
     
     
     
     

     

    A post shared by Viral Bhayani (@viralbhayani)

    ಇದನ್ನೂ ಓದಿ: ದಳಪತಿ ವಿಜಯ್ ರಾಜಕೀಯ ಪ್ರವೇಶ: ಬೆಂಬಲ ನೀಡಲಿರುವ ರಜಿನಿ ಮತ್ತು ಅಜಿತ್ ಅಭಿಮಾನಿಗಳು

    ಅಂದಹಾಗೆ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿರುವ ರಶ್ಮಿಕಾ, ಕಪ್ಪು ಕುರ್ತಾ ಮತ್ತು ಪ್ರಿಂಟ್ ದುಪಟ್ಟಾವನ್ನು ಧರಿಸಿದ್ದರು. ಅಭಿಮಾನಿಗಳು ಅತಿರೇಕದಿಂದ ವರ್ತಿಸಿದಾಗಲೂ ಅವರ ಮೇಲೆ ರೇಗದೆ ಸಮತೋಲನದಿಂದಿರುವುದು ತುಂಬಾ ಕಷ್ಟಕರ. ಆದರೆ ಈ ವಿಚಾರದಲ್ಲಿ ರಶ್ಮಿಕಾ ನಡೆದುಕೊಂಡ ರೀತಿ ಇದೀಗ ಅಭಿಮಾನಿಗಳು ಕೊಂಡಾಡಲೂ ಕಾರಣವಾಗಿದೆ.

    ಇದನ್ನೂ ಓದಿ:ಬಿಬಿಎಂಪಿಯಲ್ಲಿ ಮೇಜರ್ ಸರ್ಜರಿಗೆ ಮುಂದಾದ ಡಿಸಿಎಂ; ಆರ್​​​ಆರ್ ನಗರ ವಲಯಕ್ಕೆ ನೂತನ ಅಧಿಕಾರಿಗಳ ನೇಮಕ

    ಪ್ರಸ್ತುತ ರಶ್ಮಿಕಾ ಕೈಯ್ಯಲ್ಲಿ ದಕ್ಷಿಣ ಮತ್ತು ಬಾಲಿವುಡ್‌ ಚಿತ್ರಗಳಿವೆ. ರಣಬೀರ್ ಕಪೂರ್ ಮತ್ತು ಅನಿಲ್ ಕಪೂರ್ ನಟಿಸಿರುವ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರೀಕರಣವನ್ನು ಅವರು ಪೂರ್ಣಗೊಳಿಸಿದ್ದಾರೆ. ಇದು ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರಾವ್ ರಮೇಶ್ ಮತ್ತು ಶಾಕುಂತಲಂ ನಟ ದೇವ್ ಮೋಹನ್ ಅಭಿನಯದ ರೇನ್‌ಬೋ ಚಿತ್ರ ಕೂಡ ಅವರ ಬಳಿ ಇದೆ. ಜತೆಗೆ ಎಲ್ಲರ ನಿರೀಕ್ಷೆಯಂತೆ ರಶ್ಮಿಕಾ ಪುಷ್ಪ: ದಿ ರೂಲ್‌ನಲ್ಲಿ ಶ್ರೀವಲ್ಲಿಯಾಗಿ ನಟಿಸುತ್ತಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts